1 Reis 6

Kannada Bible (GL_KANNADA) vs VC

Sair da comparação
VC Versão Católica
1 ಇಸ್ರಾಯೇಲ್‌ ಮಕ್ಕಳು ಐಗುಪ್ತ ದೇಶದಿಂದ ಬಂದ ನಾನೂರ ಎಂಭತ್ತನೆಯ ವರುಷದಲ್ಲಿ ಇಸ್ರಾಯೇಲಿನ ಮೇಲೆ ಸೊಲೊಮೋ ನನ ಆಳಿಕೆಯ ನಾಲ್ಕನೇ ವರುಷದ ಎರಡನೇ ತಿಂಗಳಾದ ಜೀಪ್‌ ಎಂಬ ತಿಂಗಳಲ್ಲಿ ಅವನು ಕರ್ತನ ಮನೆಯನ್ನು ಕಟ್ಟಿಸಲು ಪ್ರಾರಂಭಿಸಿದನು.
1 No ano quatrocentos e oitenta depois da saída dos filhos de Israel do Egito, Salomão, no quarto ano do seu reinado, no mês de Ziv, que é o segundo mês, empreendeu a construção do templo do Senhor.
2 ಅರಸ ನಾದ ಸೊಲೊಮೋನನು ಕರ್ತನಿಗೋಸ್ಕರ ಮನೆ ಯನ್ನು ಕಟ್ಟಿಸಿದ್ದು ಹೇಗಂದರೆ, ಅದರ ಉದ್ದ ಅರವತ್ತು ಮೊಳವೂ ಅಗಲ ಇಪ್ಪತ್ತು ಮೊಳವೂ ಎತ್ತರ ಮೂವತ್ತು ಮೊಳವೂ.
2 O templo que o rei Salomão edificou ao Senhor tinha sessenta côvados de comprimento, vinte de largura e trinta de altura.
3 ಮನೆಯ ಮಂದಿರದ ಮುಂದೆ ದ್ವಾರಾಂಗಳವೂ ಇತ್ತು ಅದು ಮನೆಯ ಅಗಲದ ಪ್ರಕಾರ ಇಪ್ಪತ್ತು ಮೊಳ ಉದ್ದವಾಗಿತ್ತು; ಮನೆಯ ಮುಂದೆ ಇರುವ ಅದರ ಅಗಲವು ಹತ್ತು ಮೊಳವು.
3 O pórtico, à entrada do templo, tinha vinte côvados de comprimento, o que igualava a largura do templo, e dez côvados de largura na frente do edifício.
4 ಅವನು ಸಣ್ಣ ಕನ್ನಡಿಗಳುಳ್ಳ ಕಿಟಿಕಿಗಳನ್ನು ಮನೆಗೆ ಮಾಡಿಸಿದನು; ಇದಲ್ಲದೆ ಮನೆಯ ಗೋಡೆಗೆ ಸೇರಿದ್ದಾಗಿ ಸುತ್ತಲೂ ಕೊಠಡಿಗಳನ್ನು ಕಟ್ಟಿಸಿದನು.
4 O rei fez no templo janelas com grades de madeira.
5 ಮಂದಿರದ ಸುತ್ತಲೂ ದೈವೋಕ್ತಿಯ ಸುತ್ತಲೂ ಗೋಡೆಗಳಿಗೆ ಸವಿಾಪವಾಗಿ ಕೊಠಡಿಗಳನ್ನು ಕಟ್ಟಿಸಿದನು.
5 Construiu, encostados às paredes do edifício, andares que rodeavam o templo e o santuário. Cercou assim o edifício de quartos laterais.
6 ಕೆಳಗಿರುವ ಕೊಠಡಿಯು ಐದು ಮೊಳ ಅಗಲ, ಎರಡನೇಯದು ಆರು ಮೊಳ ಅಗಲ, ಮೂರನೇಯದು ಏಳು ಮೊಳ ಅಗಲ. ತೊಲೆಗಳು ಮನೆಯ ಗೋಡೆಗಳಲ್ಲಿ ತಗಲದ ಹಾಗೆ ಮನೆಯ ಸುತ್ತಲೂ ಹೊರಗಡೆಯಲ್ಲಿ ನಿಲ್ಲುವ ಅಂತಸ್ತುಗಳನ್ನು ಕಟ್ಟಿಸಿದನು.
6 O andar inferior tinha cinco côvados de largura, o do meio seis e o terceiro sete, porque se tinham posto encostas nos muros exteriores do templo para evitar que as vigas entrassem nas paredes do edifício.
7 ಮನೆಯನ್ನು ಕಟ್ಟುತ್ತಿರುವಾಗ ಅದು ಸಿದ್ಧವಾಗಿ ತರಲ್ಪಟ್ಟ ಕಲ್ಲುಗಳಿಂದ ಕಟ್ಟಲ್ಪಟ್ಟಿತು. ಆದದರಿಂದ ಮನೆಯನ್ನು ಕಟ್ಟುತ್ತಿರುವಾಗ ಅದರಲ್ಲಿ ಸುತ್ತಿಗೆ, ಕೊಡಲಿ, ಕಬ್ಬಿಣದ ಯಾವ ಸಾಮಾನಿನ ಶಬ್ದ ಕೇಳಲ್ಪಟ್ಟಿದ್ದಿಲ್ಲ.
7 Na construção do templo só se empregaram pedras lavradas na pedreira, de sorte que não se ouvia durante os trabalhos da construção barulho algum de martelo, de cinzel ou de outro qualquer instrumento de ferro.
8 ಮಧ್ಯ ಕೊಠಡಿಯ ಬಾಗಲು ಮನೆಯ ಬಲ ಭಾಗದಲ್ಲಿ ಇತ್ತು; ಸುತ್ತಲಾಗುವ ಮೆಟ್ಟ ಲುಗಳಿಂದ ಮಧ್ಯ ಕೊಠಡಿಗೂ ಮಧ್ಯ ಕೊಠಡಿಯಿಂದ ಮೂರನೇ ಕೊಠಡಿಗೂ ಹತ್ತಿದರು.
8 A entrada do andar inferior encontrava-se do lado direito do edifício. Subia-se por uma escada em espiral ao andar do meio, e deste ao terceiro.
9 ಹೀಗೆಯೇ ಅವನು ಮನೆಯನ್ನು ಕಟ್ಟಿ ತೀರಿಸಿದ ತರುವಾಯ ಮನೆಯನ್ನು ದೇವದಾರುಗಳ ತೊಲೆಗಳಿಂದಲೂ ಹಲಿ ಗೆಗಳಿಂದಲೂ ಮುಚ್ಚಿಸಿದನು.
9 Terminado o edifício, Salomão recobriu-o de tábuas e de forros de cedro.
10 ಅವನು ಐದು ಮೊಳ ಎತ್ತರವಾದ ಕೊಠಡಿಗಳನ್ನು ಮನೆಯ ಬಳಿಯಲ್ಲಿ ಸುತ್ತಲೂ ಕಟ್ಟಿಸಿದನು; ಅವು ಮನೆಯ ಮೇಲೆ ಇರಿ ಸಿದ ದೇವದಾರು ತೊಲೆಗಳ ಮೇಲೆ ನಿಂತಿದ್ದವು.
10 Os andares que construiu encostados em todo o edifício eram de cinco côvados de altura cada um e foram ligados ao templo por traves de cedro.
11 ಆಗ ಕರ್ತನ ವಾಕ್ಯವು ಸೊಲೊಮೋನನಿಗೆ ಉಂಟಾಗಿ ಹೇಳಿದ್ದೇನಂದರೆ--
11 A palavra do Senhor foi então dirigida a Salomão nestes termos:
12 ನೀನು ಕಟ್ಟಿಸುವ ಈ ಮನೆಯನ್ನು ಕುರಿತು ಏನಂದರೆ--ನೀನು ನನ್ನ ಕಟ್ಟಳೆ ಗಳಲ್ಲಿ ನಡೆದು ನನ್ನ ನ್ಯಾಯಗಳ ಪ್ರಕಾರಮಾಡಿ ನನ್ನ ಸಕಲ ಆಜ್ಞೆಗಳಲ್ಲಿ ನಡೆದುಕೊಳ್ಳುವ ಹಾಗೆ ಅವುಗಳನ್ನು ಕೈಕೊಂಡರೆ ನಾನು ನಿನ್ನ ತಂದೆಯಾದ ದಾವೀದನಿಗೆ ಹೇಳಿದ ನನ್ನ ವಾಕ್ಯವನ್ನು ನಿನಗೆ ಸ್ಥಿರ ಮಾಡಿ,
12 Esta casa que tu edificas... se obedeceres às minhas leis, praticares os meus mandamentos e observares todos os meus preceitos, seguindo-os cuidadosamente, eu cumprirei em ti as promessas que fiz ao teu pai Davi:
13 ನನ್ನ ಜನವಾದ ಇಸ್ರಾಯೇಲ್ಯರನ್ನು ಕೈಬಿಡದೆ ಇಸ್ರಾಯೇಲ್‌ ಮಕ್ಕಳ ಮಧ್ಯದಲ್ಲಿ ವಾಸ ವಾಗಿರುವೆನು ಅಂದನು.
13 permanecerei no meio dos israelitas e não abandonarei Israel, meu povo.
14 ಸೊಲೊಮೋನನು ಮನೆಯನ್ನು ಕಟ್ಟಿಸಿ ತೀರಿಸಿ ದನು.
14 Salomão terminou a construção do templo.
15 ಮನೆಯ ಗೋಡೆಗಳ ಒಳಭಾಗಕ್ಕೆ ಮಂದಿ ರದ ನೆಲ ಮೊದಲುಗೊಂಡು ಗೋಡೆಗಳ ಮೇಲೆ ಮಾಳಿಗೆಯ ವರೆಗೂ ದೇವದಾರು ಹಲಿಗೆಗಳಿಂದ ಕಟ್ಟಿಸಿದನು; ಒಳ ಭಾಗದಲ್ಲಿ ಮರದಿಂದ ಮುಚ್ಚಿ ಮನೆಯ ನೆಲಕ್ಕೆ ತುರಾಯಿ ಮರಗಳ ಹಲಿಗೆಗಳಿಂದ ಮುಚ್ಚಿದನು.
15 Forrou o interior das paredes do edifício com placas de cedro, desde o pavimento até o teto; revestiu assim de madeira todo o interior e cobriu o pavimento com tábuas de cipreste.
16 ಅವನು ಮನೆಯ ಪಾರ್ಶ್ವಗಳಲ್ಲಿ ಇಪ್ಪತ್ತು ಮೊಳ ನೆಲವನ್ನೂ ಗೋಡೆಗಳನ್ನೂ ದೇವ ದಾರುಗಳ ಹಲಿಗೆಗಳಿಂದ ಕಟ್ಟಿಸಿದನು. ಅವುಗಳನ್ನು ಒಳ ಭಾಗದಲ್ಲಿ ಮಹಾ ಪರಿಶುದ್ಧವಾದ ದೈವೋಕ್ತಿಯ ಸ್ಥಾನವಾಗಿ ಕಟ್ಟಿಸಿದನು.
16 Revestiu de tábuas de cedro, a partir do fundo do templo, desde o pavimento até o teto, um espaço de vinte côvados, que destinou ao santuário, ou santo dos santos.
17 ಮಂದಿರದ ಮುಂದಿನ ಭಾಗವು ನಾಲ್ವತ್ತು ಮೊಳ ಉದ್ದವಾಗಿತ್ತು.
17 Os quarenta côvados restantes constituíam a parte anterior do templo.
18 ಮಂದಿ ರದ ಒಳಗಿರುವ ದೇವದಾರು ಮೊಗ್ಗುಗಳೂ ವಿಕಸಿ ಸಿದ ಪುಷ್ಪಗಳೂ ಕೆತ್ತಿದ ಕೆಲಸವಾಗಿದ್ದವು. ಒಂದು ಕಲ್ಲಾದರೂ ಕಾಣಿಸದ ಹಾಗೆ ಅವೆಲ್ಲಾ ದೇವದಾರ ದ್ದಾಗಿತ್ತು.
18 Dentro do edifício o cedro era esculpido de coloquíntidas e flores abertas; tudo era de cedro; não se via a pedra.
19 ಕರ್ತನ ಒಡಂಬಡಿಕೆಯ ಮಂಜೂಷವನ್ನು ಅಲ್ಲಿ ಇರಿಸುವದಕ್ಕೆ ಮನೆಯೊಳಗೆ ದೈವೋಕ್ತಿಯ ಸ್ಥಾನವನ್ನು ಸಿದ್ಧಮಾಡಿಸಿದನು.
19 Salomão dispôs o santuário no interior do templo, bem ao fundo, para ali colocar a arca da aliança do Senhor.
20 ದೈವೋಕ್ತಿಯ ಸ್ಥಾನದ ಮುಂಭಾಗವು ಇಪ್ಪತ್ತು ಮೊಳ ಉದ್ದವೂ ಇಪ್ಪತ್ತು ಮೊಳ ಅಗಲವೂ ಇಪ್ಪತ್ತು ಮೊಳ ಎತ್ತರವೂ ಆಗಿತ್ತು. ಅದನ್ನು ಶುದ್ಧ ಚಿನ್ನದಿಂದ ಹೊದಿಸಿದನು. ದೇವ ದಾರು ಮರದ ಪೀಠವನ್ನು ಹಾಗೆಯೇ ಹೊದಿಸಿದನು.
20 O santuário tinha por dentro vinte côvados de comprimento, vinte de largura e vinte de altura. Salomão revestiu-o de ouro fino, e cobriu o altar de cedro.
21 ಸೊಲೊಮೋನನು ಮನೆಯ ಒಳಭಾಗವನ್ನು ಶುದ್ಧ ಚಿನ್ನದಿಂದ ಹೊದಿಸಿ ದೈವೋಕ್ತಿಯ ಸ್ಥಾನದ ಮುಂದೆ ಚಿನ್ನದ ಸರಪಣಿಗಳಿಂದ ವಿಭಾಗವನ್ನು ಮಾಡಿ ಅದನ್ನು ಚಿನ್ನದಿಂದ ಹೊದಿಸಿದನು.
21 Revestiu de ouro fino o interior do edifício e fechou com cadeias de ouro a frente do santuário, que era também revestido de ouro.
22 ಮನೆ ಎಲ್ಲಾ ಮುಗಿ ಯುವ ವರೆಗೂ ಅವನು ಮನೆಯನ್ನೆಲ್ಲಾ ಚಿನ್ನದಿಂದ ಹೊದಿಸಿ ಪರಿಶುದ್ಧಸ್ಥಾನದ ಮುಂಭಾಗದಲ್ಲಿರುವ ಬಲಿ ಪೀಠವನ್ನೆಲ್ಲಾ ಚಿನ್ನದಿಂದ ಹೊದಿಸಿದನು.
22 A casa ficou assim inteiramente coberta de ouro, como também toda a superfície do altar que estava diante do santuário.
23 ಅವನು ದೈವೋಕ್ತಿಯ ಸ್ಥಾನದಲ್ಲಿ ಇಪ್ಪೇ ಮರಗಳಿಂದ ಎರಡು ಕೆರೂಬಿಗಳನ್ನು ಮಾಡಿದನು. ಒಂದೊಂದು ಹತ್ತು ಮೊಳ ಎತ್ತರವಾಗಿತ್ತು.
23 Fez no santuário dois querubins de pau de oliveira, que tinham dez côvados de altura.
24 ಕೆರೂಬಿಯ ಒಂದೊಂದು ರೆಕ್ಕೆ ಐದು ಮೊಳವೂ ಮತ್ತೊಂದು ರೆಕ್ಕೆ ಐದು ಮೊಳವೂ ಆಗಿತ್ತು; ಒಂದು ರೆಕ್ಕೆಯ ಕೊನೆ ಮೊದಲುಗೊಂಡು ಮತ್ತೊಂದು ರೆಕ್ಕೆಯ ಕೊನೆಯ ವರೆಗೂ ಹತ್ತು ಮೊಳವಾಗಿತ್ತು.
24 Cada uma das asas dos querubins tinha cinco côvados, o que fazia dez côvados da extremidade de uma asa à extremidade da outra.
25 ಇನ್ನೊಂದು ಕೆರೂಬಿಯ ರೆಕ್ಕೆಗಳ ಅಂತರವೂ ಹತ್ತು ಮೊಳವಾಗಿತ್ತು. ಎರಡು ಕೆರೂಬಿಗಳಿಗೆ ಒಂದೇ ಅಳ ತೆಯೂ ಒಂದೇ ಆಕಾರವಿತ್ತು.
25 O segundo querubim tinha também dez côvados; os dois tinham a mesma forma e as mesmas dimensões.
26 ಒಂದು ಕೆರೂಬಿಯು ಹತ್ತು ಮೊಳ ಎತ್ತರವಾಗಿತ್ತು: ಇನ್ನೊಂದು ಕೆರೂಬಿಯು ಅದರ ಹಾಗೆಯೇ ಇತ್ತು. ಆ ಕೆರೂಬಿಗಳನ್ನು ಒಳ ಮನೆಯೊಳಗೆ ಇಟ್ಟನು.
26 Um e outro tinham dez côvados de altura.
27 ಆ ಕೆರೂಬಿಗಳು ರೆಕ್ಕೆಗಳನ್ನು ಚಾಚಿರುವದರಿಂದ ಒಂದು ಕೆರೊಬಿಯ ರೆಕ್ಕೆಯು ಈ ಭಾಗದ ಗೋಡೆಯನ್ನೂ ಮತ್ತೊಂದು ಕೆರೂಬಿಯ ರೆಕ್ಕೆಯು ಆ ಭಾಗದ ಗೋಡೆಯನ್ನೂ ಮುಟ್ಟಿತು; ಮನೆಯ ಮಧ್ಯದಲ್ಲಿ ಒಂದರ ರೆಕ್ಕೆ ಮತ್ತೊಂದರ ರೆಕ್ಕೆಯನ್ನು ಮುಟ್ಟಿತು.
27 Salomão pô-los no fundo do templo, no santuário. Tinham as asas estendidas, de sorte que uma asa do primeiro tocava uma das paredes e uma asa do segundo tocava a outra parede, enquanto as outras duas asas se encontravam no meio do santuário.
28 ಆ ಕೆರೂಬಿಗಳನ್ನು ಚಿನ್ನದಿಂದ ಹೊದಿಸಿದನು.
28 Revestiu também de ouro os querubins.
29 ಮನೆಯ ಗೋಡೆಗಳನ್ನೆಲ್ಲಾ ಅವನು ಸುತ್ತಲೂ ಒಳ ಹೊರ ಭಾಗಗಳಲ್ಲಿ ಕೆರೂಬಿಗಳನ್ನೂ ಖರ್ಜೂರದ ಗಿಡಗಳನ್ನೂ ವಿಕಸಿಸಿದ ಪುಷ್ಪಗಳನ್ನೂ ಕೆತ್ತಿದ ಕೆಲಸದಿಂದ ಮಾಡಿಸಿದನು.
29 Mandou esculpir em relevo em todas as paredes da casa, ao redor, no santuário como no templo, querubins, palmas e flores abertas.
30 ಮನೆಯ ಒಳ ಹೊರ ಭಾಗವಾಗಿರುವ ನೆಲವನ್ನು ಚಿನ್ನದಿಂದ ಹೊದಿಸಿ ದನು.
30 Cobriu de ouro o pavimento do edifício, tanto o do santuário como o do templo.
31 ಅವನು ದೈವೋಕ್ತಿಯ ಸ್ಥಾನದಬಾಗಲಿಗೆ ಇಪ್ಪೇ ಮರಗಳಿಂದ ಜೋಡು ಕದಗಳನ್ನು ಮಾಡಿಸಿ ದನು. ದ್ವಾರಬಂಧವೂ ನಿಲುವುಗಳೂ ಐದರಲ್ಲಿ ಒಂದು ಭಾಗವಾಗಿದ್ದವು.
31 Pôs à porta do santuário vigas de pau de oliveira; o seu enquadramento com as ombreiras ocupava a quinta parte da parede.
32 ಇಪ್ಪೇ ಮರದ ಆ ಎರಡು ಕದಗಳ ಮೇಲೆ ಅವನು ಕೆರೂಬಿಗಳೂ ಖರ್ಜೂರ ಗಿಡಗಳೂ ಅರಳಿದ ಪುಷ್ಪಗಳೂ ಆದ ಚಿತ್ರಗಳನ್ನು ಮಾಡಿಸಿ ಚಿನ್ನದಿಂದ ಹೊದಿಸಿದನು. ಆ ಕೆರೂಬಿಗಳನ್ನೂ ಖರ್ಜೂರ ಗಿಡಗಳನ್ನೂ ಚಿನ್ನದಿಂದ ಹೊದಿಸಿದನು.
32 Nos dois batentes de pau de oliveira mandou esculpir querubins, palmas e flores desabrochadas, e cobriu-as de ouro; cobriu de ouro tanto os querubins como as palmas.
33 ಇದಲ್ಲದೆ ಮಂದಿರದ ಬಾಗಲಿಗೆ ಇಪ್ಪೇ ಮರದ ನಿಲುವುಗಳನ್ನು ಮಾಡಿಸಿದನು. ಅದು ನಾಲ್ಕರಲ್ಲಿ ಒಂದು ಭಾಗವಾಗಿತ್ತು.
33 Para a porta do templo fez vigas de pau de oliveira que ocupavam a quarta parte da parede,
34 ಅದರ ಎರಡು ಕದಗಳು ತುರಾಯಿ ಮರದ ಹಲಿಗೆಗಳಾಗಿದ್ದವು. ಒಂದು ಕದಕ್ಕೆ ಎರಡು ಮಡಿಸುವ ಹಲಿಗೆಗಳಾಗಿಯೂ ಮತ್ತೊಂದು ಕದಕ್ಕೆ ಎರಡು ಮಡಿಸುವ ಹಲಿಗೆಗಳಾಗಿಯೂ ಇತ್ತು.
34 bem como dois batentes de madeira de cipreste, sendo cada batente formado de duas folhas móveis.
35 ಅದರ ಮೇಲೆ ಕೆರೂಬಿಗಳೂ ಖರ್ಜೂರ ಗಿಡಗಳೂ ಅರಳಿದ ಪುಷ್ಪಗಳೂ ಆದ ಕೆತ್ತಿದ ಕೆಲಸವನ್ನು ಮಾಡಿಸಿ ಕೆತ್ತಿದ ಕೆಲಸಕ್ಕೆ ಸರಿಯಾಗಿ ಚಿನ್ನದಿಂದ ಅವುಗಳನ್ನು ಹೊದಿಸಿದನು.
35 Mandou esculpir nelas querubins, palmas e flores desabrochadas, e cobriu tudo de ouro, ajustado às esculturas.
36 ಅವನು ಒಳಗಿನ ಅಂಗಳವನ್ನು ಕಟ್ಟಿದ ಕಲ್ಲುಗಳಿಂದ ಮೂರು ಸಾಲುಗಳಾಗಿಯೂ ದೇವದಾರಿನ ಸ್ತಂಭಗಳಿಂದ ಒಂದು ಸಾಲಾಗಿಯೂ ಕಟ್ಟಿಸಿದನು.
36 Construiu, ao redor do átrio interior, um muro de três ordens de pedras talhadas e uma fileira de traves de cedro.
37 ನಾಲ್ಕನೇ ವರುಷದ ಜೀಪ್‌ ತಿಂಗಳಲ್ಲಿ ಕರ್ತನ ಆಲಯದ ಅಸ್ತಿವಾರವು ಹಾಕಲ್ಪಟ್ಟಿತು.
37 No mês de Ziv do quarto ano de reinado, foram lançados os fundamentos do templo do Senhor,
38 ಹನ್ನೊಂದನೇ ವರುಷದ ಎಂಟನೇ ತಿಂಗಳಾದ ಬೂಲ್‌ ತಿಂಗಳಲ್ಲಿ ಆ ಮನೆಯು ಅದರ ಎಲ್ಲಾ ಭಾಗಗಳಲ್ಲಿಯೂ ಎಲ್ಲಾ ನ್ಯಾಯದ ಪ್ರಕಾರ ಕಟ್ಟಿ ತೀರಿಸಲ್ಪಟ್ಟಿತು. ಹೀಗೆ ಅವನು ಏಳು ವರುಷಗಳಲ್ಲಿ ಅದನ್ನು ಕಟ್ಟಿಸಿದನು.
38 e no ano undécimo, no mês de Bul, que é o oitavo mês, foi o templo acabado em todas as suas partes e em todos os seus pormenores. O templo foi construído em sete anos.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 1 Reis 6, comparar traduções ou montar um estudo — tudo direto pelo WhatsApp.