1 Samuel 25

Kannada Bible (GL_KANNADA) vs VC

Sair da comparação
VC Versão Católica
1 ಸಮುವೇಲನು ಸತ್ತುಹೋದನು; ಇಸ್ರಾಯೇಲ್ಯರೆಲ್ಲರೂ ಕೂಡಿಬಂದು ಅವನಿ ಗೋಸ್ಕರ ಗೋಳಾಡಿ ರಾಮದಲ್ಲಿರುವ ಅವನ ಮನೆ ಯಲ್ಲಿ ಅವನನ್ನು ಹೂಣಿಟ್ಟರು. ದಾವೀದನು ಎದ್ದು ಪಾರಾನ್‌ ಅರಣ್ಯಕ್ಕೆ ಹೋದನು.
1 Samuel morreu. Todo o Israel se juntou para chorá-lo. Sepultaram-no na sua propriedade em Ramá. E Davi retirou-se para o deserto de Farã.
2 ಕರ್ಮೆಲಿನಲ್ಲಿ ಸ್ವಾಸ್ತ್ಯಗಳಿರುವ ಮಾವೋನಿನ ವನಾದ ಒಬ್ಬ ಮನುಷ್ಯನಿದ್ದನು. ಆ ಮನುಷ್ಯನು ಬಹು ದೊಡ್ಡವನಾಗಿದ್ದನು; ಅವನಿಗೆ ಮೂರು ಸಾವಿರ ಕುರಿಗಳೂ ಸಾವಿರ ಮೇಕೆಗಳೂ ಇದ್ದವು. ಅವನು ಕರ್ಮೆಲಿನಲ್ಲಿ ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುತ್ತಿ ದ್ದನು.
2 Havia um homem em Maon cujas propriedades estavam em Carmelo. Era um homem muito rico: possuía três mil ovelhas e mil cabras. Ele encontrava-se então em Carmelo para a tosquia de suas ovelhas.
3 ಈ ಮನುಷ್ಯನ ಹೆಸರು ನಾಬಾಲನು; ಅವನ ಹೆಂಡತಿಯ ಹೆಸರು ಅಬೀಗೈಲ್‌. ಆ ಸ್ತ್ರೀಯು ಮಹಾ ಬುದ್ಧಿವಂತೆಯೂ ಸೌಂದರ್ಯವತಿಯೂ ಆಗಿದ್ದಳು. ಆದರೆ ಆ ಮನುಷ್ಯನು--ಕಠಿಣ ಸ್ವಭಾವದವನಾಗಿಯೂ ತನ್ನ ಕ್ರಿಯೆಗಳಲ್ಲಿ ಕೆಟ್ಟವನಾಗಿಯೂ ಇದ್ದನು; ಅವನು ಕಾಲೇಬನ ವಂಶಸ್ಥನು.
3 Chamava-se Nabal, e sua esposa Abigail, mulher de grande inteligência e formosura. Ele, porém, era grosseiro e mau; descendia de Caleb.
4 ನಾಬಾಲನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವ ವರ್ತಮಾನವನ್ನು ದಾವೀದನು ಅರಣ್ಯದಲ್ಲಿ ಕೇಳಿದನು.
4 Davi, no deserto, sabendo que Nabal tosquiava o seu rebanho,
5 ಆಗ ದಾವೀದನು ಹತ್ತು ಮಂದಿ ಯುವಕರನ್ನು ಕಳುಹಿಸಿದನು; ದಾವೀದನು ಅವರಿಗೆ--ನೀವು ಕರ್ಮೆಲಿಗೆ ಹೋಗಿ ನಾಬಾಲನ ಬಳಿಗೆ ಸೇರಿದಾಗ ನನ್ನ ಹೆಸರಿನಿಂದ ಅವನನ್ನು ವಂದಿಸಿ;
5 mandou-lhe dez homens com esta ordem: Subi a Carmelo e dirigi-vos a Nabal,
6 ಅಭಿವೃದ್ಧಿಯಲ್ಲಿ ಬಾಳುವವನಾದ ಅವನಿಗೆ ಹೇಳ ಬೇಕಾದದ್ದೇನಂದರೆ--ನಿನಗೆ ಸಮಾಧಾನವೂ ನಿನ್ನ ಮನೆಗೆ ಸಮಾಧಾನವೂ ನಿನಗೆ ಉಂಟಾದ ಎಲ್ಲಕ್ಕೂ ಸಮಾಧಾನವೂ ಆಗಲಿ.
6 saudando-o em meu nome e dizendo-lhe: Pela vida! A paz seja contigo! Paz à tua casa e paz a todos os teus bens!
7 ನಿನಗೆ ಕುರಿಗಳ ಉಣ್ಣೆಯನ್ನು ಕತ್ತರಿಸುವವರು ಇದ್ದಾರೆಂದು ನಾನು ಕೇಳಿದ್ದೇನೆ. ಆದರೆ ನಮ್ಮ ಸಂಗಡವಿದ್ದ ನಿನ್ನ ಕುರಿ ಕಾಯುವವರು ಕರ್ಮೆಲಿ ನಲ್ಲಿ ಇದ್ದ ದಿವಸಗಳೆಲ್ಲಾ ನಾವು ಅವರನ್ನು ತೊಂದರೆ ಪಡಿಸಲಿಲ್ಲ; ಅವರು ಒಂದನ್ನಾದರೂ ಕಳಕೊಳ್ಳಲಿಲ್ಲ;
7 Soube que há tosquia em tua casa. Ora, os teus pastores estiveram perto de nós e nunca lhes fizemos mal algum. Nada lhes faltou durante todo o tempo que ficaram em Carmelo.
8 ನಿನ್ನ ಯೌವನಸ್ಥರನ್ನು ಕೇಳು, ಅವರೇ ನಿನಗೆ ಹೇಳುವರು. ಆದದರಿಂದ ಈಗ ಈ ಯುವಕರಿಗೆ ನಿನ್ನ ದೃಷ್ಟಿಯಲ್ಲಿ ದಯೆದೊರಕಲಿ; ಒಳ್ಳೇ ದಿವಸದಲ್ಲಿ ನಾವು ಬಂದೆವು. ನಿನ್ನ ಕೈಯಲ್ಲಿ ದೊರಕುವದನ್ನು ನಿನ್ನ ಸೇವಕರಿಗೂ ನಿನ್ನ ಕುಮಾರನಾದ ದಾವೀದನಿಗೂ ದಯಪಾಲಿಸು ಅಂದನು.
8 Pergunta-o aos teus servos e eles to dirão. Que os meus encontrem agora graça aos teus olhos, porque chegamos em um dia de festa. Rogo-te que dês aos teus servos e ao teu filho Davi o que tiveres à mão.
9 ದಾವೀದನ ಯುವಕರು ಬಂದು ಈ ಮಾತುಗಳನ್ನೆಲ್ಲಾ ದಾವೀದನ ಹೆಸರಿನಲ್ಲಿ ನಾಬಾಲನಿಗೆ ಹೇಳಿ ಮೌನವಾದರು.
9 Os homens de Davi foram e repetiram a Nabal todas estas palavras em nome de Davi, e ficaram esperando.
10 ನಾಬಾಲನು ದಾವೀದನ ಸೇವಕರಿಗೆ ಪ್ರತ್ಯುತ್ತರವಾಗಿ--ದಾವೀದನು ಯಾರು? ಇಷಯನ ಮಗನು ಯಾರು? ತಮ್ಮ ಯಜಮಾನನನ್ನು ಬಿಟ್ಟು ಅಗಲಿ ಹೋಗುವ ಸೇವಕರು ಈ ದಿವಸಗಳಲ್ಲಿ ಅನೇಕರು ಇದ್ದಾರೆ.
10 Nabal, porém, respondeu-lhes: Quem é Davi? E quem é o filho de Isaí? Há hoje muitos escravos que fogem da casa de seus senhores!
11 ನಾನು ನನ್ನ ರೊಟ್ಟಿಯನ್ನೂ ನೀರನ್ನೂ ಉಣ್ಣೆಯನ್ನು ಕತ್ತರಿಸುವವ ರಿಗೋಸ್ಕರ ನಾನು ಸಿದ್ಧಮಾಡಿಸಿದ ಮಾಂಸವನ್ನೂ ತೆಗೆದು ಎಲ್ಲಿಯವರೆಂದು ನಾನರಿಯದ ಮನುಷ್ಯರಿಗೆ ಕೊಡುವೆನೋ ಅಂದನು.
11 Irei eu tomar meu pão, minha água e a carne que preparei para os meus tosquiadores, e dá-los a homens que vêm não se sabe de onde?
12 ಹೀಗೆ ದಾವೀದನ ಯುವಕರು ತಮ್ಮ ಮಾರ್ಗವಾಗಿ ಹಿಂದಕ್ಕೆ ತಿರುಗಿ ದಾವೀದನ ಬಳಿಗೆ ಬಂದು ಈ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿದರು.
12 Os servos de Davi retomaram o caminho e voltaram. Ao chegarem, contaram tudo ao seu senhor.
13 ದಾವೀದನು ತನ್ನ ಮನುಷ್ಯ ರಿಗೆ--ನೀವು ಒಬ್ಬೊಬ್ಬನು ತನ್ನ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಳ್ಳಿರಿ ಅಂದನು. ಪ್ರತಿಯೊಬ್ಬನು ತನ್ನ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡನು; ಹಾಗೆಯೇ ದಾವೀದನು ತನ್ನ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡನು. ದಾವೀದನ ಹಿಂದೆ ಹೆಚ್ಚು ಕಡಿಮೆ ನಾನೂರು ಮಂದಿ ಹೋದರು; ಆದರೆ ಇನ್ನೂರು ಮಂದಿ ಸಾಮಗ್ರಿಗಳ ಬಳಿಯಲ್ಲಿ ನಿಂತರು.
13 Então disse Davi aos seus homens: Cinja cada um a sua espada! Todos o fizeram, inclusive Davi. Cerca de quatrocentos homens seguiram Davi, ficando duzentos com as bagagens.
14 ಆಗ ಕೆಲಸದವರಲ್ಲಿ ಯೌವನಸ್ಥನೊಬ್ಬನು ನಾಬಾಲನ ಹೆಂಡತಿಯಾದ ಅಬೀಗೈಲಳಿಗೆ--ಇಗೋ, ನಮ್ಮ ಯಜಮಾನನನ್ನು ವಂದಿಸಲು ದಾವೀದನು ಅರಣ್ಯದಿಂದ ದೂತರನ್ನು ಕಳುಹಿಸಿದನು; ಆದರೆ ಅವನು ಅವರನ್ನು ನಿಂದಿಸಿದನು.
14 Mas Abigail, mulher de Nabal, fora informada por um dos servos de seu marido: Davi mandou, do deserto, mensageiros para saudar o nosso amo, mas ele os recebeu mal.
15 ಆ ಮನುಷ್ಯರು ನಮಗೆ ಬಹಳ ಉಪಕಾರಿಗಳಾಗಿದ್ದರು. ನಾವು ಹೊರಗೆ ಇರುವಾಗ ಅವರು ನಮ್ಮಲ್ಲಿ ಸಂಚರಿಸುತ್ತಿದ್ದ ದಿನ ಗಳೆಲ್ಲಾ ನಾವು ತೊಂದರೆಪಡಲಿಲ್ಲ; ಒಂದನ್ನಾದರೂ ಕಳಕೊಳ್ಳಲಿಲ್ಲ.
15 No entanto, esses homens nos trataram sempre muito bem, e jamais nos fizeram mal algum, nem nos causaram prejuízo durante todo o tempo que estivemos com eles no campo.
16 ಇದಲ್ಲದೆ ಅವರ ಸಂಗಡ ನಾವು ಕುರಿಗಳನ್ನು ಮೇಯಿಸಿಕೊಂಡ ಇದ್ದ ದಿನಗಳೆಲ್ಲಾ ನಮಗೆ ಅವರು ರಾತ್ರಿ ಹಗಲು ಒಂದು ಕೋಟೆಯ ಗೋಡೆ ಯಾಗಿದ್ದರು.
16 Pelo contrário, serviram-nos de defesa, dia e noite, durante todo o tempo em que estivemos com eles apascentando os rebanhos.
17 ಈಗ ನೀನು ಅದಕ್ಕೆ ಮಾಡಬೇಕಾ ದದ್ದೇನೆಂದು ತಿಳುಕೊಂಡು ನೋಡು. ಯಾಕಂದರೆ ಕೇಡು ನಮ್ಮ ಯಜಮಾನನ ಮೇಲೆಯೂ ಅವನ ಮನೆಯೆಲ್ಲಾದರ ಮೇಲೆಯೂ ನಿಶ್ಚಯಿಸಲ್ಪಟ್ಟಿದೆ; ಏನಂದರೆ, ಅವನು ಬೆಲಿಯಾಳನ ಮಗನಾಗಿರುವದ ರಿಂದ ಅವನ ಸಂಗಡ ಯಾವನೂ ಮಾತನಾಡ ಕೂಡದು ಅಂದನು.
17 Vê, pois, o que tens a fazer, porque nosso amo e toda a sua casa está ameaçada de ruína, e ele é um malvado com quem não se pode falar.
18 ಆಗ ಅಬೀಗೈಲಳು ಶೀಘ್ರವಾಗಿ ಇನ್ನೂರು ರೊಟ್ಟಿಗಳನ್ನೂ ಎರಡು ಬುದ್ದಲಿ ದ್ರಾಕ್ಷಾರಸ ವನ್ನೂ ಸಿದ್ಧಪಡಿಸಿದ ಐದು ಕುರಿಗಳ ಮಾಂಸವನ್ನೂ ಐದು ಸೇರು ಹುರಿದ ಕಾಳುಗಳನ್ನೂ ಒಣಗಿದ ನೂರು ದ್ರಾಕ್ಷೇ ಗೊಂಚಲುಗಳನ್ನೂ ಒಣಗಿದ ಇನ್ನೂರು ಅಂಜೂರದ ಉಂಡೆಗಳನ್ನೂ ತೆಗೆದು ಕತ್ತೆಗಳ ಮೇಲೆ ಹೇರಿಸಿಕೊಂಡು
18 Apressou-se então Abigail, e tomou duzentos pães, dois odres de vinho, cinco cordeiros preparados, cinco medidas de grão torrado, cem tortas de uvas secas, duzentas de figos secos, colocando tudo em cima de jumentos.
19 ತನ್ನ ಸೇವಕರಿಗೆ--ನನಗೆ ಮುಂದಾಗಿ ಹೋಗಿರಿ; ಇಗೋ, ನಾನು ನಿಮ್ಮ ಹಿಂದೆ ಬರುವೆನೆಂದು ಹೇಳಿದಳು; ಆದರೆ ತನ್ನ ಗಂಡನಾದ ನಾಬಾಲನಿಗೆ ತಿಳಿಸಲಿಲ್ಲ.
19 E disse aos seus servos: Ide adiante de mim; eu vos seguirei. Mas não disse nada a Nabal, seu marido.
20 ಅವಳು ಒಂದು ಕತ್ತೆಯ ಮೇಲೆ ಹತ್ತಿಕೊಂಡು ಗುಡ್ಡದ ಮರೆಗೆ ಬಂದಾಗ ಇಗೋ, ದಾವೀದನೂ ಅವನ ಮನುಷ್ಯರೂ ಅವಳಿಗೆ ಎದುರಾಗಿ ಇಳಿದು ಬಂದರು. ಅವಳು ಅವರನ್ನು ಎದುರುಗೊಂಡಳು.
20 Quando descia por um caminho secreto da montanha, montada num jumento, encontrou Davi com os seus homens que vinham em sentido inverso.
21 ಆದರೆ ದಾವೀದನು--ಅಡವಿ ಯಲ್ಲಿದ್ದ ಇವನ ಎಲ್ಲಾದರಲ್ಲಿ ಒಂದಾದರೂ ಕಳಕೊಳ್ಳದ ಹಾಗೆ ನಾನು ಕಾಪಾಡಿದ್ದು ವ್ಯರ್ಥವಾಯಿತು. ಆದರೆ ನಾನು ಮಾಡಿದ ಉಪಕಾರಕ್ಕೆ ಬದಲಾಗಿ ಈಗ ಅವನು ನನಗೆ ಅಪಕಾರ ಮಾಡಿದ್ದಾನೆ.
21 Ora, Davi dissera: Em vão, pois, guardei tudo o que esse homem possuía no deserto, sem que lhe fosse tirada coisa alguma! E ele paga-me o bem com o mal.
22 ಅವನಿಗೆ ಇರುವವ ರೆಲ್ಲರಲ್ಲಿ ಉದಯವಾಗುವವರೆಗೆ ನಾನು ಒಬ್ಬ ಗಂಡ ಸನ್ನು ಉಳಿಸಿದರೆ ದೇವರು ದಾವೀದನ ಶತ್ರುಗಳಿಗೆ ಹೀಗೆಯೂ ಇದಕ್ಕಿಂತ ಅಧಿಕವಾಗಿಯೂ ಮಾಡಲಿ ಅಂದನು.
22 Deus trate com todo o seu rigor os inimigos de Davi! E que ele não me poupe, se de hoje até amanhã eu deixar vivo um só homem de tudo o que pertence a Nabal!
23 ಅಬೀಗೈಲಳು ದಾವೀದನನ್ನು ನೋಡಿದ ಕೂಡಲೇ ಕತ್ತೆಯಿಂದಿಳಿದು ದಾವೀದನಿಗೆ ಎದುರಾಗಿ ಹೋಗಿ ಅವನ ಮುಂದೆ ಬೋರಲು ಬಿದ್ದು ನೆಲಕ್ಕೆ ಎರಗಿ ಅವನ ಪಾದಗಳ ಮೇಲೆ ಬಿದ್ದು--ನನ್ನ ಒಡೆ ಯನೇ, ಈ ಅಕ್ರಮವು ನನ್ನ ಮೇಲೆಯೇ ಇರಲಿ.
23 Quando Abigail avistou Davi, desceu prontamente do jumento e prostrou-se com o rosto por terra diante dele.
24 ದಯಮಾಡಿ ನಿನ್ನ ದಾಸಿಯನ್ನು ಮಾತಾಡಗೊಡಿಸಿ ನಿನ್ನ ದಾಸಿಯ ಮಾತುಗಳನ್ನು ಕೇಳು.
24 Assim prostrada aos seus pés, disse-lhe: Sobre mim, meu senhor, caia a culpa! Deixa falar a tua serva e ouve suas palavras.
25 ನನ್ನ ಒಡೆಯನು, ದಯಮಾಡಿ ಬೆಲಿಯಾಳನ ಈ ಮನುಷ್ಯ ನಾದ ನಾಬಾಲನ ಮೇಲೆ ಗಮನ ಇಡದೆ ಇರಲಿ. ಯಾಕಂದರೆ ಅವನ ಹೆಸರು ಹೇಗೋ ಹಾಗೆಯೇ ಅವನು ನಾಬಾಲನೆಂಬ ಹೆಸರುಳ್ಳವನು, ಮೂರ್ಖ ತನವು ಅವನ ಸಂಗಡ ಇರುವದು. ಆದರೆ ನನ್ನ ಒಡೆಯನಾದ ನೀನು ಕಳುಹಿಸಿದ ನಿನ್ನ ಯೌವನಸ್ಥರನ್ನು ನಿನ್ನ ದಾಸಿಯಾದ ನಾನು ನೋಡಲಿಲ್ಲ.
25 Que o meu senhor não faça caso desse malvado Nabal, pois ele é bem o que o seu nome indica: Nabal, louco; e ele o é. Mas eu, tua escrava, não vi os homens que o meu senhor mandou.
26 ಆದಕಾರಣ ನನ್ನ ಒಡೆಯನೇ, ನೀನು ರಕ್ತ ಚೆಲ್ಲುವದಕ್ಕೂ ನಿನ್ನ ಕೈಯಿಂದ ನಿನಗೆ ಮುಯ್ಯಿ ತೀರಿಸಿಕೊಳ್ಳುವದಕ್ಕೂ ಹೋಗುವದನ್ನು ದೇವರು ಆಟಂಕ ಮಾಡಿದ್ದರಿಂದ ಕರ್ತನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಿನ್ನ ಶತ್ರುಗಳೂ ನನ್ನ ಒಡೆಯನಿಗೆ ಕೇಡನ್ನು ಹುಡುಕು ವವರೂ ನಾಬಾಲನ ಹಾಗೆಯೇ ಆಗಲಿ.
26 Agora, por Deus e por tua vida: foi o Senhor quem te impediu de derramar sangue e de te vingar por tua mão. Sejam como Nabal os teus inimigos e os que procuram fazer mal ao meu senhor.
27 ಈಗ ನಿನ್ನ ದಾಸಿಯು ನನ್ನ ಒಡೆಯನಿಗೆ ತಕ್ಕೊಂಡು ಬಂದ ಈ ಆಶೀರ್ವಾದವು ನನ್ನ ಒಡೆಯನನ್ನು ಹಿಂಬಾಲಿಸುವ ಯೌವನಸ್ಥರಿಗೆ ಕೊಡಲ್ಪಡಲಿ.
27 Aceita, pois, este presente que tua serva trouxe ao meu senhor, e reparte-o entre os homens que te seguem.
28 ನೀನು ದಯಮಾಡಿ ನಿನ್ನ ದಾಸಿಯದ್ರೋಹವನ್ನು ಮನ್ನಿಸಬೇಕು; ನನ್ನ ಒಡೆಯನು ಕರ್ತನ ಯುದ್ಧಗಳನ್ನು ನಡೆಸುತ್ತಾನೆ; ನಿನ್ನ ದಿನಗಳಲ್ಲಿ ನಿನ್ನ ಬಳಿಯಲ್ಲಿ ಕೆಟ್ಟತನವು ಕಂಡುಹಿಡಿ ಯಲ್ಪಟ್ಟದ್ದಿಲ್ಲ; ಆದದರಿಂದ ಕರ್ತನು ನನ್ನ ಒಡೆಯನಿಗೆ ಸ್ಥಿರವಾದ ಮನೆಯನ್ನು ಖಂಡಿತವಾಗಿ ಮಾಡುವನು.
28 Rogo-te que perdoes a culpa de tua serva. Certamente o Senhor dará à casa de meu senhor uma existência durável, porque o meu senhor combate nas guerras de Deus, e nenhum mal te atingirá em todos os dias de tua vida.
29 ಈಗ ನಿನ್ನನ್ನು ಹಿಂದಟ್ಟಿ ನಿನ್ನ ಪ್ರಾಣವನ್ನು ಹುಡು ಕುವದಕ್ಕೆ ಒಬ್ಬನು ಎದ್ದಿದ್ದಾನೆ; ಆದರೂ ನನ್ನ ಒಡೆ ಯನ ಪ್ರಾಣವು ದೇವರಾದ ಕರ್ತನ ಬಳಿಯ ಜೀವದ ಕಟ್ಟಿನಲ್ಲಿ ಕಟ್ಟಲ್ಪಟ್ಟಿರುವದು; ನಿನ್ನ ಶತ್ರುಗಳ ಪ್ರಾಣವನ್ನು ಕವಣೆಯ ಮಧ್ಯದಲ್ಲಿಟ್ಟು ಎಸೆದ ಹಾಗೆಯೇ ಆತನು ಎಸೆದು ಬಿಡುವನು.
29 Se alguém te perseguir ou conspirar contra a tua vida, a alma de meu senhor será guardada no escrínio dos vivos junto do Senhor, teu Deus, enquanto a vida de teus inimigos será lançada pelo Senhor ao longe, como a pedra de uma funda.
30 ಇದಲ್ಲದೆ ನನ್ನ ಒಡೆಯನಾದ ನಿನ್ನನ್ನು ಕುರಿತು ಕರ್ತನು ಹೇಳಿದ ಒಳ್ಳೇದನ್ನೆಲ್ಲಾ ನಿನಗೆ ಮಾಡಿ ನಿನ್ನನ್ನು ಇಸ್ರಾಯೇಲ್ಯರ ಮೇಲೆ ನಾಯಕನಾಗಿ ನೇಮಿಸಿದಾಗ ಏನಾಗುವ ದಂದರೆ, ನೀನು ಸುಮ್ಮನೆ ರಕ್ತ ಚೆಲ್ಲಿದ್ದೂ ನನ್ನ ಒಡೆಯನು ತನಗೆ ತಾನೇ ಮುಯ್ಯಿ ತೀರಿಸಿಕೊಂಡದ್ದೂ ನಿನಗೆ ವ್ಯಥೆಯಾಗಿರುವದಿಲ್ಲ;
30 Quando o Senhor tiver feito ao meu senhor todo o bem que lhe prometeu, e te tiver estabelecido chefe sobre Israel,
31 ನನ್ನ ಒಡೆಯನ ಹೃದಯಕ್ಕೆ ಅಪರಾಧವಾಗಿರುವದಿಲ್ಲ. ಆದರೆ ನನ್ನ ಒಡೆಯನಿಗೆ ಕರ್ತನು ಚೆನ್ನಾಗಿ ನಡೆಸಿದಾಗ ನಿನ್ನ ದಾಸಿಯನ್ನು ಜ್ಞಾಪಕಮಾಡಿಕೊಳ್ಳಬೇಕು ಅಂದಳು.
31 não terás no coração este pesar, nem este remorso de ter derramado sangue sem motivo e de se ter vingado por si mesmo! Quando o Senhor te tiver feito bem, ó meu Senhor, lembra-te de tua serva.
32 ಆಗ ದಾವೀದನು ಅಬೀಗೈಲಳಿಗೆ--ನನ್ನನ್ನು ಎದುರು ಗೊಳ್ಳುವದಕ್ಕೆ ಈ ಹೊತ್ತು ನಿನ್ನನ್ನು ಕಳುಹಿಸಿದ ಇಸ್ರಾ ಯೇಲಿನ ದೇವರಾದ ಕರ್ತನಿಗೆ ಸ್ತೋತ್ರವಾಗಲಿ.
32 Davi respondeu a Abigail: Bendito seja o Senhor, Deus de Israel, que te mandou hoje ao meu encontro!
33 ನಿನ್ನ ಬುದ್ಧಿಮಾತು ಆಶೀರ್ವದಿಸಲ್ಪಡಲಿ. ನಾನು ರಕ್ತ ಚೆಲ್ಲುವದನ್ನೂ ನನ್ನ ಕೈಯಿಂದ ನಾನೇ ಮುಯ್ಯಿ ತೀರಿಸದಂತೆಯೂ ಈ ಹೊತ್ತು ನನ್ನನ್ನು ಆಟಂಕಪಡಿ ಸಿದ ನಿನಗೆ ಆಶೀರ್ವಾದವಾಗಲಿ.
33 Bendita seja a tua prudência! E bendita sejas tu mesma, que me impediste hoje de derramar sangue e vingar-me pela minha mão!
34 ನಿನಗೆ ಕೇಡು ಮಾಡದ ಹಾಗೆ ನನಗೆ ಆಟಂಕ ಮಾಡಿದ ಇಸ್ರಾ ಯೇಲಿನ ದೇವರಾದ ಕರ್ತನ ಜೀವದಾಣೆ, ನೀನು ಬೇಗನೆ ಬಂದು ನನ್ನನ್ನು ಎದುರುಗೊಳ್ಳದೆ ಹೋಗಿದ್ದರೆ ಉದಯವಾಗುವಷ್ಟರಲ್ಲಿ ನಾಬಾಲನಿಗೆ ಒಬ್ಬನಾದರೂ ಉಳಿಯುತ್ತಿರಲಿಲ್ಲ ಅಂದನು.
34 Mas, pelo Senhor, Deus de Israel, que me impediu de te fazer mal, se não tivesses vindo tão depressa ao meu encontro, nada teria ficado de Nabal até amanhã cedo, nem mesmo o último homem!
35 ಅವಳು ತನಗೆ ತಂದ ದ್ದನ್ನು ದಾವೀದನು ಅವಳ ಕೈಯಿಂದ ತಕ್ಕೊಂಡು ಅವಳಿಗೆ--ನೀನು ಸಮಾಧಾನವಾಗಿ ನಿನ್ನ ಮನೆಗೆ ಹೋಗು; ಇಗೋ, ನಾನು ನಿನ್ನ ಮಾತನ್ನು ಕೇಳಿ ನಿನ್ನ ವಿಜ್ಞಾಪನೆಯನ್ನು ಅಂಗೀಕರಿಸಿದೆನು ಅಂದನು.
35 Davi aceitou o que lhe trazia Abigail e ajuntou: Volta em paz para a tua casa. Vê que te ouvi e te fiz boa acolhida.
36 ತರುವಾಯ ಅಬೀಗೈಲಳು ನಾಬಾಲನ ಬಳಿಗೆ ಬಂದಾಗ ಇಗೋ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸ ಗೊಂಡಿತ್ತು. ಆದಕಾರಣ ಅವಳು ಉದಯವಾಗುವ ವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ ಹೆಚ್ಚಾದದ್ದ ನ್ನಾಗಲಿ ತಿಳಿಸಲಿಲ್ಲ.
36 Quando Abigail chegou à casa de Nabal, havia em sua casa um grande banquete, um verdadeiro festim de rei. Nabal tinha o coração alegre e estava completamente ébrio. Por isso nada lhe disse, nem pouco nem muito, até ao amanhecer.
37 ಉದಯದಲ್ಲಿ ನಾಬಾಲನಿಗೆ ದ್ರಾಕ್ಷಾರಸದ ಅಮಲು ಇಳಿದಾಗ ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು ಏನಾಯಿತಂದರೆ, ಅವನ ಹೃದಯವು ಅವನಲ್ಲಿ ಸತ್ತು ಅವನು ಕಲ್ಲಿನ ಹಾಗಾದನು.
37 Mas pela manhã, tendo Nabal curtido o seu vinho, sua mulher contou-lhe tudo. Seu coração gelou-se no peito e ele tornou-se como uma pedra.
38 ಹೆಚ್ಚು ಕಡಿಮೆ ಹತ್ತು ದಿವಸಗಳಾದ ತರುವಾಯ ಏನಾಯಿತಂದರೆ, ಕರ್ತನು ನಾಬಾಲನನ್ನು ಹೊಡೆದದ್ದರಿಂದ ಅವನು ಸತ್ತನು.
38 Dez dias depois Nabal, ferido pelo Senhor, morreu.
39 ನಾಬಾಲನು ಸತ್ತನೆಂದು ದಾವೀದನು ಕೇಳಿದಾಗ ನನ್ನ ನಿಂದೆಯ ವ್ಯಾಜ್ಯವನ್ನು ನಾಬಾಲನಿಂದ ವಿಚಾರಿಸಿ ತನ್ನ ಸೇವಕ ನನ್ನು ಕೇಡುಮಾಡಗೊಡದ ಹಾಗೆ ಆಟಂಕಿಸಿದ ಕರ್ತನು ಸ್ತುತಿ ಹೊಂದಲಿ; ಯಾಕಂದರೆ ಕರ್ತನು ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆ ಬರಮಾಡಿದನು ಅಂದನು. ದಾವೀದನು ಅಬೀಗೈಲ ಳನ್ನು ತನಗೆ ಹೆಂಡತಿಯಾಗಿ ತಕ್ಕೊಳ್ಳುವದಕ್ಕಾಗಿ ಅವಳ ಸಂಗಡ ಮಾತನಾಡ ಕಳುಹಿಸಿದನು.
39 Tendo Davi notícia da morte de Nabal, exclamou: Bendito seja o Senhor que me fez justiça do ultraje recebido de sua mão, e impediu-me de fazer-lhe mal! O Senhor fez cair sobre sua cabeça a sua própria maldade! Depois disso Davi mandou propor a Abigail tornar-se sua mulher.
40 ದಾವೀದನ ಸೇವಕರು ಕರ್ಮೆಲಿನಲ್ಲಿರುವ ಅಬೀಗೈಲಳ ಬಳಿಗೆ ಬಂದಾಗ ಅವಳಿಗೆ--ದಾವೀದನು ನಿನ್ನನ್ನು ತನಗೆ ಹೆಂಡತಿಯಾಗಿ ತಕ್ಕೊಳ್ಳುವದಕ್ಕಾಗಿ ನಮ್ಮನ್ನು ನಿನ್ನ ಬಳಿಗೆ ಕಳುಹಿಸಿದನೆಂದು ಹೇಳಿದರು.
40 Seus servos, chegando a Carmelo, disseram-lhe: Davi mandou-nos a ti, porque deseja tomar-te por mulher.
41 ಆಗ ಅವಳು ಎದ್ದು ಬೋರಲು ಬಿದ್ದು--ಇಗೋ, ನಿನ್ನ ದಾಸಿ ನನ್ನ ಒಡೆ ಯನ ಸೇವಕರ ಪಾದಗಳನ್ನು ತೊಳೆಯುವ ಒಬ್ಬ ಸೇವಕಳಾಗಬೇಕು ಅಂದಳು.
41 Levantou-se então Abigail e prostrou-se com o rosto por terra, dizendo: Eis a tua serva, que será uma escrava para lavar os pés dos servos de meu Senhor.
42 ಅಬೀಗೈಲಳು ಬೇಗನೆ ಎದ್ದು ಕತ್ತೆಯ ಮೇಲೆ ಹತ್ತಿಕೊಂಡು ತನ್ನ ಸಂಗಡ ಇರುವ ಐದು ಮಂದಿ ದಾಸಿಯರನ್ನು ಕರಕೊಂಡು ದಾವೀದನ ಸೇವಕರ ಹಿಂದೆ ಹೋಗಿ ಅವನಿಗೆ ಹೆಂಡತಿ ಯಾದಳು.
42 Levantou-se depressa, montou num jumento e, seguida de cinco moças, partiu com os enviados de Davi para tornar-se sua mulher.
43 ಇದಲ್ಲದೆ ದಾವೀದನು ಇಜ್ರೇಲು ಊರಿನವಳಾದ ಅಹೀನೋವಮಳನ್ನು ತಕ್ಕೊಂಡನು.ಅವರಿಬ್ಬರೂ ಅವನಿಗೆ ಹೆಂಡತಿಯರಾದರು.
43 Davi desposara também Aquinoã, de Jezrael, e ambas foram suas mulheres.
44 ಆದರೆ ಸೌಲನು ದಾವೀದನ ಹೆಂಡತಿಯಾದ ವಿಾಕಲಳೆಂಬ ತನ್ನ ಕುಮಾರ್ತೆಯನ್ನು ಗಲ್ಲೀಮ್‌ ಪಟ್ಟಣದ ಲಯಿಷನ ಮಗನಾದ ಪಲ್ಟೀಗೆ ಕೊಟ್ಟನು.
44 Quanto à sua mulher Micol, filha de Saul, este a tinha dado por esposa a Falti, de Galim, filho de Lais.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 1 Samuel 25, comparar traduções ou montar um estudo — tudo direto pelo WhatsApp.