1 Reis 9
Kannada Bible (GL_KANNADA) vs VC
VC Versão Católica
1 ಸೊಲೊಮೋನನು ಕರ್ತನ ಮಂದಿರ ವನ್ನೂ ಅರಮನೆಯನ್ನೂ ಕಟ್ಟಲು ಆಶೆ ಯಿಂದ ಇಚ್ಚೈಸಿದ್ದನ್ನೆಲ್ಲಾ ಕಟ್ಟಿಸಿ ತೀರಿಸಿದ ಮೇಲೆ ಏನಾಯಿತಂದರೆ,
1 Quando Salomão acabou de construir o templo do Senhor, o palácio real e tudo o que desejou fazer,
2 ಕರ್ತನು ಸೊಲೊಮೋನನಿಗೆ ಗಿಬ್ಯೋನಿನಲ್ಲಿ ಪ್ರತ್ಯಕ್ಷನಾದ ಹಾಗೆ ಎರಡನೇ ಸಾರಿ ಅವನಿಗೆ ಪ್ರತ್ಯಕ್ಷನಾದನು.
2 o Senhor apareceu-lhe pela segunda vez, como tinha aparecido em Gabaon.
3 ಆಗ ಕರ್ತನು ಅವ ನಿಗೆ--ನೀನು ನನ್ನ ಮುಂದೆ ಮಾಡಿದ ನಿನ್ನ ಪ್ರಾರ್ಥನೆ ಯನ್ನೂ ವಿಜ್ಞಾಪನೆಯನ್ನೂ ನಾನು ಕೇಳಿ ಯುಗ ಯುಗಕ್ಕೂ ನನ್ನ ಹೆಸರು ಅಲ್ಲಿರುವ ಹಾಗೆ ನೀನು ಕಟ್ಟಿಸಿದ ಈ ಮಂದಿರವನ್ನು ಪರಿಶುದ್ಧ ಮಾಡಿದೆನು; ನನ್ನ ಕಣ್ಣುಗಳೂ ನನ್ನ ಹೃದಯವೂ ನಿತ್ಯವಾಗಿ ಅಲ್ಲಿ ರುವವು.
3 O Senhor disse-lhe: Ouvi a tua oração e a súplica que me dirigiste; consagrei esta casa que me construíste, a fim de nela fixar o meu nome para sempre; meus olhos e meu coração aí estarão perpetuamente.
4 ನಾನು ನಿನಗೆ ಆಜ್ಞಾಪಿಸಿದ ಪ್ರಕಾರ ಮಾಡುವ ಹಾಗೆ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಕೈಕೊಂಡು ಸಂಪೂರ್ಣ ಹೃದಯದಿಂದಲೂ ಯಥಾರ್ಥತೆಯಿಂದಲೂ ನಿನ್ನ ತಂದೆಯಾದ ದಾವೀದನು ನಡೆದ ಪ್ರಕಾರ ನೀನು ನನ್ನ ಮುಂದೆ ನಡೆದರೆ
4 E tu, se andares diante de mim como o fez Davi, na sinceridade e retidão de teu coração, pondo em prática tudo o que te ordenei, observando os meus preceitos e minhas leis,
5 ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತು ಕೊಳ್ಳಲು ನಿನಗೆ ಮನುಷ್ಯನ ಕೊರತೆಯಾಗುವದಿಲ್ಲ ವೆಂದು ನಾನು ನಿನ್ನ ತಂದೆಯಾದ ದಾವೀದನಿಗೆ ಮಾತು ಕೊಟ್ಟ ಪ್ರಕಾರ ಇಸ್ರಾಯೇಲಿನಲ್ಲಿ ನಿನ್ನ ರಾಜ್ಯದ ಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸು ವೆನು.
5 eu firmarei para sempre o trono de teu reino sobre Israel, como o declarei a Davi, teu pai, nestes termos: Não te faltará jamais um descendente sobre o trono de Israel.
6 ನೀವಾದರೂ ನಿಮ್ಮ ಮಕ್ಕಳಾದರೂ ನಾನು ನಿಮ್ಮ ಮುಂದೆ ಇಟ್ಟ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳದೆ ನನ್ನ ಕಡೆಯಿಂದ ಹೊರಟುಹೋಗಿ
6 Mas se vos desviardes de mim, vós e vossos filhos, e não observardes os preceitos e ordens que vos prescrevi, se vos retirardes e prestardes culto a deuses estranhos, prostrando-vos diante deles,
7 ಅನ್ಯ ದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ ನಾನು ಆಗ ಇಸ್ರಾಯೇಲಿಗೆ ಕೊಟ್ಟ ಭೂಮಿಯಲ್ಲಿಂದ ಅವ ರನ್ನು ಕಡಿದುಬಿಟ್ಟು ನನ್ನ ಹೆಸರಿಗೋಸ್ಕರ ಪರಿಶುದ್ಧ ಮಾಡಿದ ಈ ಮಂದಿರವನ್ನು ನನ್ನ ಎದುರಿನಿಂದ ತೆಗೆದು ಬಿಡುವೆನು.
7 eu exterminarei Israel da terra que lhe dei, lançarei de minha presença o templo que consagrei ao meu nome, e Israel será objeto de sarcasmo e zombaria para todos os povos.
8 ಇಸ್ರಾಯೇಲು ಸಮಸ್ತ ಜನಗಳಲ್ಲಿ ಗಾದೆ ಯಾಗಿಯೂ ಅಪಹಾಸ್ಯವಾಗಿಯೂ ಇರುವದು. ಇದ ಲ್ಲದೆ ಈ ಎತ್ತರವಾಗಿರುವ ಮನೆಯನ್ನು ಹಾದುಹೋಗು ವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು--ಛೀ ಅಂದುಕರ್ತನು ಈ ದೇಶಕ್ಕೂ ಈ ಮಂದಿರಕ್ಕೂ ಹೀಗೆ ಯಾಕೆ ಮಾಡಿದನು ಎಂದು ಅನ್ನುವರು.
8 Embora seja tão alto esse templo, todo o que passar diante dele ficará pasmado, e assobiará, dizendo: Por que tratou o Senhor assim esta terra e este templo?
9 ಅವರು ಪ್ರತ್ಯುತ್ತರವಾಗಿ--ತಮ್ಮ ತಂದೆಗಳನ್ನು ಐಗುಪ್ತದೇಶ ದೊಳಗಿಂದ ಬರಮಾಡಿದ ತಮ್ಮ ದೇವರಾದ ಕರ್ತ ನನ್ನು ಬಿಟ್ಟು ಅನ್ಯದೇವರುಗಳನ್ನು ಹೊಂದಿಕೊಂಡು ಅವುಗಳಿಗೆ ಅಡ್ಬಬಿದ್ದು ಸೇವಿಸಿದ್ದರಿಂದ ಕರ್ತನು ಈ ಕೇಡನ್ನೆಲ್ಲಾ ನಮ್ಮ ಮೇಲೆ ಬರಮಾಡಿದನೆಂದು ಹೇಳು ವರು ಅಂದನು.
9 E responder-lhe-ão: Porque abandonaram o Senhor, seu Deus, que tirou os seus pais do Egito, e seguiram a outros deuses, prostrando-se diante deles e adorando-os; por isso o Senhor mandou sobre eles todos esses males.
10 ತೂರಿನ ಅರಸನಾದ ಹೀರಾಮನು ಸೊಲೊ ಮೋನನಿಗೆ ದೇವದಾರು ಮರಗಳನ್ನೂ ತುರಾಯಿ ಮರಗಳನ್ನೂ ಚಿನ್ನವನ್ನೂ ತನ್ನ ಎಲ್ಲಾ ಇಷ್ಟದ ಪ್ರಕಾರ ಕೊಟ್ಟಿದ್ದರಿಂದ
10 Quando, passados vinte anos, Salomão acabou de construir os dois edifícios, o templo do Senhor e o palácio real,
11 ಇಪ್ಪತ್ತು ವರುಷಗಳಾದ ತರುವಾಯ ಸೊಲೊಮೋನನು ಆ ಎರಡು ಮನೆಗಳನ್ನು, ಅಂದರೆ ಕರ್ತನ ಮನೆಯನ್ನೂ ಅರಮನೆಯನ್ನೂ ಕಟ್ಟಿಸಿ ತೀರಿಸಿ ದನು. ಆಗ ಸೊಲೊಮೋನನು ಗಲಿಲಾಯ ದೇಶದಲ್ಲಿ ಹೀರಾಮನಿಗೆ ಇಪ್ಪತ್ತು ಪಟ್ಟಣಗಳನ್ನು ಕೊಟ್ಟನು.
11 tendo-lhe Hirão, rei de Tiro, fornecido madeira de cedro e de cipreste, e também ouro, o quanto ele quis, Salomão deu a Hirão vinte cidades da Galiléia.
12 ಆಗ ಹೀರಾಮನು ತೂರಿನಿಂದ ಸೊಲೊಮೋನನು ತನಗೆ ಕೊಟ್ಟ ಪಟ್ಟಣಗಳನ್ನು ನೋಡಲು ಬಂದನು.
12 Hirão veio de Tiro para ver as cidades que Salomão lhe tinha dado, mas elas não lhe agradaram,
13 ಆದರೆ ಅವು ಅವನಿಗೆ ಮೆಚ್ಚಿಕೆಯಾಗಿರಲಿಲ್ಲ. ಆದ ರಿಂದ ಅವನು--ನನ್ನ ಸಹೋದರನೇ, ನೀನು ನನಗೆ ಕೊಟ್ಟ ಈ ಪಟ್ಟಣಗಳೇನೆಂದು ಹೇಳಿ ಅವುಗಳಿಗೆ ಕಾಬೂಲ್ ದೇಶವೆಂದು ಹೆಸರಿಟ್ಟನು. ಇಂದಿನವರೆಗೂ ಅವುಗಳಿಗೆ ಅದೇ ಹೆಸರು.
13 e disse: Que cidades são estas que me deste, irmão meu? E chamou-as terra de Cabul, nome que conservam até o dia de hoje.
14 ಹೀರಾಮನು ಅರಸನಿಗೆ ನೂರ ಇಪ್ಪತ್ತು ತಲಾಂತುಗಳ ಚಿನ್ನವನ್ನು ಕಳುಹಿಸಿದನು.
14 {Hirão tinha também mandado ao rei cento e vinte talentos de ouro.}
15 ಅರಸನಾದ ಸೊಲೊಮೋನನು ಬಿಟ್ಟೀ ಆಳುಗ ಳನ್ನು ಕೂಡಿಸಿದ ಕಾರಣವೇನಂದರೆ, ಕರ್ತನ ಮಂದಿರ ವನ್ನೂ ತನ್ನ ಮನೆಯನ್ನೂ ಮಿಲ್ಲೋವನ್ನೂ ಯೆರೂಸ ಲೇಮಿನ ಗೋಡೆಯನ್ನೂ ಹಾಚೋರನ್ನೂ ಮೆಗಿದ್ದೋ ನನ್ನೂ ಗೆಜೆರನ್ನೂ ಕಟ್ಟುವದಕ್ಕೋಸ್ಕರವೇ.
15 Eis o que se refere aos trabalhos organizados pelo rei Salomão para a construção do templo do Senhor e de seu próprio palácio, de Milo, do muro de Jerusalém, de Hezer, de Magedo e de Gazer.
16 ಐಗುಪ್ತದ ಅರಸನಾದ ಫರೋಹನು ಹೊರಟುಹೋಗಿ ಗೆಜೆರನ್ನು ತೆಗೆದುಕೊಂಡು ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟು ಪಟ್ಟಣದಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಕೊಂದು ಸೊಲೊಮೋನನ ಹೆಂಡತಿಯಾದ ತನ್ನ ಮಗಳಿಗೆ ಬಹುಮಾನವಾಗಿ ಕೊಟ್ಟನು.
16 O faraó, rei do Egito, subiu, tomou Gazer e queimou-a, depois de ter matado os cananeus que a habitavam; deu-a em seguida em dote à sua filha: mulher de Salomão.
17 ಹೀಗೆಯೇ ಸೊಲೊ ಮೋನನು ಗೆಜೆರನ್ನೂ ಕೆಳಗಿರುವ ಬೇತ್‌ಹೋರೋ ನನ್ನೂ ಬಾಲಾತನ್ನೂ ಅಡವಿಯಲ್ಲಿರುವ ತಾಮಾರನ್ನೂ ದೇಶದಲ್ಲಿ ಕಟ್ಟಿಸಿದನು.
17 Salomão construiu, pois, Gazer, Betoron-a-Baixa,
18 ಇದಲ್ಲದೆ ಸೊಲೊಮೋ ನನು ತನಗೆ ಉಂಟಾದ ಉಗ್ರಾಣದ ಪಟ್ಟಣಗಳನ್ನೂ ತನ್ನ ರಥಗಳಿಗೋಸ್ಕರ ಪಟ್ಟಣಗಳನ್ನೂ
18 Baalat e Tadmor, na terra do deserto;
19 ತನ್ನ ರಾಹುತರಿಗೋಸ್ಕರ ಪಟ್ಟಣಗಳನ್ನೂ ಯೆರೂಸಲೇಮಿ ನಲ್ಲಿಯೂ ಲೆಬನೋನಿನಲ್ಲಿಯೂ ತಾನು ಆಳುವ ದೇಶ ವೆಲ್ಲಾದರಲ್ಲಿಯೂ ಕಟ್ಟಲು ಇಚ್ಚೈಸಿದ್ದನ್ನೆಲ್ಲಾ ಕಟ್ಟಿಸಿ ದನು.
19 e, enfim, todas as cidades entrepostos de Salomão, cidades para os carros, para a cavalaria, e tudo o que lhe aprouve edificar em Jerusalém, no Líbano e em toda a terra de seu domínio.
20 ಇಸ್ರಾಯೇಲಿನ ಮಕ್ಕಳಲ್ಲದೆ ಅಮೋರ್ಯರು ಹಿತ್ತೀಯರು ಪೆರಿಜ್ಜೀಯರು ಹಿವ್ವೀಯರು ಯೆಬೂಸಿ ಯರು ಇವರಲ್ಲಿ ಉಳಿದ ಸಮಸ್ತ ಜನರೂ
20 Tudo o que subsistia dos amorreus, dos hiteus, dos ferezeus, dos heveus e dos jebuseus, que não faziam parte dos israelitas,
21 ಇವರ ತರುವಾಯ ದೇಶದಲ್ಲಿ ಉಳಿದ ಇಸ್ರಾಯೇಲ್ ಮಕ್ಕಳು ನಿರ್ಮೂಲ ಮಾಡದ ಅವರ ಮಕ್ಕಳು; ಇವರ ಮೇಲೆ ಸೊಲೊಮೋನನು ಇಂದಿನ ವರೆಗೂ ದಾಸತ್ವದ ಬಿಟ್ಟೀ ನೇಮಕವನ್ನಿಟ್ಟನು.
21 todos os seus descendentes que tinham ficado na terra e que os israelitas não tinham exterminado, Salomão os empregou como escravos de trabalhos pesados, o que são ainda hoje.
22 ಆದರೆ ಇಸ್ರಾಯೇಲಿನ ಮಕ್ಕಳನ್ನು ಸೊಲೊಮೋನನು ದಾಸರಾಗ ಮಾಡಲಿಲ್ಲ; ಅವರು ಯುದ್ಧಸ್ಥರಾಗಿಯೂ ತನ್ನ ಸೇವಕರಾಗಿಯೂ ಕೈಕೆಳಗಿ ರುವ ಪ್ರಧಾನರಾಗಿಯೂ ಅಧಿಕಾರಿಗಳಾಗಿಯೂ ರಥ ಗಳನ್ನು ನಡಿಸುವವರಾಗಿಯೂ ತನ್ನ ರಾಹುತರಾ ಗಿಯೂ ಇದ್ದರು.
22 Quanto aos filhos de Israel, determinou que nenhum servisse como escravo, mas que fossem seus guerreiros, servos, chefes, oficiais, comandantes de seus carros e de sua cavalaria.
23 ಇವರೊಳಗೆ ಐದುನೂರ ಐವತ್ತು ಮಂದಿ ಸೊಲೊಮೋನನ ಕೆಲಸದ ಪ್ರಧಾನರಾದ ಅಧಿಕಾರಿಗಳಾಗಿದ್ದರು. ಇವರು ಕೆಲಸದಲ್ಲಿ ಕಷ್ಟಪಡುವ ಜನರ ಮೇಲೆ ಅಧಿಕಾರಿಗಳಾಗಿದ್ದರು.
23 Havia quinhentos e cinqüenta contramestres nos trabalhos de Salomão, os quais dirigiam a multidão dos operários.
24 ಆದರೆ ಫರೋಹನ ಮಗಳು ದಾವೀದನ ಪಟ್ಟಣ ದಿಂದ ತನಗೋಸ್ಕರ ಸೊಲೊಮೋನನು ಕಟ್ಟಿಸಿದ ಪಟ್ಟಣಕ್ಕೆ ಬಂದಳು. ಆಗ ಅವನು ಮಿಲ್ಲೋವನ್ನು ಕಟ್ಟಿಸಿದನು.
24 Subiu a filha do faraó da cidade de Davi, e veio para a casa que lhe tinha construído Salomão; foi então que ele edificou Milo.
25 ವರುಷಕ್ಕೆ ಮೂರು ಸಾರಿ ಸೊಲೊ ಮೋನನು ಕರ್ತನಿಗೆ ತಾನು ಕಟ್ಟಿಸಿದ ಬಲಿಪೀಠದ ಮೇಲೆ ದಹನಬಲಿಗಳನ್ನೂ ಸಮಾಧಾನದ ಬಲಿಗ ಳನ್ನೂ ಅರ್ಪಿಸಿ ಕರ್ತನ ಮುಂದಿರುವ ಪೀಠದ ಮೇಲೆ ಧೂಪವನ್ನು ಸುಟ್ಟನು. ಹೀಗೆಯೇ ಅವನು ಮಂದಿ ರವನ್ನು ಕಟ್ಟಿಸಿ ತೀರಿಸಿದನು.
25 Três vezes por ano, Salomão oferecia holocaustos e sacrifícios pacíficos sobre o altar que tinha levantado ao Senhor, e queimava perfumes sobre o altar que estava diante do Senhor. E assim acabou ele a construção do templo.
26 ಇದಲ್ಲದೆ ಅರಸನಾದ ಸೊಲೊಮೋನನು ಎದೋಮ್ ದೇಶದ ಕೆಂಪುಸಮುದ್ರ ತೀರದ ಎಲೋ ತಿನ ಬಳಿಯಲ್ಲಿರುವ ಎಚ್ಯೊನ್ಗೇಬರಿನಲ್ಲಿ ಹಡಗು ಗಳನ್ನು ಮಾಡಿಸಿದನು.
26 Equipou também o rei Salomão uma frota em Asiongaber, perto de Ailat, na praia do mar Vermelho, na terra de Edom.
27 ಹೀರಾಮನು ಹಡಗುಗಳಲ್ಲಿ ಸಮುದ್ರದ ಜ್ಞಾನವುಳ್ಳ ನಾವಿಕರಾಗಿರುವ ತನ್ನ ಸೇವಕರನ್ನು ಸೊಲೊಮೋನನ ಸೇವಕರ ಸಂಗಡ ಕಳುಹಿಸಿದನು.
27 Hirão mandou seus próprios servos nessa frota, marinheiros experimentados em náutica, para ajudar os homens de Salomão.
28 ಅವರು ಓಫಿರಿಗೆ ಹೋಗಿ ಅಲ್ಲಿಂದ ನಾನೂರ ಇಪ್ಪತ್ತು ಬಂಗಾರದ ತಲಾಂತು ಗಳನ್ನು ಅರಸನಾದ ಸೊಲೊಮೋನನಿಗೆ ತಕ್ಕೊಂಡು ಬಂದರು.
28 Foram a Ofir, de onde trouxeram quatrocentos e vinte talentos de ouro, e os apresentaram ao rei Salomão.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar 1 Reis 9, comparar traduções ou montar um estudo — tudo direto pelo WhatsApp.