1 Samuel 20
Kannada Bible (GL_KANNADA) vs ARA
ARA Almeida Revista e Atualizada 1993
1 ದಾವೀದನು ರಾಮದ ನಯೋತಿನಿಂದ ಓಡಿಹೋಗಿ ಯೋನಾತಾನನ ಬಳಿಗೆ ಬಂದು ಅವನ ಮುಂದೆ--ನಾನು ಏನು ಮಾಡಿದೆನು? ನನ್ನ ಅಕ್ರಮವೇನು? ನಿನ್ನ ತಂದೆಯು ನನ್ನ ಪ್ರಾಣ ವನ್ನು ತೆಗೆಯುವ ಹಾಗೆ ನಾನು ಅವನಿಗೆ ಮಾಡಿದ ಪಾಪವೇನು ಅಂದನು.
1 Então, fugiu Davi da casa dos profetas, em Ramá, e veio, e disse a Jônatas: Que fiz eu? Qual é a minha culpa? E qual é o meu pecado diante de teu pai, que procura tirar-me a vida?
2 ಅವನು ಇವನಿಗೆ--ಅದು ಆಗಬಾರದು; ನೀನು ಸಾಯುವದಿಲ್ಲ; ಇಗೋ, ನನ್ನ ತಂದೆಯು ನನಗೆ ತಿಳಿಸದೆ ಯಾವ ಚಿಕ್ಕ ಕಾರ್ಯವನ್ನಾದರೂ ದೊಡ್ಡ ಕಾರ್ಯವನ್ನಾದರೂ ಮಾಡುವದಿಲ್ಲ. ಈ ಕಾರ್ಯವನ್ನು ಯಾಕೆ ನನ್ನ ತಂದೆಯು ನನಗೆ ಬಚ್ಚಿಟ್ಟನು? ಹಾಗೆ ಆಗದು ಅಂದನು.
2 Ele lhe respondeu: Tal não suceda; não serás morto. Meu pai não faz coisa nenhuma, nem grande nem pequena, sem primeiro me dizer; por que, pois, meu pai me ocultaria isso? Não há nada disso.
3 ಆಗ ದಾವೀದನು ಪ್ರಮಾಣಮಾಡಿ--ನಿನ್ನ ಕಣ್ಣು ಮುಂದೆ ನನಗೆ ದಯೆದೊರಕೀತೆಂದು ನಿನ್ನ ತಂದೆಯು ನಿಶ್ಚಯವಾಗಿ ಬಲ್ಲನು; ಆದಕಾರಣ ಯೋನಾತಾನನು ವ್ಯಥೆಪಡದ ಹಾಗೆ--ಅವನು ಇದನ್ನು ತಿಳಿಯಬಾರದು ಎಂದು ಅನ್ನುತ್ತಾನೆ. ನಿಶ್ಚಯವಾಗಿ ಕರ್ತನಾಣೆ, ನಿನ್ನ ಪ್ರಾಣದಾಣೆ, ನನಗೂ ಮರಣಕ್ಕೂ ಒಂದು ಹೆಜ್ಜೆ ದೂರ ಮಾತ್ರವದೆ ಅಂದನು.
3 Então, Davi respondeu enfaticamente: Mui bem sabe teu pai que da tua parte achei mercê; pelo que disse consigo: Não saiba isto Jônatas, para que não se entristeça. Tão certo como vive o Senhor , e tu vives, Jônatas, apenas há um passo entre mim e a morte.
4 ಆಗ ಯೋನಾತಾನನು ದಾವೀದನಿಗೆ--ನಿನ್ನ ಪ್ರಾಣವು ಆಶಿಸುವದನ್ನು ನಿನ ಗೋಸ್ಕರ ನಾನು ಮಾಡುವೆನು ಅಂದನು.
4 Disse Jônatas a Davi: O que tu desejares eu te farei.
5 ದಾವೀ ದನು ಯೋನಾತಾನನಿಗೆ--ಇಗೋ, ನಾಳೆ ಅಮಾ ವಾಸ್ಯೆ; ಆದದರಿಂದ ನಾನು ಅರಸನ ಸಂಗಡ ಪಂಕ್ತಿ ಯಲ್ಲಿ ಊಟ ಮಾಡಲೇಬೇಕಾಗಿರುವದು. ನಾನು ಮೂರನೇ ದಿವಸದ ಸಾಯಂಕಾಲದ ವರೆಗೆ ಹೊಲ ದಲ್ಲಿ ಬಚ್ಚಿಟ್ಟುಕೊಂಡಿರಲು ನನ್ನನ್ನು ಹೋಗಗೊಡಿಸು.
5 Disse Davi a Jônatas: Amanhã é a Festa da Lua Nova, em que sem falta deveria assentar-me com o rei para comer; mas deixa-me ir, e esconder-me-ei no campo, até à terceira tarde.
6 ನಿನ್ನ ತಂದೆಯು ನಾನು ಅಲ್ಲಿ ಇಲ್ಲದಿರುವದನ್ನು ನೋಡಿ ಶ್ರದ್ಧೆಯಿಂದ ವಿಚಾರಿಸಿ--ಅವನು ಎಲ್ಲಿ ಎಂದು ಕೇಳಿದರೆ--ದಾವೀದನು ತನ್ನ ಊರಾದ ಬೇತ್ಲೆಹೇಮಿಗೆ ಹೋಗಿ ಬರುವದಕ್ಕೆ ನನ್ನನ್ನು ಬಹಳವಾಗಿ ಬೇಡಿಕೊಂಡನು; ತನ್ನ ಎಲ್ಲಾ ಕುಟುಂಬಕ್ಕೋಸ್ಕರ ವರುಷದ ಯಜ್ಞಮಾಡುತ್ತಾರೆ ಎಂದು ಹೇಳು.
6 Se teu pai notar a minha ausência, dirás: Davi me pediu muito que o deixasse ir a toda pressa a Belém, sua cidade; porquanto se faz lá o sacrifício anual para toda a família.
7 ಅದಕ್ಕೆ ಅವನು --ಒಳ್ಳೇದೆಂದು ಹೇಳಿದರೆ ನಿನ್ನ ಸೇವಕನಿಗೆ ಸಮಾಧಾನ ವಾಗಿರುವದು; ಅವನು ಬಹಳ ಕೋಪಮಾಡಿದರೆ ಅವನಿಂದ ಕೇಡು ಸ್ಥಿರಮಾಡಲ್ಪಟ್ಟಿತೆಂದು ತಿಳುಕೋ.
7 Se disser assim: Está bem! Então, teu servo terá paz. Porém, se muito se indignar, sabe que já o mal está, de fato, determinado por ele.
8 ಆದದರಿಂದ ನೀನು ನಿನ್ನ ಸೇವಕನ ಮೇಲೆ ದಯೆ ತೋರಿಸಬೇಕು; ಯಾಕಂದರೆ ಕರ್ತನ ಒಡಂಬಡಿಕೆ ಯನ್ನು ನಿನ್ನ ಸೇವಕನೊಂದಿಗೆ ಮಾಡಿಕೊಂಡಿದ್ದೀ ಯಲ್ಲಾ. ಆದಾಗ್ಯೂ ನನ್ನಲ್ಲಿ ಅಕ್ರಮವಿದ್ದರೆ ನೀನೇ ನನ್ನನ್ನು ಕೊಂದುಹಾಕು; ನನ್ನನ್ನು ನಿನ್ನ ತಂದೆಯ ಬಳಿಗೆ ಕರೆದುಕೊಂಡು ಹೋಗುವದು ಯಾಕೆ ಅಂದನು.
8 Usa, pois, de misericórdia para com o teu servo, porque lhe fizeste entrar contigo em aliança no Senhor ; se, porém, há em mim culpa, mata-me tu mesmo; por que me levarias a teu pai?
9 ಯೋನಾತಾನನು--ಅದು ನಿನಗೆ ದೂರವಾಗಿರಲಿ; ಯಾಕಂದರೆ ಕೇಡು ನಿನ್ನ ಮೇಲೆ ಬರುವಂತೆ ನನ್ನ ತಂದೆಯಿಂದ ನಿಷ್ಕರ್ಷೆ ಮಾಡಲ್ಪಟ್ಟಿತೆಂದು ನಿಜವಾಗಿ ತಿಳಿದಿದ್ದರೆ ನಾನು ಅದನ್ನು ನಿನಗೆ ತಿಳಿಸದೆ ಇರುವೆನೋ ಅಂದನು.
9 Então, disse Jônatas: Longe de ti tal coisa; porém, se dalguma sorte soubesse que já este mal estava, de fato, determinado por meu pai, para que viesse sobre ti, não to declararia eu?
10 ದಾವೀದನು ಯೋನಾತಾನನಿಗೆ--ನಿನ್ನ ತಂದೆಯು ನಿನಗೆ ಕಠಿಣವಾದ ಪ್ರತ್ಯುತ್ತರ ಹೇಳಿದರೆ ಅದನ್ನು ನನಗೆ ತಿಳಿಸುವವನು ಯಾರು ಅಂದನು.
10 Perguntou Davi a Jônatas: Quem tal me fará saber, se, por acaso, teu pai te responder asperamente?
11 ಯೋನಾತಾನನು ದಾವೀದನಿಗೆ--ನಾವು ಹೊಲಕ್ಕೆ ಹೋಗೋಣ ಬಾ ಅಂದನು. ಹಾಗೆಯೇ ಅವರಿಬ್ಬರು ಹೊಲಕ್ಕೆ ಹೊರಟುಹೋದರು.
11 Então, disse Jônatas a Davi: Vem, e saiamos ao campo. E saíram.
12 ಯೋನಾತಾನನು ದಾವೀದನಿಗೆ--ಇಸ್ರಾಯೇ ಲ್ಯರ ದೇವರಾದ ಕರ್ತನೇ, ನಾನು ನಾಳೆನಾಡಿದ್ದರೊ ಳಗೆ ನನ್ನ ತಂದೆಯನ್ನು ವಿಚಾರಿಸಲು ಇಗೋ, ದಾವೀದನ ಮೇಲೆ ದಯವಾದರೆ ನಿನಗೆ ತಿಳಿಸುವ ಹಾಗೆ ಹೇಳಿ ಕಳುಹಿಸದೆ ಇದ್ದರೆ ಕರ್ತನು ಯೋನಾತಾನನಿಗೆ ಅದಕ್ಕಿಂತ ಅಧಿಕವಾಗಿ ಮಾಡಲಿ.
12 E disse Jônatas a Davi: O Senhor , Deus de Israel, seja testemunha. Amanhã ou depois de amanhã, a estas horas sondarei meu pai; se algo houver favorável a Davi, eu to mandarei dizer.
13 ಆದರೆ ನಿನಗೆ ಕೇಡುಮಾಡಲು ನನ್ನ ತಂದೆಗೆ ಮನಸ್ಸಾಗಿದ್ದರೆ ಅದನ್ನು ನಿನಗೆ ತಿಳಿಸಿ ನೀನು ಸಮಾಧಾನ ದಿಂದ ಹೋಗುವ ಹಾಗೆ ನಿನ್ನನ್ನು ಕಳುಹಿಸುವೆನು.
13 Mas, se meu pai quiser fazer-te mal, faça com Jônatas o Senhor o que a este aprouver, se não to fizer saber eu e não te deixar ir embora, para que sigas em paz. E seja o Senhor contigo, como tem sido com meu pai.
14 ಕರ್ತನು ನನ್ನ ತಂದೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರಲಿ. ಆದರೆ ನಾನು ಇನ್ನೂ ಬದುಕು ತ್ತಿರುವಾಗ ನಾನು ಸಾಯದ ಹಾಗೆ ನೀನು ಕರ್ತನ ದಯೆಯನ್ನು ನನ್ನ ಮೇಲೆ ತೋರಿಸಬೇಕಾದದ್ದಲ್ಲದೆ
14 Se eu, então, ainda viver, porventura, não usarás para comigo da bondade do Senhor , para que não morra?
15 ಕರ್ತನು ದಾವೀದನ ಶತ್ರುಗಳಲ್ಲಿ ಒಬ್ಬನೂ ಇಲ್ಲದ ಹಾಗೆ ಭೂಮಿಯಿಂದ ತೆಗೆದುಬಿಟ್ಟಾಗ ಎಂದಿಗೂ ನಿನ್ನ ಕೃಪೆಯನ್ನು ನನ್ನ ಮನೆಯಿಂದ ತೆಗೆದುಹಾಕಬಾರದು ಅಂದನು.
15 Nem tampouco cortarás jamais da minha casa a tua bondade; nem ainda quando o Senhor desarraigar da terra todos os inimigos de Davi.
16 ಹೀಗೆಯೇ ಯೋನಾತಾನನು ದಾವೀದನ ಮನೆಯ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ದಾವೀದನ ಶತ್ರುಗಳಿಂದ ಕರ್ತನು ಅವಶ್ಯವಾಗಿ ಕೇಳಲಿ ಅಂದನು.
16 Assim, fez Jônatas aliança com a casa de Davi, dizendo: Vingue o Senhor os inimigos de Davi.
17 ಯೋನಾತಾನನು ದಾವೀದನನ್ನು ಪ್ರೀತಿ ಮಾಡಿದ್ದರಿಂದ ತಿರಿಗಿ ಅವನಿಂದ ಪ್ರಮಾಣ ತೆಗೆದುಕೊಂಡನು; ಅವನು ತನ್ನ ಪ್ರಾಣವನ್ನು ಪ್ರೀತಿ ಮಾಡಿದ ಹಾಗೆಯೇ ಅವನನ್ನು ಪ್ರೀತಿ ಮಾಡಿದನು.
17 Jônatas fez jurar a Davi de novo, pelo amor que este lhe tinha, porque Jônatas o amava com todo o amor da sua alma.
18 ಯೋನಾತಾನನು ದಾವೀದನಿಗೆ--ನಾಳೆ ಅಮಾ ವಾಸ್ಯೆ; ನೀನು ಅಲ್ಲಿ ಇಲ್ಲದಿರುವದರಿಂದ ನಿನ್ನ ಸ್ಥಳವು ಬರಿದಾಗಿರುವದು.
18 Disse-lhe Jônatas: Amanhã é a Festa da Lua Nova; perguntar-se-á por ti, porque o teu lugar estará vazio.
19 ನೀನು ಮೂರು ದಿವಸ ತಡೆದ ತರುವಾಯ ಕೆಲಸವು ನಡೆಯುತ್ತಿರುವಾಗ ನೀನು ಬಚ್ಚಿಟ್ಟುಕೊಂಡಿದ್ದ ಸ್ಥಳಕ್ಕೆ ತ್ವರೆಯಾಗಿ ತಿರಿಗಿ ಬಂದು ಏಜಲ್ ಎಂಬ ಕಲ್ಲಿನ ಬಳಿಯಲ್ಲಿ ಕುಳಿತಿರು.
19 Ao terceiro dia, descerás apressadamente e irás para o lugar em que te escondeste no dia do ajuste; e fica junto à pedra de Ezel.
20 ಆಗ ನಾನು ಗುರಿ ಇಟ್ಟವನ ಹಾಗೆ ಅದರ ಕಡೆಗೆ ಮೂರು ಬಾಣಗಳನ್ನು ಎಸೆಯುವೆನು.
20 Atirarei três flechas para aquele lado, como quem atira ao alvo.
21 ಇಗೋ, ಹುಡುಗ ನನ್ನು ಕಳುಹಿಸಿ--ಆ ಬಾಣಗಳನ್ನು ಹುಡುಕಿಕೊಂಡು ಬಾ ಎಂದು ಹೇಳುವೆನು. ಇಗೋ, ಆ ಬಾಣಗಳು ಈಚೆ ಬಿದ್ದಿರುತ್ತವೆ; ಅವುಗಳನ್ನು ತೆಗೆದುಕೊಂಡು ಬಾ ಎಂದು ನಾನು ಹುಡುಗನಿಗೆ ಹೇಳಿದರೆ ನೀನು ಬರ ಬಹುದು. ಯಾಕಂದರೆ ಕರ್ತನಾಣೆ, ನಿನಗೆ ಕೇಡಿಲ್ಲದೆ ಸಮಾಧಾನವಿರುವದು.
21 Eis que mandarei o moço e lhe direi: Vai, procura as flechas; se eu disser ao moço: Olha que as flechas estão para cá de ti, traze-as; então, vem, Davi, porque, tão certo como vive o Senhor , terás paz, e nada há que temer.
22 ಆದರೆ--ಇಗೋ, ಬಾಣ ಗಳು ಆಚೆ ಬಿದ್ದಿರುತ್ತವೆ ಎಂದು ಹುಡುಗನಿಗೆ ಹೇಳಿದರೆ ಹೊರಟುಹೋಗು; ಯಾಕಂದರೆ ಕರ್ತನು ನಿನ್ನನ್ನು ಕಳುಹಿಸಿದನು.
22 Porém, se disser ao moço: Olha que as flechas estão para lá de ti. Vai-te embora, porque o Senhor te manda ir.
23 ನಾನೂ ನೀನೂ ಮಾತನಾಡಿಕೊಂಡ ಈ ಕಾರ್ಯಕ್ಕೆ ಇಗೋ, ಕರ್ತನು ನನಗೂ ನಿನಗೂ ಮಧ್ಯೆ ಎಂದೆಂದಿಗೂ ಸಾಕ್ಷಿಯಾಗಿ ಇರುವನು ಅಂದನು.
23 Quanto àquilo de que eu e tu falamos, eis que o Senhor está entre mim e ti, para sempre.
24 ಹಾಗೆಯೇ ದಾವೀದನು ಹೊಲದಲ್ಲಿ ಬಚ್ಚಿಟ್ಟು ಕೊಂಡಿದ್ದನು. ಅಮಾವಾಸ್ಯೆ ಆದಾಗ ಅರಸನು ಭೋಜನವನ್ನು ಮಾಡಲು ಕುಳಿತನು.
24 Escondeu-se, pois, Davi no campo; e, sendo a Festa da Lua Nova, pôs-se o rei à mesa para comer.
25 ಅರಸನು ಎಂದಿನಂತೆ ಗೋಡೆಯ ಬಳಿಯಲ್ಲಿ ಇರುವ ತನ್ನ ಆಸನದ ಮೇಲೆ ಕುಳಿತಾಗ ಯೋನಾತಾನನು ಎದ್ದನು; ಆದರೆ ಅಬ್ನೇರನು ಸೌಲನ ಬಳಿಯಲ್ಲಿ ಕುಳಿತನು.
25 Assentou-se o rei na sua cadeira, segundo o costume, no lugar junto à parede; Jônatas, defronte dele, e Abner, ao lado de Saul; mas o lugar de Davi estava desocupado.
26 ದಾವೀದನು ಇರುವ ಸ್ಥಳವು ಬರಿದಾಗಿತ್ತು. ಆದಾಗ್ಯೂ ಸೌಲನು ಆ ದಿವಸದಲ್ಲಿ ಅವನನ್ನು ಕುರಿತು ಏನೂ ಹೇಳದೆ ಅವನಿಗೆ ಏನಾದರೂ ಸಂಭವಿಸಿರಬೇಕು; ಅವನು ಅಶುಚಿಯಾಗಿದ್ದಾನೆ, ನಿಶ್ಚಯವಾಗಿ ಅಶುಚಿಯಾಗಿದ್ದಾನೆ ಎಂದು ಅಂದುಕೊಂಡನು.
26 Porém, naquele dia, não disse Saul nada, pois pensava: Aconteceu-lhe alguma coisa, pela qual não está limpo; talvez esteja contaminado.
27 ಅಮಾವಾ ಸ್ಯೆಯ ಮಾರನೆಯ ದಿವಸದಲ್ಲಿ ಅಂದರೆ ತಿಂಗಳಿನ ಎರಡನೆಯ ದಿವಸದಲ್ಲಿ ದಾವೀದನು ಕೂಡ್ರುವ ಸ್ಥಳವು ಹಾಗೆಯೇ ಬರಿದಾಗಿತ್ತು; ಆದದರಿಂದ ಸೌಲನುಇಷಯನ ಮಗನು ನಿನ್ನೆಯೂ ಈ ಹೊತ್ತೂ ಭೋಜನಕ್ಕೆ ಯಾಕೆ ಬರಲಿಲ್ಲ ಎಂದು ತನ್ನ ಕುಮಾರನಾದ ಯೋನಾ ತಾನನನ್ನು ಕೇಳಿದನು.
27 Sucedeu também ao outro dia, o segundo da Festa da Lua Nova, que o lugar de Davi continuava desocupado; disse, pois, Saul a Jônatas, seu filho: Por que não veio a comer o filho de Jessé, nem ontem nem hoje?
28 ಯೋನಾತಾನನು ಸೌಲನಿಗೆ ಪ್ರತ್ಯುತ್ತರವಾಗಿ--ಬೇತ್ಲೆಹೇಮಿನ ವರೆಗೂ ಹೋಗಿ ಬರಲು ದಾವೀದನು ನನ್ನನ್ನು ಬಹಳವಾಗಿ ಬೇಡಿ ಕೊಂಡನು.
28 Respondeu Jônatas a Saul: Davi me pediu, encarecidamente, que o deixasse ir a Belém.
29 ನನಗೆ ಅವನು--ದಯಮಾಡಿ ನನಗೆ ಅಪ್ಪಣೆಕೊಡು; ಯಾಕಂದರೆ ಊರೊಳಗೆ ನಮ್ಮ ಕುಟುಂಬದವರು ಯಜ್ಞ ಮಾಡುತ್ತಾರೆ; ನನ್ನ ಸಹೋ ದರನು ನನ್ನನ್ನು ಬರಲು ಹೇಳಿ ಕಳುಹಿಸಿದನು. ಈಗ ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರಕಿದರೆ ನಾನು ನನ್ನ ಸಹೋದರರನ್ನು ನೋಡುವದಕ್ಕೆ ಹೋಗುತ್ತೇನೆ ಅಂದನು. ಆದದರಿಂದ ಅವನು ಅರಸನ ಮೇಜಿಗೆ ಬರಲಿಲ್ಲ ಅಂದನು.
29 Ele me disse: Peço-te que me deixes ir, porque a nossa família tem um sacrifício na cidade, e um de meus irmãos insiste comigo para que eu vá. Se, pois, agora, achei mercê aos teus olhos, peço-te que me deixes partir, para que veja meus irmãos. Por isso, não veio à mesa do rei.
30 ಆಗ ಸೌಲನು ಯೋನಾತಾನನ ಮೇಲೆ ಕೋಪಗೊಂಡು ಅವನಿಗೆ--ವಕ್ರವಾಗಿ ಎದುರು ಬೀಳುವ ಸ್ತ್ರೀಯ ಮಗನೇ, ನಿನಗೆ ನಾಚಿಕೆಯಾಗುವ ಹಾಗೆಯೂ ನಿನ್ನ ತಾಯಿಯ ಬೆತ್ತಲೆತನಕ್ಕೆ ನಾಚಿಕೆ ಯಾಗುವ ಹಾಗೆಯೂ ಇಷಯನ ಮಗನನ್ನು ನೀನು ಆದುಕೊಂಡಿದ್ದೀ ಎಂದು ನಾನರಿಯೆನೋ?
30 Então, se acendeu a ira de Saul contra Jônatas, e disse-lhe: Filho de mulher perversa e rebelde; não sei eu que elegeste o filho de Jessé, para vergonha tua e para vergonha do recato de tua mãe?
31 ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳ ವರೆಗೂ ನೀನಾದರೂ ನಿನ್ನ ರಾಜ್ಯವಾದರೂ ಸ್ಥಿರವಾಗುವದಿಲ್ಲ. ಆದದರಿಂದ ಈಗ ನೀನು ಅವನನ್ನು ಕರೆಯಕಳುಹಿಸಿ ನನ್ನ ಬಳಿಗೆ ಕರಕೊಂಡು ಬಾ; ಅವನು ನಿಜವಾಗಿ ಸಾಯಲೇಬೇಕು ಅಂದನು.
31 Pois, enquanto o filho de Jessé viver sobre a terra, nem tu estarás seguro, nem seguro o teu reino; pelo que manda buscá-lo, agora, porque deve morrer.
32 ಅದಕ್ಕೆ ಯೋನಾತಾನನು ತನ್ನ ತಂದೆಯಾದ ಸೌಲನಿಗೆ ಪ್ರತ್ಯು ತ್ತರವಾಗಿ--ಅವನನ್ನು ಯಾಕೆ ಕೊಲೆ ಮಾಡಬೇಕು? ಅವನು ಏನು ಮಾಡಿದನು ಅಂದನು.
32 Então, respondeu Jônatas a Saul, seu pai, e lhe disse: Por que há de ele morrer? Que fez ele?
33 ಆಗ ಸೌಲನು ಅವನನ್ನು ಹೊಡೆಯಲು ಈಟಿಯನ್ನು ಅವನ ಮೇಲೆ ಎಸೆದನು. ಆದದರಿಂದ ತನ್ನ ತಂದೆಯು ದಾವೀದನನ್ನು ಕೊಂದುಹಾಕಲು ದೃಢಮಾಡಿದ್ದಾನೆಂದು ಯೋನಾತಾ ನನು ತಿಳುಕೊಂಡನು.
33 Então, Saul atirou-lhe com a lança para o ferir; com isso entendeu Jônatas que, de fato, seu pai já determinara matar a Davi.
34 ಕೋಪದ ಉರಿಯಿಂದ ಆಗ ಯೋನಾತಾನನು ಮೇಜಿನಿಂದ ಎದ್ದುಹೋಗಿ ತಿಂಗಳಿನ ಎರಡನೇ ದಿವಸದಲ್ಲಿ ಊಟಮಾಡಲಿಲ್ಲ. ತನ್ನ ತಂದೆಯು ದಾವೀದನಿಗೆ ಅವಮಾನ ಮಾಡಿದ್ದ ರಿಂದ ಅವನಿಗೋಸ್ಕರ ವ್ಯಥೆಪಟ್ಟನು.
34 Pelo que Jônatas, todo encolerizado, se levantou da mesa e, neste segundo dia da Festa da Lua Nova, não comeu pão, pois ficara muito sentido por causa de Davi, a quem seu pai havia ultrajado.
35 ಉದಯದಲ್ಲಿ ಯೋನಾತಾನನು ದಾವೀದನಿಗೆ ನೇಮಿಸಿದ ವೇಳೆಯ ಪ್ರಕಾರವೇ ಒಬ್ಬ ಚಿಕ್ಕ ಹುಡುಗ ನನ್ನು ಕರಕೊಂಡು ಹೊಲಕ್ಕೆ ಹೋಗಿ
35 Na manhã seguinte, saiu Jônatas ao campo, no tempo ajustado com Davi, e levou consigo um rapaz.
36 ಹುಡುಗನಿಗೆ--ನೀನು ಓಡಿಹೋಗಿ ನಾನು ಹಾಕುವ ಬಾಣ ಗಳನ್ನು ಹುಡುಕಿಕೊಂಡು ಬಾ ಎಂದು ಹೇಳಿ, ಆ ಹುಡುಗನು ಓಡುವಾಗ ಅವನಿಗೆ ಆಚೆ ಹೋಗುವ ಹಾಗೆ ಬಾಣವನ್ನು ಎಸೆದನು.
36 Então, disse ao seu rapaz: Corre a buscar as flechas que eu atirar. Este correu, e ele atirou uma flecha, que fez passar além do rapaz.
37 ಯೋನಾತಾನನು ಹಾಕಿದ ಬಾಣಬಿದ್ದ ಸ್ಥಳದ ವರೆಗೆ ಹುಡುಗನು ಹೋದಾಗ--ಬಾಣವು ನಿನಗೆ ಆಚೆ ಇಲ್ಲವೋ ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿದನು.
37 Chegando o rapaz ao lugar da flecha que Jônatas havia atirado, gritou Jônatas atrás dele e disse: Não está a flecha mais para lá de ti?
38 ನೀನು ಆಲಸ್ಯವಿಲ್ಲದೆ ತ್ವರೆಯಾಗಿ ಹೋಗು ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿ ಹೇಳಿದನು. ಹಾಗೆಯೇ ಯೋನಾತಾನನ ಹುಡುಗನು ಬಾಣಗಳನ್ನು ಕೂಡಿಸಿಕೊಂಡು ತನ್ನ ಯಜಮಾನನ ಬಳಿಗೆ ಬಂದನು.
38 Tornou Jônatas a gritar: Apressa-te, não te demores. O rapaz de Jônatas apanhou as flechas e voltou ao seu senhor.
39 ಆ ಹುಡುಗನು ಏನೂ ತಿಳಿಯದೆ ಇದ್ದನು. ಯೋನಾತಾನನೂ ದಾವೀದನೂ ಮಾತ್ರ ಆ ಸಂಗತಿ ಯನ್ನು ತಿಳುಕೊಂಡಿದ್ದರು.
39 O rapaz não entendeu coisa alguma; só Jônatas e Davi sabiam deste ajuste.
40 ಆಗ ಯೋನಾತಾನನು ಆಯುಧಗಳನ್ನು ತನ್ನ ಹುಡುಗನಿಗೆ ಕೊಟ್ಟು ಅವನಿಗೆ--ಅವುಗಳನ್ನು ಪಟ್ಟಣ ದೊಳಕ್ಕೆ ತೆಗೆದುಕೊಂಡು ಹೋಗು ಅಂದನು.
40 Então, Jônatas deu as suas armas ao rapaz que o acompanhava e disse-lhe: Anda, leva-as à cidade.
41 ಹುಡುಗನು ಹೋಗುತ್ತಲೇ ದಾವೀದನು ದಕ್ಷಿಣ ಕಡೆಯಿಂದ ಎದ್ದುಬಂದು ಬೋರಲು ಬಿದ್ದು ಮೂರು ಸಾರಿ ವಂದಿಸಿದನು. ಅವರು ಒಬ್ಬರಿಗೊ ಬ್ಬರು ಮುದ್ದಿಟ್ಟುಕೊಂಡು ಒಬ್ಬರನ್ನೊಬ್ಬರು ನೋಡಿ ಅತ್ತರು; ದಾವೀದನು ಬಹಳವಾಗಿ ಅತ್ತನು;
41 Indo-se o rapaz, levantou-se Davi do lado do sul e prostrou-se rosto em terra três vezes; e beijaram-se um ao outro e choraram juntos; Davi, porém, muito mais.
42 ಆಗ ಯೋನಾತಾನನು ದಾವೀದನಿಗೆ--ನೀನು ಸಮಾಧಾನದಿಂದ ಹೋಗು; ಕರ್ತನು ಎಂದೆಂದಿಗೂ ನನಗೂ ನಿನಗೂ ನನ್ನ ಸಂತಾನಕ್ಕೂ ನಿನ್ನ ಸಂತಾ ನಕ್ಕೂ ಮಧ್ಯದಲ್ಲಿ ಕರ್ತನ ಹೆಸರಿನಿಂದ ನಾವಿಬ್ಬರೂ ಪ್ರಮಾಣ ಇಟ್ಟುಕೊಂಡೆವಲ್ಲಾ ಅಂದನು. ಆಗ ದಾವೀದನು ಎದ್ದು ಹೋದನು; ಯೋನಾತಾನನು ಪಟ್ಟಣಕ್ಕೆ ಹೋದ
42 Disse Jônatas a Davi: Vai-te em paz, porquanto juramos ambos em nome do Senhor , dizendo: O Senhor seja para sempre entre mim e ti e entre a minha descendência e a tua.
43 — ausente —
43 Então, se levantou Davi e se foi; e Jônatas entrou na cidade.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar 1 Samuel 20, comparar traduções ou montar um estudo — tudo direto pelo WhatsApp.