1 Samuel 13
Kannada Bible (GL_KANNADA) vs ARC
ARC Almeida Revista e Corrigida 2009
1 ಸೌಲನು ಒಂದು ವರುಷ ಆಳಿದನು;ಇಸ್ರಾಯೇಲ್ಯರನ್ನು ಎರಡು ವರುಷ ಆಳಿ ದಾಗ ಸೌಲನು ಇಸ್ರಾಯೇಲ್ಯರಲ್ಲಿ ಮೂರು ಸಾವಿರ ಜನರನ್ನು ಆದುಕೊಂಡನು.
1 Um ano tinha estado Saul em seu reinado e o segundo ano reinou sobre Israel.
2 ಮೂರು ಸಾವಿರ ಜನರಲ್ಲಿ ಎರಡು ಸಾವಿರ ಜನರು ಸೌಲನು ಇರುವ ಮಿಕ್ಮಾಷಿ ನಲ್ಲಿಯೂ ಬೇತೇಲಿನ ಪರ್ವತದಲ್ಲಿಯೂ ಇದ್ದರು; ಸಾವಿರ ಜನರು ಯೋನಾತಾನನ ಸಂಗಡ ಬೆನ್ಯಾವಿಾನ್ ದೇಶದ ಗಿಬೆಯದಲ್ಲಿದ್ದರು. ಉಳಿದ ಜನರನ್ನು ಅವರ ವರ ಡೇರೆಗಳಿಗೆ ಕಳುಹಿಸಿಬಿಟ್ಟನು.
2 Então, Saul escolheu para si três mil homens de Israel; e estavam com Saul dois mil em Micmás e na montanha de Betel, e mil estavam com Jônatas em Gibeá de Benjamim; e despediu o resto do povo, cada um para sua casa.
3 ಯೋನಾತಾನನು ಗಿಬೆಯದಲ್ಲಿ ಫಿಲಿಷ್ಟಿಯರ ಠಾಣವನ್ನು ಹೊಡೆದನು; ಫಿಲಿಷ್ಟಿಯರಿಗೆ ಅದು ಕೇಳಿಬಂತು. ಆದದರಿಂದ ಸೌಲನು ದೇಶದಲ್ಲೆಲ್ಲಾ ಇಬ್ರಿಯರು ಕೇಳಲೆಂದು ತುತೂರಿಯನ್ನು ಊದಿಸಿದನು.
3 E Jônatas feriu a guarnição dos filisteus que estava em Gibeá, o que os filisteus ouviram; pelo que Saul tocou a trombeta por toda a terra, dizendo: Ouçam os hebreus.
4 ಫಿಲಿಷ್ಟಿಯರ ಠಾಣ ವನ್ನು ಸೌಲನು ಹೊಡೆದನೆಂದೂ ಫಿಲಿಷ್ಟಿಯರಿಗೆ ಇಸ್ರಾಯೇಲ್ಯರು ಅಸಹ್ಯವಾದವರಾದರೆಂದೂ ಸಮಸ್ತ ಇಸ್ರಾಯೇಲ್ಯರು ಕೇಳಿದಾಗ ಸೌಲನ ಹಿಂದೆ ಹೋಗಲು ಗಿಲ್ಗಾಲಿಗೆ ಕರೆಸಿಕೊಳ್ಳಲ್ಪಟ್ಟರು.
4 Então, todo o Israel ouviu dizer: Saul feriu a guarnição dos filisteus, e também Israel se fez abominável aos filisteus. Então, o povo foi convocado após Saul em Gilgal.
5 ಆಗ ಇಸ್ರಾಯೇಲ್ಯರ ಸಂಗಡ ಯುದ್ಧಮಾಡಲು ಫಿಲಿಷ್ಟಿಯರ ಮೂವತ್ತು ಸಾವಿರ ರಥಗಳೂ ಆರು ಸಾವಿರ ಕುದುರೆ ರಾಹುತರೂ ಸಮುದ್ರತೀರದ ಮರಳಷ್ಟು ಜನವೂ ಕೂಡಿಕೊಂಡು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಇಳುಕೊಂಡರು.
5 E os filisteus se ajuntaram para pelejar contra Israel: trinta mil carros, e seis mil cavaleiros, e povo em multidão como a areia que está à borda do mar; e subiram e se acamparam em Micmás, ao oriente de Bete-Áven.
6 ಆಗ ಇಸ್ರಾಯೇಲ್ ಜನರು ತಮಗೆ ಶ್ರಮೆ ಉಂಟಾದ್ದದರಿಂದ ತಾವು ಇಕ್ಕಟ್ಟಿನಲ್ಲಿ ಇರುವದನ್ನು ನೋಡಿ ಗವಿಗಳಲ್ಲಿಯೂ ಮುಳ್ಳಿನ ಪೊದೆಗಳಲ್ಲಿಯೂ ಗುಡ್ಡಗಳಲ್ಲಿಯೂ ದುರ್ಗಗಳಲ್ಲಿಯೂ ಕುಣಿಗಳಲ್ಲಿಯೂ ಅಡಗಿಕೊಂಡರು.
6 Vendo, pois, os homens de Israel que estavam em angústia (porque o povo estava apertado), o povo se escondeu pelas cavernas, e pelos espinhais, e pelos penhascos, e pelas fortificações, e pelas covas,
7 ಇದಲ್ಲದೆ ಇಬ್ರಿಯರಲ್ಲಿರುವ ಕೆಲವರು ಯೊರ್ದನನ್ನು ದಾಟಿ ಗಾದ್ ದೇಶಕ್ಕೂ ಗಿಲ್ಯಾದಿಗೂ ಹೋದರು. ಆದರೆ ಸೌಲನು ಇನ್ನೂ ಗಿಲ್ಗಾಲಿನಲ್ಲಿದ್ದನು; ಜನರೆಲ್ಲರು ನಡುಗಿದವರಾಗಿ ಅವನನ್ನು ಹಿಂಬಾಲಿಸಿದರು.
7 e os hebreus passaram o Jordão para a terra de Gade e Gileade; e, estando Saul ainda em Gilgal, todo o povo veio atrás dele, tremendo.
8 ಸೌಲನು ತನಗೆ ಸಮುವೇಲನು ನೇಮಿಸಿದ ಕಾಲದ ಪ್ರಕಾರ ಏಳು ದಿವಸ ಕಾದಿದ್ದನು. ಸಮುವೇಲನು ಗಿಲ್ಗಾಲಿಗೆ ಬಾರದೆ ಇದ್ದದರಿಂದ ಜನರು ಅವನನ್ನು ಬಿಟ್ಟು ಚದರಿಹೋದರು.
8 E esperou sete dias, até ao tempo que Samuel determinara; não vindo, porém, Samuel a Gilgal, o povo se espalhava dele.
9 ಆಗ ಸೌಲನು--ದಹನ ಬಲಿಯನ್ನೂ ಸಮಾಧಾನದ ಬಲಿಗಳನ್ನೂ ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಎಂದು ಹೇಳಿ ದಹನಬಲಿಯನ್ನು ಅರ್ಪಿಸಿದನು.
9 Então, disse Saul: Trazei-me aqui um holocausto e ofertas pacíficas. E ofereceu o holocausto.
10 ಅವನು ದಹನಬಲಿಯನ್ನು ಅರ್ಪಿಸಿ ತೀರಿಸುವಷ್ಟರೊಳಗೆ ಇಗೋ, ಸಮುವೇಲನು ಬಂದನು. ಆಗ ಸೌಲನು ಅವನನ್ನು ವಂದಿಸುವದಕ್ಕಾಗಿ ಎದುರುಗೊಳ್ಳಲು ಹೋದನು.
10 E sucedeu que, acabando ele de oferecer o holocausto, eis que Samuel chegou; e Saul lhe saiu ao encontro, para o saudar.
11 ಸಮುವೇಲನುನೀನೇನು ಮಾಡಿದಿ ಎಂದು ಸೌಲನನ್ನು ಕೇಳಿದಾಗ ಅವನು--ಜನರು ನನ್ನನ್ನು ಬಿಟ್ಟು ಚದರಿಹೋದದ್ದನ್ನೂ ನೇಮಿಸಿದ ದಿವಸಗಳ ಪ್ರಕಾರಕ್ಕೆ ನೀನು ಬಾರದ್ದನ್ನೂ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಕೂಡಿಕೊಂಡಿರುವದನ್ನೂ
11 Então, disse Samuel: Que fizeste? Disse Saul: Porquanto via que o povo se espalhava de mim, e tu não vinhas nos dias aprazados, e os filisteus já se tinham ajuntado em Micmás,
12 ನಾನು ಕಂಡಿದ್ದರಿಂದ ಫಿಲಿಷ್ಟಿಯರು ಗಿಲ್ಗಾಲಿನಲ್ಲಿ ರುವ ನನ್ನ ಬಳಿಗೆ ಬರುವರು ಎಂದೂ ನಾನು ಕರ್ತನ ದಯೆ ಬೇಡಿಕೊಳ್ಳಲಿಲ್ಲವೆಂದೂ ಹೇಳಿ ಮುಂದಾಗಿ ದಹನಬಲಿಯನ್ನು ಅರ್ಪಿಸಿದೆನು ಅಂದನು.
12 eu disse: Agora, descerão os filisteus sobre mim a Gilgal, e ainda à face do Senhor não orei; e forcei-me e ofereci holocausto.
13 ಸಮು ವೇಲನು ಸೌಲನಿಗೆ--ನೀನು ಬುದ್ಧಿಹೀನವಾದ ಕೆಲಸ ಮಾಡಿದ್ದೀ; ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕರ್ತನು ಇಸ್ರಾಯೇಲ್ಯರಲ್ಲಿ ನಿನ್ನ ರಾಜ್ಯವನ್ನು ಎಂದೆಂದಿಗೂ ಸ್ಥಿರಪಡಿಸುವದಕ್ಕೆ ಇದ್ದನು.
13 Então, disse Samuel a Saul: Agiste nesciamente e não guardaste o mandamento que o Senhor , teu Deus, te ordenou; porque, agora, o Senhor teria confirmado o teu reino sobre Israel para sempre.
14 ಆದರೆ ಈಗ ನಿನ್ನ ರಾಜ್ಯವು ನಿಲ್ಲಲಾರದು. ಕರ್ತನು ನಿನಗೆ ಆಜ್ಞಾಪಿಸಿ ದ್ದನ್ನು ನೀನು ಕೈಕೊಳ್ಳದೆ ಹೋದದರಿಂದ ಆತನು ತನ್ನ ಹೃದಯಕ್ಕೆ ಅನುಸರಣೆಯಾದ ಒಬ್ಬ ಮನುಷ್ಯ ನನ್ನು ಹುಡುಕಿ ಅವನನ್ನು ತನ್ನ ಜನರ ಮೇಲೆ ನಾಯಕನನ್ನಾಗಿ ನೇಮಿಸಿದ್ದಾನೆ ಅಂದನು.
14 Porém, agora, não subsistirá o teu reino; já tem buscado o Senhor para si um homem segundo o seu coração e já lhe tem ordenado o Senhor que seja chefe sobre o seu povo, porquanto não guardaste o que o Senhor te ordenou.
15 ಸಮು ವೇಲನು ಎದ್ದು ಗಿಲ್ಗಾಲಿನಿಂದ ಬೆನ್ಯಾವಿಾನ್ ದೇಶದ ಗಿಬೆಯಕ್ಕೆ ಹೋದನು. ಸೌಲನು ತನ್ನ ಸಂಗಡ ಇದ್ದ ಜನರನ್ನು ಲೆಕ್ಕಮಾಡಿದಾಗ ಅವರು ಸುಮಾರು ಆರು ನೂರು ಜನರಿದ್ದರು.
15 Então, se levantou Samuel e subiu de Gilgal a Gibeá de Benjamim; e Saul contou o povo que achou com ele, uns seiscentos varões.
16 ಸೌಲನೂ ಅವನ ಮಗನಾದ ಯೋನಾತಾನನೂ ಅವನ ಸಂಗಡ ಇರುವ ಜನರೂ ಸಹಿತವಾಗಿ ಬೆನ್ಯಾ ವಿಾನ್ ದೇಶದ ಗಿಬೆಯಲ್ಲಿದ್ದರು. ಆದರೆ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಇಳಿದುಕೊಂಡಿದ್ದರು.
16 E Saul, e Jônatas, seu filho, e o povo que se achou com eles ficaram em Gibeá de Benjamim; porém os filisteus se acamparam em Micmás.
17 ಆಗ ಫಿಲಿಷ್ಟಿ ಯರ ಪಾಳೆಯದಿಂದ ಸುಲುಕೊಳ್ಳುವವರು ಮೂರು ಗುಂಪಾಗಿ ಹೊರಟರು; ಒಂದು ಗುಂಪು ಒಫ್ರದ ಮಾರ್ಗವಾಗಿ ಶುವಲ್ ದೇಶದ ಕಡೆಗೆ ಹೋಯಿತು;
17 E os destruidores saíram do campo dos filisteus em três companhias; uma das companhias voltou pelo caminho de Ofra à terra de Sual;
18 ಮತ್ತೊಂದು ಗುಂಪು ಬೇತ್‌ಹೋರೋನಿನ ಮಾರ್ಗ ವಾಗಿ ಹೋಯಿತು; ಬೇರೊಂದು ಗುಂಪು ಅರಣ್ಯಕ್ಕೆ ಎದುರಾಗಿರುವ ಜೆಬೋಯಾಮ್ ತಗ್ಗಿಗೆದುರಾದ ಮೇರೆಯ ಮಾರ್ಗವಾಗಿ ಹೋಯಿತು.
18 outra companhia voltou pelo caminho de Bete-Horom; e a outra companhia voltou pelo caminho do termo que olha para o vale Zeboim, contra o deserto.
19 ಆದರೆ ಇಬ್ರಿಯರು ತಮಗೆ ಕತ್ತಿಯನ್ನಾದರೂ ಈಟಿಯನ್ನಾ ದರೂ ಮಾಡಿಕೊಳ್ಳಬಾರದು ಎಂದು ಫಿಲಿಷ್ಟಿಯರು ಹೇಳಿಕೊಂಡದ್ದರಿಂದ ಆಗ ಇಸ್ರಾಯೇಲ್ ದೇಶದಲ್ಲಿ ಒಬ್ಬ ಕಮ್ಮಾರನಾದರೂ ಸಿಕ್ಕಲಿಲ್ಲ.
19 E em toda a terra de Israel nem um ferreiro se achava, porque os filisteus tinham dito: Para que os hebreus não façam espada nem lança.
20 ಆದದರಿಂದ ಇಸ್ರಾಯೇಲ್ಲೆಲ್ಲಾ ತಮ್ಮ ತಮ್ಮ ನೇಗಲಿನ ಗುಳಗಳನ್ನೂ ಸಲಿಕೆಗಳನ್ನೂ ಕೊಡಲಿಗಳನ್ನೂ ಗುದ್ದಲಿಗಳನ್ನೂ ಮೊನೆ ಮಾಡುವದಕ್ಕೆ ಫಿಲಿಷ್ಟಿಯರ ಬಳಿಗೆ ಹೋಗಬೇಕಾ ಗಿತ್ತು.
20 Pelo que todo o Israel tinha que descer aos filisteus para amolar cada um a sua relha, e a sua enxada, e o seu machado, e o seu sacho.
21 ಆದರೆ ಗುದ್ದಲಿಗಳನ್ನೂ ಗುಂಟಿಗೆಗಳನ್ನೂ ಗುಶಿಮೊಳೆಗಳನ್ನೂ ಕೊಡಲಿಗಳನ್ನೂ ಅಂಕುಶಗಳನ್ನೂ ಹದಮಾಡುವದಕ್ಕೆ ಅವರಲ್ಲಿ ಅರವು ಮಾತ್ರ ಇತ್ತು.
21 Tinham, porém, limas adentadas para os seus sachos, e para as suas enxadas, e para as forquinhas de três dentes, e para os machados, e para consertar as aguilhadas.
22 ಯುದ್ಧದ ದಿವಸದಲ್ಲಿ ಸೌಲನ ಸಂಗಡ ಯೋನಾ ತಾನನ ಸಂಗಡ ಇರುವ ಸಮಸ್ತ ಜನರ ಕೈಯಲ್ಲಿ ಕತ್ತಿಯಾದರೂ ಈಟಿಯಾದರೂ ಇಲ್ಲದೆ ಇತ್ತು. ಆದರೆ ಸೌಲನಿಗೂ ಅವನ ಕುಮಾರನಾದ ಯೋನಾತಾನ ನಿಗೂ ಮಾತ್ರವೇ ಇತ್ತು.
22 E sucedeu que, no dia da peleja, se não achou nem espada, nem lança na mão de todo o povo que estava com Saul e com Jônatas; porém acharam-se com Saul e com Jônatas, seu filho.
23 ಆಗ ಫಿಲಿಷ್ಟಿಯರ ದಂಡು ಮಿಕ್ಮಾಷಿನ ಕಣಿವೆಯ ಮಾರ್ಗಕ್ಕೆ ಹೊರಟಿತು.
23 E saiu a guarnição dos filisteus ao caminho de Micmás.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar 1 Samuel 13, comparar traduções ou montar um estudo — tudo direto pelo WhatsApp.