1 Samuel 18

Kannada Bible (GL_KANNADA) vs ARIB

Sair da comparação
ARIB Almeida Revisada Imprensa Bíblica
1 ದಾವೀದನು ಸೌಲನ ಸಂಗಡ ಮಾತನಾಡಿ ತೀರಿಸಿದಾಗ ಯೋನಾತಾನನ ಪ್ರಾಣವು ದಾವೀದನ ಪ್ರಾಣದ ಸಂಗಡ ಒಂದಾಯಿತು. ಯೋನಾತಾನನು ಅವನನ್ನು ತನ್ನ ಪ್ರಾಣದ ಹಾಗೆಯೇ ಪ್ರೀತಿಮಾಡಿದನು.
1 Ora, acabando Davi de falar com Saul, a alma de Jônatas ligou-se com a alma de Davi; e Jônatas o amou como à sua própria alma.
2 ಇದಲ್ಲದೆ ಸೌಲನು ಆ ದಿವಸ ಅವನನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡನು; ತಿರಿಗಿ ಅವನ ತಂದೆಯ ಮನೆಗೆ ಹೋಗಗೊಡಿಸಲಿಲ್ಲ.
2 E desde aquele dia Saul o reteve, não lhe permitindo voltar para a casa de seu pai.
3 ಯೋನಾತಾನನು ತನ್ನ ಪ್ರಾಣದ ಹಾಗೆ ದಾವೀದ ನನ್ನು ಪ್ರೀತಿಮಾಡಿದ್ದರಿಂದ ಒಬ್ಬರಿಗೊಬ್ಬರು ಒಡಂಬಡಿ ಕೆಯನ್ನು ಮಾಡಿಕೊಂಡರು.
3 Então Jônatas fez um pacto com Davi, porque o amava como à sua própria vida.
4 ಆಗ ಯೋನಾತಾನನು ತೊಟ್ಟುಕೊಂಡಿದ್ದ ನಿಲುವಂಗಿಯನ್ನು ತೆಗೆದು ಅದನ್ನೂ ತನ್ನ ವಸ್ತ್ರಗಳನ್ನೂ ಕತ್ತಿಯನ್ನೂ ಬಿಲ್ಲನ್ನೂ ನಡುಕಟ್ಟನ್ನೂ ದಾವೀದನಿಗೆ ಕೊಟ್ಟನು.
4 E Jônatas se despojou da capa que vestia, e a deu a Davi, como também a sua armadura, e até mesmo a sua espada, o seu arco e o seu cinto.
5 ಸೌಲನು ದಾವೀದನನ್ನು ಎಲ್ಲಿಗೆ ಕಳುಹಿಸಿದರೂ ಅಲ್ಲಿಗೆ ಹೋಗಿ ಅವನು ಬುದ್ಧಿ ಯಿಂದ ಕಾರ್ಯವನ್ನು ನಡಿಸುತ್ತಿದ್ದನು. ಆದದರಿಂದ ಸೌಲನು ಅವನನ್ನು ಯುದ್ಧಸ್ಥರ ಮೇಲೆ ಅಧಿಕಾರಿಯಾಗ ಮಾಡಿದನು. ಅವನು ಸಮಸ್ತ ಜನರ ದೃಷ್ಟಿಯಲ್ಲಿಯೂ ಸೌಲನ ಎಲ್ಲಾ ಸೇವಕರ ದೃಷ್ಟಿಯಲ್ಲಿಯೂ ಒಪ್ಪಿಗೆಯಾಗಿದ್ದನು.
5 E saía Davi aonde quer que Saul o enviasse, e era sempre bem sucedido; e Saul o pôs sobre a gente de guerra, e isso pareceu bem aos olhos de todo o povo, e até aos olhos dos servos de Saul.
6 ಆದರೆ ದಾವೀದನು ಫಿಲಿಷ್ಟಿಯನನ್ನು ಸಂಹರಿಸಿ ಜನರ ಸಹಿತವಾಗಿ ಬರುವಾಗ ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳಿಂದ ಸ್ತ್ರೀಯರು ಸಂತೋಷದಿಂದ ಹೊರಟು ದಮ್ಮಡಿಗಳಿಂದಲೂ ಸಂಗೀತವಾದ್ಯಗಳಿಂದಲೂ ಹಾಡುತ್ತಾ ನಾಟ್ಯವಾಡುತ್ತಾ ಅರಸನಾದ ಸೌಲನನ್ನು ಎದುರುಗೊಳ್ಳಲು ಬಂದರು.
6 Sucedeu porém que, retornando eles, quando Davi voltava de ferir o filisteu, as mulheres de todas as cidades de Israel saíram ao encontro do rei Saul, cantando e dançando alegremente, com tamboris, e com instrumentos de música.
7 ಆ ಸ್ತ್ರೀಯರು ಹಾಡುತ್ತಾ ಒಬ್ಬರಿಗೊಬ್ಬರು--ಸೌಲನು ಸಾವಿರಗಳನ್ನೂ ದಾವೀ ದನು ಹತ್ತು ಸಾವಿರಗಳನ್ನೂ ಕೊಂದನೆಂದು ಪ್ರತ್ಯುತ್ತರ ಕೊಟ್ಟರು.
7 E as mulheres, dançando, cantavam umas para as outras, dizendo: Saul feriu os seus milhares, porém Davi os seus dez milhares.
8 ಸೌಲನಿಗೆ ಬಹು ಕೋಪವಾಯಿತು; ಆ ಮಾತು ಅವನಿಗೆ ವ್ಯಸನಕರವಾಗಿತ್ತು. ಇವರು ದಾವೀದ ನಿಗೆ ಹತ್ತು ಸಾವಿರಗಳನ್ನು ಹೇಳಿದ್ದಾರೆ; ನನಗೆ ಸಾವಿರ ಗಳನ್ನು ಹೇಳಿದ್ದಾರೆ; ಅವನಿಗೆ ರಾಜ್ಯವಲ್ಲದೆ ಇನ್ನು ಹೆಚ್ಚು ಬೇಕಾದದ್ದೇನು ಅಂದನು.
8 Então Saul se indignou muito, pois aquela palavra pareceu mal aos seus olhos, e disse: Dez milhares atribuíram a Davi, e a mim somente milhares; que lhe falta, senão só o reino?
9 ಆ ದಿವಸ ಮೊದಲು ಗೊಂಡು ಸೌಲನು ದಾವೀದನ ಮೇಲೆ ಕಣ್ಣಿಟ್ಟನು.
9 Daquele dia em diante, Saul trazia Davi sob suspeita.
10 ಮಾರನೆ ದಿವಸದಲ್ಲಿ ದೇವರಿಂದ ಬಂದ ದುರಾತ್ಮವು ಸೌಲನ ಮೇಲೆ ಇಳಿಯಿತು. ಅವನು ಮನೆಯ ಮಧ್ಯ ದಲ್ಲಿ ಪ್ರವಾದಿಸುತ್ತಿದ್ದನು (ಕಾಲಜ್ಞಾನ). ಆಗ ದಾವೀ ದನು ಪ್ರತಿದಿನ ಮಾಡುತ್ತಿದ್ದ ಹಾಗೆಯೇ ತನ್ನ ಕೈಯಿಂದ ಬಾರಿಸುತ್ತಿದ್ದನು. ಆದರೆ ಸೌಲನ ಕೈಯಲ್ಲಿ ಈಟಿಯು ಇತ್ತು.
10 No dia seguinte o espírito maligno da parte de Deus se apoderou de Saul, que começou a profetizar no meio da casa; e Davi tocava a harpa, como nos outros dias. Saul tinha na mão uma lança.
11 ಆಗ ಸೌಲನು ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯುವೆನೆಂದು ಈಟಿಯನ್ನು ಎಸೆದನು. ಆದರೆ ದಾವೀದನು ಎರಡು ಸಾರಿ ಅವನ ಸಮ್ಮುಖದಿಂದ ತಪ್ಪಿಸಿಕೊಂಡನು.
11 E Saul arremessou a lança, dizendo consigo: Encravarei a Davi na parede. Davi, porém, desviou-se dele por duas vezes.
12 ಸೌಲನು ದಾವೀದನಿಗೆ ಭಯಪಟ್ಟನು; ಕರ್ತನು ಅವನ ಸಂಗಡ ಇದ್ದನು. ಕರ್ತನು ಸೌಲನ ಕಡೆಯಿಂದ ಹೊರಟು ಹೋಗಿದ್ದನು;
12 Saul, pois, temia a Davi, porque o Senhor era com Davi e se tinha retirado dele.
13 ಆದದರಿಂದ ಸೌಲನು ಅವನನ್ನು ತನ್ನ ಬಳಿಯಿಂದ ಹೊರಡಿಸಿಬಿಟ್ಟು ಸಾವಿರ ಜನಕ್ಕೆ ಪ್ರಧಾನನನ್ನಾಗಿ ಮಾಡಿದನು. ಹಾಗೆಯೇ ಅವನು ಜನರ ಮುಂದೆ ಹೊರಟು ಹೋಗುತ್ತಾ ಬರುತ್ತಾ ಇದ್ದನು.
13 Pelo que Saul o afastou de si, e o fez comandante de mil; e ele saía e entrava diante do povo.
14 ದಾವೀದನು ತನ್ನ ಸಕಲ ಮಾರ್ಗಗಳಲ್ಲಿ ಬುದ್ಧಿಯುಳ್ಳವನಾಗಿ ವರ್ತಿಸಿದನು.
14 E Davi era bem sucedido em todos os seus caminhos; e o Senhor era com ele.
15 ಕರ್ತನು ಅವನ ಸಂಗಡ ಇದ್ದನು. ಅವನು ಮಹಾಬುದ್ಧಿವಂತನಾಗಿ ನಡೆಯುವದನ್ನು ಸೌಲನು ನೋಡಿ ಅವನಿಗೆ ಭಯ ಪಟ್ಟಿದ್ದನು.
15 Vendo, então, Saul que ele era tão bem sucedido, tinha receio dele.
16 ಇಸ್ರಾಯೇಲ್‌ ಜನರೂ ಯೆಹೂದ ಜನರೂ ದಾವೀದನು ತಮ್ಮ ಮುಂದೆ ಹೋಗುತ್ತಾ ಬರುತ್ತಾ ಇರುವದರಿಂದ ಅವನನ್ನು ಪ್ರೀತಿ ಮಾಡಿದರು.
16 Mas todo o Israel e Judá amavam a Davi, porquanto saía e entrava diante deles.
17 ಆಗ ಸೌಲನು--ನನ್ನ ಕೈ ಅವನ ಮೇಲೆ ಇರಬಾರದು; ಆದರೆ ಫಿಲಿಷ್ಟಿಯರ ಕೈ ಅವನ ಮೇಲೆ ಇರಲಿ ಅಂದುಕೊಂಡು ದಾವೀದನಿಗೆ--ಇಗೋ, ನನ್ನ ಹಿರಿಯ ಮಗಳಾದ ಮೇರಬಳನ್ನು ನಿನಗೆ ಹೆಂಡತಿಯಾಗಿ ಕೊಡುವೆನು; ನೀನು ನನಗೋಸ್ಕರ ಪರಾಕ್ರಮಶಾಲಿ ಯಾಗಿದ್ದು ಕರ್ತನ ಯುದ್ಧಗಳನ್ನು ನಡಿಸು ಅಂದನು.
17 Pelo que Saul disse a Davi: Eis que Merabe, minha filha mais velha, te darei por mulher, contanto que me sejas filho valoroso, e guerreies as guerras do Senhor. Pois Saul dizia consigo: Não seja contra ele a minha mão, mas sim a dos filisteus.
18 ದಾವೀದನು ಸೌಲನಿಗೆ--ಅರಸನಿಗೆ ಅಳಿಯನಾಗಿ ರುವದಕ್ಕೆ ನಾನೆಷ್ಟರವನು? ನನ್ನ ಜೀವನ ಏನು? ಇಸ್ರಾಯೇಲಿನಲ್ಲಿ ನನ್ನ ತಂದೆಯ ಗೋತ್ರವು ಎಷ್ಟು ಮಾತ್ರ ಅಂದನು.
18 Mas Davi disse a Saul: Quem sou eu, e qual é a minha vida e a família de meu pai em Israel, para eu vir a ser genro do rei?
19 ಆದರೆ ಸೌಲನ ಮಗಳಾದ ಮೇರಬಳು ದಾವೀದನಿಗೆ ಕೊಡಲ್ಪಡುವದಕ್ಕಿರುವಾಗ ಅವಳು ಮೆಹೋಲದವನಾದ ಅದ್ರೀಯೇಲನಿಗೆ ಹೆಂಡತಿಯಾಗಿ ಕೊಡಲ್ಪಟ್ಟಳು.
19 Sucedeu, porém, que ao tempo em que Merabe, filha de Saul, devia ser dada a Davi, foi dada por mulher a Adriel, meolatita.
20 ಇದಲ್ಲದೆ ಸೌಲನ ಮಗಳಾದ ವಿಾಕಲಳು ದಾವೀದನನ್ನು ಪ್ರೀತಿಮಾಡಿದಳು. ಅದು ಸೌಲನಿಗೆ ತಿಳಿಸಲ್ಪಟ್ಟಾಗ ಆ ಕಾರ್ಯ ಅವನಿಗೆ ಯುಕ್ತವಾಗಿ ತೋರಿತು.
20 Mas Mical, a outra filha de Saul, amava a Davi; sendo isto anunciado a Saul, pareceu bem aos seus olhos.
21 ಅವನಿಗೆ ಉರುಲಾಗಿರುವ ಹಾಗೆಯೂ ಫಿಲಿಷ್ಟಿಯರ ಕೈ ಅವನ ಮೇಲೆ ಬರುವ ಹಾಗೆಯೂ ಇವಳನ್ನು ಅವನಿಗೆ ಕೊಡುವೆನು ಅಂದುಕೊಂಡನು. ಆದದರಿಂದ ಸೌಲನು ದಾವೀದನಿಗೆ--ನೀನು ಎರಡನೆ ಯವಳಿಂದ ಈ ಹೊತ್ತು ಅಳಿಯನಾಗು ಅಂದನು.
21 E Saul disse: Eu lha darei, para que ela lhe sirva de laço, e para que a mão dos filisteus venha a ser contra ele. Pelo que Saul disse a Davi: com a outra serás hoje meu genro.
22 ಸೌಲನು ತನ್ನ ಸೇವಕರಿಗೆ--ನೀವು ದಾವೀದನ ಸಂಗಡ ಗುಪ್ತವಾಗಿ ಮಾತನಾಡಿ--ಇಗೋ, ಅರಸನು ನಿನ್ನಲ್ಲಿ ಸಂತೋಷಪಡುತ್ತಾನೆ, ತನ್ನ ಸೇವಕರೆಲ್ಲರೂ ನಿನ್ನನ್ನು ಪ್ರೀತಿಸುತ್ತಾರೆ; ಆದದರಿಂದ ಅರಸನ ಅಳಿಯ ನಾಗು ಎಂದು ಹೇಳಿರಿ ಎಂದು ಆಜ್ಞಾಪಿಸಿದನು.
22 Saul, pois, deu ordem aos seus servos: Falai em segredo a Davi, dizendo: Eis que o rei se agrada de ti, e todos os seus servos te querem bem; agora, pois, consente em ser genro do rei.
23 ಹಾಗೆಯೇ ಸೌಲನ ಸೇವಕರು ಈ ಮಾತುಗಳನ್ನು ದಾವೀದನ ಕಿವಿಗಳಲ್ಲಿ ಹೇಳಿದರು. ಆದರೆ ದಾವೀದನು--ನಾನು ದರಿದ್ರನೂ ಅಲ್ಪನಾಗಿ ಎಣಿಸಲ್ಪ ಟ್ಟವನೂ ಆಗಿರುವಾಗ ನಾನು ಅರಸನಿಗೆ ಅಳಿಯ ನಾಗುವದು ನಿಮ್ಮ ಕಣ್ಣುಗಳಿಗೆ ಅಲ್ಪವಾಗಿ ಕಾಣು ತ್ತದೆಯೋ ಅಂದನು.
23 Assim os servos de Saul falaram todas estas palavras aos ouvidos de Davi. Então disse Davi: Parece-vos pouca coisa ser genro do rei, sendo eu homem pobre e de condição humilde?
24 ಆಗ ಸೌಲನ ಸೇವಕರು ಅವನಿಗೆ--ದಾವೀದನು ಈ ಪ್ರಕಾರವಾಗಿ ಮಾತನಾಡಿ ದನೆಂದು ಹೇಳಿದರು.
24 E os servos de Saul lhe anunciaram isto, dizendo: Assim e assim falou Davi.
25 ಆದರೆ ಸೌಲನು-- ದಾವೀದ ನನ್ನು ಫಿಲಿಷ್ಟಿಯರ ಕೈಯಿಂದ ಬೀಳಮಾಡಬೇಕೆಂದು ನೆನಸಿ ತನ್ನ ಸೇವಕರಿಗೆ--ನೀವು ದಾವೀದನಿಗೆ--ಅರಸನು ಯಾವ ತೆರವನ್ನೂ ಅಪೇಕ್ಷಿಸದೆ ತನ್ನ ಶತ್ರು ಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ಹಾಗೆ ನೂರು ಮಂದಿ ಫಿಲಿಷ್ಟಿಯರ ಮುಂದೊಗಲನ್ನು ಅಪೇಕ್ಷಿಸು ತ್ತಾನೆಂದು ಹೇಳಿರಿ ಅಂದನು.
25 Então disse Saul: Assim direis a Davi: O rei não deseja dote, senão cem prepúcios de filisteus, para que seja vingado dos seus inimigos. Porquanto Saul tentava fazer Davi cair pela mão dos filisteus.
26 ಹಾಗೆಯೇ ಅವನ ಸೇವಕರು ದಾವೀದನಿಗೆ ಈ ಮಾತುಗಳನ್ನು ತಿಳಿಸಿದಾಗ ಅರಸನಿಗೆ ಅಳಿಯನಾಗುವದು ಅವನಿಗೆ ಚೆನ್ನಾಗಿ ಕಾಣಿಸಿತು.
26 Tendo os servos de Saul anunciado estas palavras a Davi, pareceu bem aos seus olhos tornar-se genro do rei. Ora, ainda os dias não se haviam cumprido,
27 ಆದದರಿಂದ ನೇಮಿಸಿದ ದಿವಸಗಳು ಈಡೇರುವದಕ್ಕಿಂತ ಮುಂಚೆ ಅವನು ಎದ್ದು ತನ್ನ ಜನರನ್ನು ಕರಕೊಂಡು ಹೋಗಿ ಫಿಲಿಷ್ಟಿಯರಲ್ಲಿ ಇನ್ನೂರು ಜನರನ್ನು ಕೊಂದು ಅವರ ಮುಂದೊಗ ಲುಗಳನ್ನು ತಂದು ತಾನು ಅಳಿಯನಾಗುವ ಹಾಗೆ ಅವುಗಳನ್ನು ಅರಸನಿಗೆ ಪೂರ್ಣವಾಗಿ ಒಪ್ಪಿಸಿದನು. ಆಗ ಸೌಲನು ತನ್ನ ಕುಮಾರ್ತೆಯಾದ ವಿಾಕಲಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.
27 quando Davi se levantou, partiu com os seus homens, e matou dentre os filisteus duzentos homens; e Davi trouxe os prepúcios deles, e os entregou, bem contados, ao rei, para que fosse seu genro. Então Saul lhe deu por mulher sua filha Mical.
28 ಆದರೆ ಕರ್ತನು ದಾವೀದನ ಸಂಗಡ ಇದ್ದಾನೆಂದೂ ತನ್ನ ಮಗಳಾದ ವಿಾಕಲಳು ಅವನನ್ನು ಪ್ರೀತಿಮಾಡಿದ್ದಾಳೆಂದೂ ಸೌಲನು ತಿಳುಕೊಂಡನು;
28 Mas quando Saul viu e compreendeu que o Senhor era com Davi e que todo o Israel o amava,
29 ಸೌಲನು ದಾವೀದನಿ ಗೋಸ್ಕರ ಇನ್ನೂ ಹೆಚ್ಚಾಗಿ ಭಯಪಟ್ಟನು; ಸೌಲನು ಬಿಟ್ಟುಬಿಡದೆ ದಾವೀದನಿಗೆ ಶತ್ರುವಾಗಿದ್ದನು.
29 temeu muito mais a Davi; e Saul se tornava cada vez mais seu inimigo.
30 ಆಗ ಫಿಲಿಷ್ಟಿಯರ ಪ್ರಧಾನರು ಹೊರಟರು, ಅವರು ಹೊರಟ ತರುವಾಯ ದಾವೀದನು ಸೌಲನ ಸಮಸ್ತ ಸೇವಕ ರಿಗಿಂತ ಹೆಚ್ಚು ಬುದ್ಧಿಯಿಂದ ನಡಕೊಂಡನು. ಆದದ ರಿಂದ ಅವನ ಹೆಸರು ಬಹಳ ಪ್ರಸಿದ್ಧವಾಗಿತ್ತು.
30 Então saíram os chefes dos filisteus à campanha; e sempre que eles saíam, Davi era mais bem sucedido do que todos os servos de Saul, pelo que o seu nome era mui estimado.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 1 Samuel 18, comparar traduções ou montar um estudo — tudo direto pelo WhatsApp.