1 Reis 21
Kannada Bible (GL_KANNADA) vs ARC
ARC Almeida Revista e Corrigida 2009
1 ಇವುಗಳ ತರುವಾಯ ಏನಾಯಿತಂದರೆ, ಇಜ್ರೆಲಲ್ಲಿ ಸಮಾರ್ಯದ ಅರಸನಾದ ಅಹಾಬನ ಅರಮನೆಯ ಬಳಿಯಲ್ಲಿ ಇಜ್ರೆಲ್ಯನಾದ ನಾಬೋತನಿಗೆ ಒಂದು ದ್ರಾಕ್ಷೇ ತೋಟವಿತ್ತು.
1 E sucedeu, depois destas coisas, tendo Nabote, o jezreelita, uma vinha que em Jezreel estava junto ao palácio de Acabe, rei de Samaria,
2 ಅಹಾ ಬನು ನಾಬೋತನಿಗೆ--ನಿನ್ನ ದ್ರಾಕ್ಷೇ ತೋಟವು ನನ್ನ ಮನೆಯ ಬಳಿಯಲ್ಲಿ ಇರುವದರಿಂದ ಅದು ನನಗೆ ಪಲ್ಯದ ತೋಟವಾಗುವ ಹಾಗೆ ಅದನ್ನು ನನಗೆ ಕೊಡು; ನಾನು ಅದಕ್ಕೆ ಬದಲಾಗಿ ಅದಕ್ಕಿಂತ ಒಳ್ಳೇ ದ್ರಾಕ್ಷೇ ತೋಟವನ್ನು ನಿನಗೆ ಕೊಡುವೆನು; ಇಲ್ಲವೆ ನಿನ್ನ ಕಣ್ಣು ಗಳಿಗೆ ಒಳ್ಳೇದಾಗಿದ್ದರೆ ಹಣದಲ್ಲಿ ಅದರ ಬೆಲೆಯನ್ನು ಕೊಡುವೆನು ಅಂದನು.
2 que Acabe falou a Nabote, dizendo: Dá-me a tua vinha, para que me sirva de horta, pois está vizinha, ao pé da minha casa; e te darei por ela outra vinha melhor do que ela; ou, se parece bem aos teus olhos, dar-te-ei a sua valia em dinheiro.
3 ಆದರೆ ನಾಬೋತನು ಅಹಾಬನಿಗೆ--ನಾನು ನನ್ನ ಪಿತೃಗಳ ಬಾಧ್ಯತೆಯನ್ನು ನಿನಗೆ ಕೊಡುವದನ್ನು ಕರ್ತನು ನನಗೆ ದೂರವಾಗ ಮಾಡಲಿ ಅಂದನು.
3 Porém Nabote disse a Acabe: Guarde-me o Senhor de que eu te dê a herança de meus pais.
4 ನಾನು ನನ್ನ ಪಿತೃಗಳ ಬಾಧ್ಯತೆ ಯನ್ನು ನಿನಗೆ ಕೊಡುವದಿಲ್ಲವೆಂದು ಇಜ್ರೇಲ್ಯನಾದ ನಾಬೋತನು ಹೇಳಿದ ಮಾತಿಗೋಸ್ಕರ ಅಹಾಬನು ವ್ಯಸನದಿಂದಲೂ ಕೋಪದಿಂದಲೂ ತನ್ನ ಮನೆಗೆ ಬಂದು ತನ್ನ ಮಂಚದ ಮೇಲೆ ಮಲಗಿ ತನ್ನ ಮುಖ ವನ್ನು ತಿರುಗಿಸಿಕೊಂಡು ರೊಟ್ಟಿ ತಿನ್ನದೆ ಇದ್ದನು.
4 Então, Acabe veio desgostoso e indignado à sua casa, por causa da palavra que Nabote, o jezreelita, lhe falara, dizendo: Não te darei a herança de meus pais. E deitou-se na sua cama, e voltou o rosto, e não comeu pão.
5 ಆಗ ಅವನ ಹೆಂಡತಿಯಾದ ಈಜೆಬೆಲಳು ಅವನ ಬಳಿಗೆ ಬಂದು ಅವನಿಗೆ--ನೀನು ರೊಟ್ಟಿ ತಿನ್ನದ ಹಾಗೆ ನಿನ್ನ ಪ್ರಾಣ ವ್ಯಸನವುಳ್ಳದ್ದಾಗಿರುವದೇನು ಅಂದಳು.
5 Porém, vindo a ele Jezabel, sua mulher, lhe disse: Que há, que está tão desgostoso o teu espírito, e não comes pão?
6 ಅವನು ಅವಳಿಗೆ--ನಾನು ಇಜ್ರೇಲ್ಯನಾದ ನಾಬೋ ತನ ಸಂಗಡ ಮಾತನಾಡಿ--ನಿನ್ನ ದ್ರಾಕ್ಷೇ ತೋಟವನ್ನು ನನಗೆ ಕ್ರಯಕ್ಕೆ ಕೊಡು; ಇಲ್ಲವೆ ನಿನಗೆ ಮನಸ್ಸಿದ್ದರೆ ಅದಕ್ಕೆ ಬದಲಾಗಿ ಬೇರೆ ದ್ರಾಕ್ಷೇ ತೋಟವನ್ನು ಕೊಡು ವೆನು ಎಂದು ಅವನಿಗೆ ಹೇಳಿದೆನು. ಅದಕ್ಕವನುನನ್ನ ದ್ರಾಕ್ಷೇ ತೋಟವನ್ನು ಕೊಡುವದಿಲ್ಲ ಅಂದನು ಎಂದು ಹೇಳಿದನು.
6 E ele lhe disse: Porque falei a Nabote, o jezreelita, e lhe disse: Dá-me a tua vinha por dinheiro; ou, se te apraz, te darei outra vinha em seu lugar. Porém ele disse: Não te darei a minha vinha.
7 ಆಗ ಅವನ ಹೆಂಡತಿಯಾದ ಈಜೆಬೆಲಳು ಅವನಿಗೆ--ನೀನು ಈಗ ಇಸ್ರಾಯೇಲಿನ ರಾಜ್ಯವನ್ನು ಆಳುತ್ತಾ ಇದ್ದೀಯೊ? ಎದ್ದು ರೊಟ್ಟಿತಿನ್ನು; ನಿನ್ನ ಹೃದಯ ಸಂತೋಷವಾಗಿರಲಿ. ನಾನೇ ಇಜ್ರೇಲ್ಯನಾದ ನಾಬೋತನ ದ್ರಾಕ್ಷೇ ತೋಟವನ್ನು ನಿನಗೆ ಕೊಡುವೆನು ಅಂದಳು.
7 Então, Jezabel, sua mulher, lhe disse: Governas tu, agora, no reino de Israel? Levanta-te, come pão, e alegre-se o teu coração; eu te darei a vinha de Nabote, o jezreelita.
8 ಹೀಗೆ ಅವಳು ಅಹಾ ಬನ ಹೆಸರಿನಲ್ಲಿ ಪತ್ರಗಳನ್ನು ಬರೆದು ಅವುಗಳಿಗೆ ಅವನ ಮುದ್ರೆ ಹಾಕಿ ಆ ಪತ್ರಗಳನ್ನು ನಾಬೋತನ ಸಂಗಡ ಅವನ ಪಟ್ಟಣದಲ್ಲಿ ವಾಸವಾಗಿರುವ ಹಿರಿಯ ರಿಗೂ ಗೌರವಸ್ಥರಿಗೂ ಕಳುಹಿಸಿದಳು.
8 Então, escreveu cartas em nome de Acabe, e as selou com o seu sinete, e mandou as cartas aos anciãos e aos nobres que havia na sua cidade e habitavam com Nabote.
9 ಅವಳು ಪತ್ರಗಳಲ್ಲಿ--ನೀವು ಉಪವಾಸವನ್ನು ಪ್ರಕಟಮಾಡಿ ನಾಬೋತನನ್ನು ಜನರೊಳಗೆ ಎತ್ತರದ ಸ್ಥಳದಲ್ಲಿ ನಿಲ್ಲಿಸಿ--
9 E escreveu nas cartas, dizendo: Apregoai um jejum e ponde Nabote acima do povo.
10 ನೀನು ದೇವರನ್ನೂ ಅರಸನನ್ನೂ ದೂಷಿ ಸಿದಿ ಎಂದು ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಲು ಅವನ ಮುಂದೆ ಬೆಲಿಯಾಳನ ಮಕ್ಕಳಾದ ಇಬ್ಬರು ಮನುಷ್ಯರನ್ನು ನಿಲ್ಲಿಸಿರಿ; ತರುವಾಯ ಅವನನ್ನು ಹೊರಗೆ ತಕ್ಕೊಂಡು ಹೋಗಿ ಅವನು ಸಾಯುವ ಹಾಗೆ ಕಲ್ಲೆಸೆಯಿರಿ ಎಂದು ಬರೆದಿತ್ತು.
10 E ponde defronte dele dois homens, filhos de Belial, que testemunhem contra ele, dizendo: Blasfemaste contra Deus e contra o rei; e trazei-o fora e apedrejai-o para que morra.
11 ಆಗ ಅವನ ಪಟ್ಟಣದಲ್ಲಿರುವ ಹಿರಿಯರೂ ಗೌರವಸ್ಥರೂ ತಮಗೆ ಈಜೆಬೆಲಳು ಕಳುಹಿಸಿದ ಪತ್ರದ ಪ್ರಕಾರವೇ ಮಾಡಿ ದರು.
11 E os homens da sua cidade, os anciãos e os nobres que habitavam na sua cidade fizeram como Jezabel lhes ordenara, conforme estava escrito nas cartas que lhes mandara.
12 ಅವರು ಉಪವಾಸವನ್ನು ಪ್ರಕಟಮಾಡಿ ನಾಬೋತನನ್ನು ಜನರೊಳಗೆ ಎತ್ತರ ಸ್ಥಳದಲ್ಲಿ ನಿಲ್ಲಿಸಿ ದರು.
12 Apregoaram um jejum e puseram Nabote acima do povo.
13 ಆಗ ಬೆಲಿಯಾಳನ ಮಕ್ಕಳಾದ ಇಬ್ಬರು ಮನುಷ್ಯರು ಬಂದು ಅವನಿಗೆದುರಾಗಿ ಕುಳಿತು ಕೊಂಡರು; ಈ ಬೆಲಿಯಾಳನ ಮನುಷ್ಯರು ಜನರ ಸಮ್ಮುಖದಲ್ಲಿ ನಾಬೋತನಿಗೆ ವಿರೋಧವಾಗಿ--ಈ ನಾಬೋತನು ದೇವರನ್ನೂ ಅರಸನನ್ನೂ ದೂಷಿಸಿದ ನೆಂದು ಸಾಕ್ಷಿ ಹೇಳಿದರು. ಆಗ ಅವನನ್ನು ಪಟ್ಟಣದ ಹೊರಗೆ ತಕ್ಕೊಂಡು ಹೋಗಿ ಅವನು ಸಾಯುವ ಹಾಗೆ ಅವರು ಅವನಿಗೆ ಕಲ್ಲೆಸೆದರು. ಅವನು ಸತ್ತನು.
13 Então, vieram dois homens, filhos de Belial, e puseram-se defronte dele; e os homens, filhos de Belial, testemunharam contra ele, contra Nabote, perante o povo, dizendo: Nabote blasfemou contra Deus e contra o rei. E o levaram para fora da cidade e o apedrejaram com pedras, e morreu.
14 ಅವರು ಈಜೆಬೆಲಳಿಗೆ--ನಾಬೋತನು ಕಲ್ಲೆಸೆಯ ಲ್ಪಟ್ಟು ಸತ್ತನೆಂದು ಹೇಳಿ ಕಳುಹಿಸಿದರು.
14 Então, enviaram a Jezabel, dizendo: Nabote foi apedrejado e morreu.
15 ನಾಬೋ ತನು ಕಲ್ಲೆಸೆಯಲ್ಪಟ್ಟು ಸತ್ತಿದ್ದಾನೆಂದು ಈಜೆಬೆಲಳು ಕೇಳಿದಾಗ ಅವಳು ಅಹಾಬನಿಗೆ--ನೀನೆದ್ದು ಇಜ್ರೇಲ್ಯ ನಾದ ನಾಬೋತನು ಬೆಲೆಗೆ ಕೊಡಲು ಸಮ್ಮತಿಸ ದಿದ್ದ ದ್ರಾಕ್ಷೇ ತೋಟವನ್ನು ಸ್ವಾಧೀನ ಮಾಡಿಕೋ; ಯಾಕಂದರೆ ನಾಬೋತನು ಜೀವದಿಂದ ಇಲ್ಲ, ಸತ್ತಿ ದ್ದಾನೆ ಅಂದಳು.
15 E sucedeu que, ouvindo Jezabel que já fora apedrejado Nabote e morrera, disse Jezabel a Acabe: Levanta-te e possui a vinha de Nabote, o jezreelita, a qual ele te recusou dar por dinheiro; porque Nabote não vive, mas é morto.
16 ನಾಬೋತನು ಸತ್ತನೆಂದು ಅಹಾ ಬನು ಕೇಳಿದಾಗ ಅವನೆದ್ದು ಇಜ್ರೇಲ್ಯನಾದ ನಾಬೋ ತನ ದ್ರಾಕ್ಷೇ ತೋಟವನ್ನು ಸ್ವಾಧೀನಮಾಡಿಕೊಳ್ಳಲು ಹೋದನು.
16 E sucedeu que, ouvindo Acabe que já Nabote era morto, Acabe se levantou, para descer para a vinha de Nabote, o jezreelita, para a possuir.
17 ಆಗ ಕರ್ತನ ವಾಕ್ಯವು ತಿಷ್ಬೀಯನಾದ ಎಲೀಯ ನಿಗೆ ಉಂಟಾಯಿತು--
17 Então, veio a palavra do Senhor a Elias, o tisbita, dizendo:
18 ನೀನೆದ್ದು ಸಮಾರ್ಯದ ಲ್ಲಿರುವ ಇಸ್ರಾಯೇಲಿನ ಅರಸನಾದ ಅಹಾಬನಿಗೆದು ರಾಗಿ ಹೋಗು; ಇಗೋ, ಅವನು ನಾಬೋತನ ದ್ರಾಕ್ಷೇ ತೋಟದಲ್ಲಿದ್ದಾನೆ; ಅದನ್ನು ಸ್ವಾಧೀನ ಮಾಡಿ ಕೊಳ್ಳಲು ಅಲ್ಲಿಗೆ ಹೋಗಿದ್ದಾನೆ.
18 Levanta-te, desce para encontrar-te com Acabe, rei de Israel, que está em Samaria; eis que está na vinha de Nabote, aonde tem descido para a possuir.
19 ನೀನು ಅವನಿಗೆನೀನು ಕೊಂದುಹಾಕಿ ಸ್ವಾಧೀನಮಾಡಿಕೊಂಡಿಯಲ್ಲಾ. ಆದದರಿಂದ ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನು ನಿಶ್ಚಯವಾಗಿ ನೆಕ್ಕು ವವು ಎಂದು ಕರ್ತನು ಹೇಳುತ್ತಾನೆಂದು ಅಂದನು.
19 E falar-lhe-ás, dizendo: Assim diz o Senhor : Porventura, não mataste e tomaste a herança? Falar-lhe-ás mais, dizendo: Assim diz o Senhor : No lugar em que os cães lamberam o sangue de Nabote, os cães lamberão o teu sangue, o teu mesmo.
20 ಆಗ ಅಹಾಬನು ಎಲೀಯನಿಗೆ--ನನ್ನ ಶತ್ರುವೇ, ನೀನು ನನ್ನನ್ನು ಕಂಡುಕೊಂಡಿಯಾ ಅಂದನು. ಅದಕ್ಕ ವನು--ಕಂಡುಕೊಂಡೆನು;
20 E disse Acabe a Elias: Já me achaste, inimigo meu? E ele disse: Achei- te; porquanto já te vendeste para fazeres o que é mau aos olhos do Senhor .
21 ನೀನು ಕರ್ತನ ದೃಷ್ಟಿ ಯಲ್ಲಿ ಕೆಟ್ಟದ್ದನ್ನು ಮಾಡುವಂತೆ ನಿನ್ನನ್ನು ಮಾರಿಕೊಂಡ ದ್ದರಿಂದ ಇಗೋ, ನಾನು ನಿನ್ನ ಮೇಲೆ ಕೇಡನ್ನು ಬರಮಾಡಿ ನಿನ್ನ ಸಂತತಿಯನ್ನು ತೆಗೆದುಹಾಕಿ ಅಹಾಬ ನಿಗೆ ಒಬ್ಬ ಗಂಡಸಾದರೂ ಇಸ್ರಾಯೇಲಿನಲ್ಲಿ ಬಚ್ಚಿಡ ಲ್ಪಟ್ಟವನಾದರೂ ಉಳಿದವನಾದರೂ ಇರದ ಹಾಗೆ ತೆಗೆದುಬಿಡುವೆನು.
21 Eis que trarei mal sobre ti, e arrancarei a tua posteridade, e arrancarei de Acabe a todo homem, como também o encerrado e o desamparado em Israel;
22 ನೀನು ನನಗೆ ಎಬ್ಬಿಸಿದ ಕೋಪದ ನಿಮಿತ್ತವೂ ಇಸ್ರಾಯೇಲನ್ನು ಪಾಪ ಮಾಡುವಂತೆ ಮಾಡಿದ್ದರ ನಿಮಿತ್ತವೂ ನಾನು ನಿನ್ನ ಮನೆಯನ್ನು ನೆಬಾಟನ ಮಗನಾದ ಯಾರೊಬ್ಬಾಮನ ಮನೆಯ ಹಾಗೆಯೂ ಅಹೀಯನ ಮಗನಾದ ಬಾಷನ ಮನೆಯ ಹಾಗೆಯೂ ಮಾಡುವೆನು ಅಂದನು.
22 e farei a tua casa como a casa de Jeroboão, filho de Nebate, e como a casa de Baasa, filho de Aías, por causa da provocação com que me provocaste e fizeste pecar a Israel.
23 ಈಜೆಬೆಲ ಳನ್ನು ಕುರಿತು ಕರ್ತನು--ನಾಯಿಗಳು ಈಜೆಬೆಲಳನ್ನು ಇಜ್ರೇಲಿನ ಗೋಡೆಯ ಬಳಿಯಲ್ಲಿ ತಿನ್ನುವವು.
23 E também acerca de Jezabel falou o Senhor , dizendo: Os cães comerão Jezabel junto ao antemuro de Jezreel.
24 ಅಹಾಬನವರಲ್ಲಿ ಪಟ್ಟಣದೊಳಗೆ ಯಾವನು ಸಾಯುವನೋ ಅವನನ್ನು ನಾಯಿಗಳು ತಿನ್ನುವವು; ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವವು ಎಂದು ಹೇಳುತ್ತಾನೆ ಅಂದನು.
24 Aquele que de Acabe morrer na cidade, os cães o comerão, e o que morrer no campo, as aves do céu o comerão.
25 ಆದರೆ ತನ್ನ ಹೆಂಡತಿಯಾದ ಈಜೆಬೆಲಳಿಂದ ಪ್ರೇರೇಪಿಸಲ್ಪಟ್ಟು ಕರ್ತನ ಸಮ್ಮುಖದಲ್ಲಿ ಕೆಟ್ಟತನವನ್ನು ಮಾಡಲು ತನ್ನನ್ನು ಮಾರಿಬಿಟ್ಟ ಅಹಾಬನ ಹಾಗೆ ಯಾವನೂ ಇರಲಿಲ್ಲ.
25 Porém ninguém fora como Acabe, que se vendera para fazer o que era mau aos olhos do Senhor , porque Jezabel, sua mulher, o incitava.
26 ಇದಲ್ಲದೆ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿಬಿಟ್ಟ ಅಮೋರಿಯರ ಎಲ್ಲಾ ಕೃತ್ಯಗಳ ಪ್ರಕಾರ ಅವನು ವಿಗ್ರಹಗಳನ್ನು ಹಿಂಬಾ ಲಿಸಿ ಬಹಳ ಅಸಹ್ಯವಾಗಿ ನಡೆದನು.
26 E fez grandes abominações, seguindo os ídolos, conforme tudo o que fizeram os amorreus, os quais o Senhor lançou fora da sua possessão, de diante dos filhos de Israel.
27 ಆದರೆ ಅಹಾಬನು ಆ ಮಾತುಗಳನ್ನು ಕೇಳಿದಾಗ ಏನಾಯಿತಂದರೆ, ಅವನು ತನ್ನ ವಸ್ತ್ರಗಳನ್ನು ಹರಿದು ತನ್ನ ಶರೀರದ ಮೇಲೆ ಗೋಣಿಯನ್ನು ಹಾಕಿಕೊಂಡು ಉಪವಾಸಮಾಡಿ ಗೋಣಿಯಲ್ಲಿ ಮಲಗಿಕೊಂಡು ಮೆಲ್ಲಗೆ ನಡೆದನು.
27 Sucedeu, pois, que Acabe, ouvindo estas palavras, rasgou as suas vestes, e cobriu a sua carne de pano de saco, e jejuou; e dormia em cima de sacos e andava mansamente.
28 ಆಗ ಕರ್ತನ ವಾಕ್ಯವು ತಿಷ್ಬೀಯ ನಾದ ಎಲೀಯನಿಗೆ ಉಂಟಾಗಿ--
28 Então, veio a palavra do Senhor a Elias, o tisbita, dizendo:
29 ಅಹಾಬನು ನನ್ನ ಮುಂದೆ ತನ್ನನ್ನು ತಗ್ಗಿಸಿದ್ದನ್ನು ಕಂಡಿಯಾ? ಅವನು ನನ್ನ ಮುಂದೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಅವನ ದಿವಸಗಳಲ್ಲಿ ಆ ಕೇಡನ್ನು ಬರಮಾಡದೆ ಅವನ ಮಗನ ದಿವಸಗಳಲ್ಲಿ ಅವನ ಮನೆಯ ಮೇಲೆ ಬರ ಮಾಡುವೆನು ಅಂದನು.
29 Não viste que Acabe se humilha perante mim? Porquanto, pois, se humilha perante mim, não trarei este mal nos seus dias, mas nos dias de seu filho trarei este mal sobre a sua casa.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar 1 Reis 21, comparar traduções ou montar um estudo — tudo direto pelo WhatsApp.