1 Samuel 21

Kannada Bible (GL_KANNADA) vs NVI

Sair da comparação
NVI Nova Versão Internacional
1 ತರುವಾಯ ದಾವೀದನು ನೋಬ್‌ ಊರಲ್ಲಿದ್ದ ಯಾಜಕನಾದ ಅಹೀಮೆಲೆ ಕನ ಬಳಿಗೆ ಬಂದನು. ಅಹೀಮೆಲೆಕನು ದಾವೀದನನ್ನು ಎದುರುಗೊಳ್ಳಬಂದಾಗ ಹೆದರಿ--ಒಬ್ಬರೂ ನಿನ್ನ ಸಂಗಡ ಬಾರದೆ ನೀನು ಒಂಟಿಯಾಗಿ ಬಂದದ್ದು ಏನೆಂದು ಅವನನ್ನು ಕೇಳಿದನು.
1 Davi foi falar com o sacerdote Aimeleque, em Nobe. Aimeleque tremia quando se encontrou com ele, e perguntou: "Por que você está sozinho? Ninguém veio com você? "
2 ದಾವೀದನು ಯಾಜಕನಾದ ಅಹೀಮೆಲೆಕನಿಗೆ--ಅರಸನು ನನಗೆ ಒಂದು ಕಾರ್ಯವನ್ನು ಆಜ್ಞಾಪಿಸಿ--ನಾನು ಕಳುಹಿಸಿದ ಕಾರ್ಯವು ನಿನಗೆ ಆಜ್ಞಾಪಿಸಿದ್ದು ಇಂಥಾದ್ದೆಂದು ಒಬ್ಬರಿಗೂ ತಿಳಿಯ ಬಾರದೆಂದು ನನಗೆ ಹೇಳಿದನು. ಇಂಥಿಂಥ ಸ್ಥಳಗಳಿಗೆ ಹೋಗಬೇಕೆಂದು ನಾನು ನನ್ನ ಕೆಲಸದವರಿಗೆ ನೇಮಿಸಿದ್ದೇನೆ.
2 Respondeu Davi: "O rei me encarregou de uma certa missão e me disse: ‘Ninguém deve saber coisa alguma sobre sua missão e sobre as suas instruções’. E eu ordenei aos meus soldados que se encontrassem comigo num certo lugar.
3 ಈಗ ನಿನ್ನ ಕೈಯಲ್ಲಿ ಏನಾದರೂ ಉಂಟೋ? ಐದು ರೊಟ್ಟಿಗಳನ್ನಾದರೂ ನಿನಗೆ ದೊರಕಿದ ಯಾವದನ್ನಾದರೂ ನನಗೆ ಕೊಡು ಅಂದನು.
3 Agora, então, o que você pode oferecer-me? Dê-me cinco pães ou algo que tiver".
4 ಯಾಜಕನು ದಾವೀದನಿಗೆ ಪ್ರತ್ಯುತ್ತರ ವಾಗಿ--ಪರಿಶುದ್ಧ ರೊಟ್ಟಿಯ ಹೊರತಾಗಿ ನನ್ನ ಕೈಯಲ್ಲಿ ಬಳಕೆಯಾದ ರೊಟ್ಟಿ ಒಂದಾದರೂ ಇಲ್ಲ; ಯೌವನ ಸ್ಥರು ಸ್ತ್ರೀಯರ ಬಳಿಗೆ ಸೇರದಿದ್ದರೆ ಅದು ಆಗಲಿ ಅಂದನು.
4 O sacerdote, contudo, respondeu a Davi: "Não tenho pão comum; somente pão consagrado; se os soldados não tiveram relações com mulheres recentemente podem comê-lo".
5 ದಾವೀದನು ಯಾಜಕನಿಗೆ ಪ್ರತ್ಯುತ್ತರ ವಾಗಿ--ನಾನು ಹೊರಡುವದಕ್ಕಿಂತ ಮುಂಚೆ ನಿನ್ನೆಯೂ ಮೊನ್ನೆಯೂ ಸ್ತ್ರೀಯರು ನಮಗೆ ದೂರವಾ ಗಿದ್ದರು. ಯೌವನಸ್ಥರ ಪಾತ್ರೆಗಳು ಪರಿಶುದ್ಧವಾಗಿವೆ; ರೊಟ್ಟಿಯು ಈ ಹೊತ್ತು ಪಾತ್ರೆಯಲ್ಲಿ ಪರಿಶುದ್ಧ ಮಾಡಲ್ಪಟ್ಟದ್ದಾಗಿದ್ದರೂ ಅದು ಒಂದು ವಿಧವಾಗಿ ಬಳಕೆಯಾಗಿದೆ ಅಂದನು.
5 Davi respondeu: "Certamente que não, conforme o nosso costume sempre que saio em campanha. Não tocamos em mulher. Esses homens mantém o corpo puro mesmo em missões comuns. Quanto mais hoje! "
6 ಆಗ ಕರ್ತನ ಸನ್ನಿಧಿಯಿಂದ ತೆಗೆದುಕೊಳ್ಳಲ್ಪಟ್ಟ ಸಮ್ಮುಖದ ರೊಟ್ಟಿಗಳ ಹೊರತು ಬೇರೆ ರೊಟ್ಟಿಯು ಅಲ್ಲಿ ಇಲ್ಲದ್ದರಿಂದ ಯಾಜಕನು ಅವನಿಗೆ ಪರಿಶುದ್ಧ ರೊಟ್ಟಿಯನ್ನು ಕೊಟ್ಟನು. ಅವುಗಳನ್ನು ತೆಗೆದುಕೊಳ್ಳುವ ದಿವಸದಲ್ಲಿ ಅವುಗಳಿಗೆ ಬದಲಾಗಿ ಬಿಸಿರೊಟ್ಟಿಗಳು ಇಡಲ್ಪಡುವವು.
6 Então, o sacerdote lhe deu os pães consagrados, visto que não havia outro além do pão da Presença, que era retirado de diante do Senhor e substituído por pão quente no dia em que era tirado.
7 ಆದರೆ ಸೌಲನ ಸೇವಕರಲ್ಲಿ ಎದೋಮ್ಯನಾದ ದೋಯೇಗ ನೆಂಬ ಹೆಸರುಳ್ಳ ಒಬ್ಬನು ಆ ದಿವಸ ಅಲ್ಲಿ ಕರ್ತನ ಮುಂದೆ ತಡೆಯಲ್ಪಟ್ಟಿದ್ದನು. ಅವನು ಸೌಲನ ಹಿಂಡು ಕಾಯುವವರಲ್ಲಿ ಮುಖ್ಯಸ್ಥನಾಗಿದ್ದನು.
7 Aconteceu que um dos servos de Saul estava ali naquele dia, cumprindo seus deveres diante do Senhor; era o edomita Doegue, chefe dos pastores de Saul.
8 ಆಗ ದಾವೀದ ನು ಅಹೀಮೆಲೆಕನಿಗೆ--ನಿನ್ನ ಕೈಯಲ್ಲಿ ಈಟಿಯಾದರೂ ಕತ್ತಿಯಾದರೂ ಇಲ್ಲವೋ? ಯಾಕಂದರೆ ಅರಸನ ಕಾರ್ಯವು ಅವಸರವಾದದ್ದರಿಂದ ನಾನು ನನ್ನ ಕತ್ತಿ ಯನ್ನಾದರೂ ಆಯುಧಗಳನ್ನಾದರೂ ತಕ್ಕೊಂಡು ಬರಲಿಲ್ಲ ಅಂದನು.
8 Davi perguntou a Aimeleque: "Você tem uma lança ou uma espada aqui? Não trouxe minha espada nem qualquer outra arma, pois o rei exigiu urgência".
9 ಅದಕ್ಕೆ ಯಾಜಕನು--ನೀನು ಏಲಾ ತಗ್ಗಿನಲ್ಲಿ ಸಂಹರಿಸಿದ ಫಿಲಿಷ್ಟಿಯನಾದ ಗೊಲ್ಯಾ ತನ ಕತ್ತಿಯನ್ನು ಎಫೋದಿನ ಹಿಂದೆ ಒಂದು ಬಟ್ಟೆ ಯಲ್ಲಿ ಸುತ್ತಿ ಇಟ್ಟಿದೆ. ಅದನ್ನು ನೀನು ತೆಗೆದುಕೊಂಡರೆ ತೆಗೆದುಕೋ ಯಾಕಂದರೆ ಅದು ಒಂದೇ ಅಲ್ಲದೆ ಇಲ್ಲಿ ಬೇರೊಂದು ಇಲ್ಲ ಅಂದನು. ಅದಕ್ಕೆ ದಾವೀದನು ಅದರಂಥದ್ದು ಇನ್ನಿಲ್ಲ; ಅದನ್ನು ನನಗೆ ಕೊಡು ಅಂದನು.
9 O sacerdote respondeu: "A espada de Golias, o filisteu que você matou no vale de Elá, está enrolada num pano atrás do colete sacerdotal. Se quiser, pegue-a; não há nenhuma outra espada". Davi disse: "Não há outra melhor; dê-me essa espada".
10 ದಾವೀದನು ಎದ್ದು ಆ ದಿನ ಸೌಲನ ಭಯದಿಂದ ಗತ್‌ ಊರಿನ ಅರಸನಾದ ಆಕೀಷನ ಬಳಿಗೆ ಓಡಿ ಬಂದನು.
10 Naquele dia, Davi fugiu de Saul e foi procurar Aquis, rei de Gate.
11 ಆಕೀಷನ ಸೇವಕರು ಅವನಿಗೆ--ಇವನು ದೇಶದ ಅರಸನಾದ ದಾವೀದನಲ್ಲವೋ? ಸೌಲನು ಸಾವಿರಗಳನ್ನೂ ದಾವೀದನು ಹತ್ತು ಸಾವಿರಗಳನ್ನೂ ಸಂಹರಿಸಿದನೆಂದು ಇವನನ್ನು ಕುರಿತು ನಾಟ್ಯದಲ್ಲಿ ಒಬ್ಬರಿಗೊಬ್ಬರು ಹಾಡಿದರಲ್ಲವೇ ಅಂದರು.
11 Todavia os conselheiros de Aquis lhe disseram: "Não é este Davi, o rei da terra de Israel? Não é aquele sobre quem cantavam em suas danças: ‘Saul abateu seus milhares, e Davi suas dezenas de milhares’? "
12 ಆಗ ದಾವೀದನು ಈ ಮಾತುಗಳನ್ನು ತನ್ನ ಹೃದಯದಲ್ಲಿ ಇಟ್ಟುಕೊಂಡು ಗತ್‌ ಊರಿನ ಅರಸನಾದ ಆಕೀಷನಿ ಗೋಸ್ಕರ ಮಹಾಭಯಸ್ಥನಾಗಿ
12 Davi levou a sério aquelas palavras e ficou com muito medo de Aquis, rei de Gate.
13 ಅವರ ಕಣ್ಣುಮುಂದೆ ತನ್ನ ಬುದ್ಧಿಯನ್ನು ಮಾರ್ಪಡಿಸಿ ತನ್ನನ್ನು ಹುಚ್ಚನ ಹಾಗೆ ತೋರಮಾಡಿ ದ್ವಾರದ ಕದಗಳನ್ನು ಕೆರೆಯುತ್ತಾ ತನ್ನ ಬಾಯಿಯ ಜೊಲ್ಲನ್ನು ತನ್ನ ಗಡ್ಡದ ಮೇಲೆ ಸುರಿಸಿಕೊಂಡನು.
13 Por isso, na presença deles ele fingiu estar louco; enquanto esteve com eles, agiu como um louco, riscando as portas da cidade e deixando escorrer saliva pela barba.
14 ಆಗ ಆಕೀಷನು ತನ್ನ ಸೇವಕ ರಿಗೆ--ಇಗೋ, ಈ ಮನುಷ್ಯನು ಹುಚ್ಚು ಹಿಡಿದವ ನೆಂದು ನೋಡುತ್ತೀರಲ್ಲಾ. ಇವನನ್ನು ನನ್ನ ಬಳಿಗೆ ಏಕೆ ತೆಗೆದುಕೊಂಡು ಬಂದಿರಿ?
14 Aquis disse a seus conselheiros: "Vejam este homem! Ele está louco! Por que trazê-lo aqui?
15 ಹುಚ್ಚರು ನನಗೆ ಅವಶ್ಯವೆಂದು ಹುಚ್ಚು ಆಟ ಆಡಲು ಇವನನ್ನು ನನ್ನ ಮುಂದೆ ತೆಗೆದುಕೊಂಡು ಬಂದಿರೋ? ಇಂಥವನು ನನ್ನ ಮನೆಯಲ್ಲಿ ಬರಬೇಕೋ ಅಂದನು.
15 Será que me faltam loucos para que vocês o tragam para agir como doido na minha frente? O que ele veio fazer no meu palácio? "

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 1 Samuel 21, comparar traduções ou montar um estudo — tudo direto pelo WhatsApp.