1 Crônicas 28
Kannada Bible (GL_KANNADA) vs ACF
ACF Almeida Corrigida Fiel
1 ದಾವೀದನು ಇಸ್ರಾಯೇಲಿನ ಸಮಸ್ತ ಪ್ರಧಾನರಾದ ಗೋತ್ರಗಳ ಪ್ರಧಾನ ರನ್ನೂ ವರ್ಗವರ್ಗವಾಗಿ ಅರಸನನ್ನು ಸೇವಿಸುವ ಸಭೆಗಳ ಪ್ರಧಾನರನ್ನೂ ಸಹಸ್ರಾಧಿಪತಿಗಳನ್ನೂ ಶತಾಧಿಪತಿಗಳನ್ನೂ ಅರಸನ ಸ್ವಾಸ್ಥ್ಯದ ಮೇಲೆಯೂ ಅವನ ಕುಮಾರರ ಸ್ವಾಸ್ಥ್ಯಗಳ ಮೇಲೆಯೂ ಇರುವ ಪ್ರಧಾನರನ್ನೂ ಅಧಿಕಾರಿಗಳನ್ನೂ ಪರಾಕ್ರಮಶಾಲಿ ಗಳನ್ನೂ ಶೂರರನ್ನೂ ಯೆರೂಸಲೇಮಿಗೆ ಕೂಡಿ ಬರ ಮಾಡಿದನು.
1 Então Davi reuniu em Jerusalém todos os príncipes de Israel, os príncipes das tribos, e os capitães das turmas, que serviam o rei, e os capitães dos milhares, e os capitães das centenas, e os administradores de toda a fazenda e possessão do rei, e de seus filhos, como também os oficiais, os poderosos, e todo o homem valente.
2 ಆಗ ಅರಸನಾದ ದಾವೀದನು ಎದ್ದು ನಿಂತು ಹೇಳಿದ್ದೇನಂದರೆ--ನನ್ನ ಸಹೋದರರೇ, ನನ್ನ ಜನರೇ, ನನ್ನ ಮಾತು ಕೇಳಿರಿ, ಕರ್ತನ ಒಡಂಬಡಿ ಕೆಯ ಮಂಜೂಷದ ನಿಮಿತ್ತವಾಗಿಯೂ ನಮ್ಮ ದೇವರ ಪಾದಪೀಠದ ನಿಮಿತ್ತವಾಗಿಯೂ ವಿಶ್ರಾಂತಿಯಾದ ಮನೆಯನ್ನು ನಾನು ಕಟ್ಟಿಸಲು ಮನಸ್ಸಾಗಿದ್ದು ಕಟ್ಟುವಿ ಕೆಯ ನಿಮಿತ್ತ ಸಿದ್ಧಮಾಡಿದೆನು.
2 E pôs-se o rei Davi em pé, e disse: Ouvi-me, irmãos meus, e povo meu; em meu coração propus eu edificar uma casa de repouso para a arca da aliança do Senhor e para o estrado dos pés do nosso Deus, e eu tinha feito o preparo para a edificar.
3 ಆದರೆ ದೇವರು ನನಗೆ--ನೀನು ನನ್ನ ಹೆಸರಿಗೆ ಮನೆಯನ್ನು ಕಟ್ಟಬೇಡ; ಯಾಕಂದರೆ ನೀನು ಯುದ್ಧದ ಮನುಷ್ಯನಾಗಿದ್ದೀ; ರಕ್ತವನ್ನು ಚೆಲ್ಲಿದ್ದೀ ಅಂದನು.
3 Porém Deus me disse: Não edificarás casa ao meu nome, porque és homem de guerra, e derramaste muito sangue.
4 ಆದರೆ ಇಸ್ರಾಯೇಲಿನ ಕರ್ತನಾದ ದೇವರು ಎಂದೆಂದಿಗೂ ಇಸ್ರಾಯೇಲಿನ ಮೇಲೆ ಅರಸನಾಗಿರಲು ನನ್ನ ತಂದೆಯ ಮನೆಯ ಸಮಸ್ತರಿಂದ ನನ್ನನ್ನು ಆದುಕೊಂಡನು. ಯಾಕಂದರೆ ನಾನು ನಾಯಕನಾಗಿರಲು ಯೆಹೂದನನ್ನೂ ಯೆಹೂ ದನ ಮನೆಯಲ್ಲಿ ನನ್ನ ತಂದೆಯ ಮನೆಯನ್ನೂ ಆದು ಕೊಂಡು ನನ್ನ ತಂದೆಯ ಕುಮಾರರಲ್ಲಿ ನನ್ನನ್ನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗ ಮಾಡಲು ಚಿತ್ತ ವುಳ್ಳವನಾಗಿದ್ದನು;
4 E o Senhor Deus de Israel escolheu-me de toda a casa de meu pai, para que eternamente fosse rei sobre Israel; porque a Judá escolheu por soberano, e a casa de meu pai na casa de Judá; e entre os filhos de meu pai se agradou de mim para me fazer reinar sobre todo o Israel.
5 ಕರ್ತನು ನನಗೆ ಅನೇಕ ಕುಮಾ ರರನ್ನು ಕೊಟ್ಟಿರುವಾಗ ನನ್ನ ಸಮಸ್ತ ಕುಮಾರರಲ್ಲಿ ಇಸ್ರಾಯೇಲಿನ ಮೇಲಾಗಿ ಕರ್ತನ ರಾಜ್ಯದ ಸಿಂಹಾ ಸನದ ಮೇಲೆ ಕುಳಿತುಕೊಳ್ಳುವದಕ್ಕೆ ನನ್ನ ಮಗನಾದ ಸೊಲೊಮೋನನನ್ನು ಆದುಕೊಂಡನು.
5 E, de todos os meus filhos (porque muitos filhos me deu o Senhor), escolheu ele o meu filho Salomão para se assentar no trono do reino do Senhor sobre Israel.
6 ಆತನು ನನ್ನ ಸಂಗಡ--ನಿನ್ನ ಮಗನಾದ ಸೊಲೊಮೋನನು ತಾನೇನನ್ನ ಮನೆಯನ್ನೂ ಅಂಗಳಗಳನ್ನೂ ಕಟ್ಟಿಸುವನು; ಅವನನ್ನು ನನಗೆ ಮಗನಾಗಿರಲು ಆದುಕೊಂಡೆನು. ನಾನು ಅವನಿಗೆ ತಂದೆಯಾಗಿರುವೆನು.
6 E me disse: Teu filho Salomão, ele edificará a minha casa e os meus átrios; porque o escolhi para filho, e eu lhe serei por pai.
7 ಇದಲ್ಲದೆ ಈಗಿನಂತೆ ನನ್ನ ಆಜ್ಞೆಗಳನ್ನೂ ನ್ಯಾಯಗಳನ್ನೂ ಅವನು ನಡಿಸಲು ದೃಢವಾಗಿದ್ದರೆ ಅವನ ರಾಜ್ಯವನ್ನು ಯುಗ ಯುಗಾಂತರಕ್ಕೂ ಸ್ಥಿರಪಡಿಸುವೆನು ಅಂದನು.
7 E estabelecerei o seu reino para sempre, se perseverar em cumprir os meus mandamentos e os meus juízos, como até ao dia de hoje.
8 ಆದ ದರಿಂದ ನೀವು ಈ ಉತ್ತಮವಾದ ದೇಶವನ್ನು ಸ್ವಾಧೀನ ಮಾಡಿಕೊಂಡು ಅದನ್ನು ನಿರಂತರದಲ್ಲಿ ನಿಮ್ಮ ತರು ವಾಯ ಇರುವ ನಿಮ್ಮ ಮಕ್ಕಳಿಗೆ ಬಾಧ್ಯತೆಯಾಗಿ ಕೊಡುವ ಹಾಗೆ ಕರ್ತನ ಸಭೆಯಾದ ಸಮಸ್ತ ಇಸ್ರಾ ಯೇಲಿನ ಸಮ್ಮುಖದಲ್ಲಿಯೂ ನಮ್ಮ ದೇವರ ಕೇಳುವಿಕೆ ಯಲ್ಲಿಯೂ ನಿಮ್ಮ ದೇವರಾದ ಕರ್ತನ ಆಜ್ಞೆಗಳನ್ನೆಲ್ಲಾ ಹುಡುಕಿ ಕೈಕೊಳ್ಳಿರಿ.
8 Agora, pois, perante os olhos de todo o Israel, a congregação do Senhor, e perante os ouvidos de nosso Deus, guardai e buscai todos os mandamentos do Senhor vosso Deus, para que possuais esta boa terra, e a façais herdar a vossos filhos depois de vós, para sempre.
9 ಇದಲ್ಲದೆ ನನ್ನ ಮಗನಾದ ಸೊಲೊಮೋನನೇ, ನೀನು ನಿನ್ನ ತಂದೆಯ ದೇವ ರನ್ನು ತಿಳಿದು ಆತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಸೇವಿಸು. ಕರ್ತನು ಸಕಲ ಹೃದಯಗಳನ್ನು ಶೋಧಿಸಿ ಯೋಚನೆಗಳ ಕಲ್ಪನೆಯ ನ್ನೆಲ್ಲಾ ತಿಳಿದಿದ್ದಾನೆ. ನೀನು ಆತನನ್ನು ಹುಡುಕಿದರೆ ಆತನು ನಿನಗೆ ಸಿಕ್ಕುವನು; ನೀನು ಆತನನ್ನು ಬಿಟ್ಟು ಬಿಟ್ಟರೆ ಆತನು ನಿನ್ನನ್ನು ಎಂದೆಂದಿಗೂ ತೊರೆದುಬಿಡು ವನು.
9 E tu, meu filho Salomão, conhece o Deus de teu pai, e serve-o com um coração perfeito e com uma alma voluntária; porque esquadrinha o Senhor todos os corações, e entende todas as imaginações dos pensamentos; se o buscares, será achado de ti; porém, se o deixares, rejeitar-te-á para sempre.
10 ಆದದರಿಂದ ಜಾಗ್ರತೆಯಾಗಿರು; ಯಾಕಂದರೆ ಕರ್ತನು ಪರಿಶುದ್ಧ ಸ್ಥಾನಕ್ಕೋಸ್ಕರ ಮನೆಯನ್ನು ಕಟ್ಟಿಸು ವದಕ್ಕೆ ನಿನ್ನನ್ನು ಆದುಕೊಂಡಿದ್ದಾನೆ; ನೀನು ದೃಢವಾ ಗಿದ್ದು ಅದನ್ನು ಮಾಡು ಅಂದನು.
10 Olha, pois, agora, porque o Senhor te escolheu para edificares uma casa para o santuário; esforça-te, e faze a obra.
11 ಆಗ ದಾವೀದನು ತನ್ನ ಮಗನಾದ ಸೊಲೊ ಮೋನನಿಗೆ -- ದ್ವಾರಾಂಗಳದ ಮಾದರಿಯನ್ನೂ ಅದರ ಮನೆಗಳು, ಉಗ್ರಾಣಗಳು, ಮೇಲಿನ ಕೊಠಡಿ ಗಳು, ಅಂತರಂಗದ ಕೊಠಡಿಗಳು, ಕೃಪಾಸನದ ಸ್ಥಾನವು,
11 E deu Davi a Salomão, seu filho, a planta do alpendre com as suas casas, e as suas tesourarias, e os seus cenáculos, e as suas recâmaras interiores, como também da casa do propiciatório.
12 ಕರ್ತನ ಮನೆಯ ಅಂಗಳಗಳು, ಸುತ್ತಲಿ ರುವ ಕೊಠಡಿಗಳಾದ ಕರ್ತನ ಮನೆಯ ಉಗ್ರಾಣ ಗಳು, ಪ್ರತಿಷ್ಠೆ ಮಾಡಿದವುಗಳ ಉಗ್ರಾಣಗಳು, ಆತ್ಮ ದಿಂದ ತನಗುಂಟಾದ ಇವುಗಳ ಸಮಸ್ತ ಮಾದರಿ ಯನ್ನೂ ಕೊಟ್ಟನು.
12 E também a planta de tudo quanto tinha em mente, a saber: dos átrios da casa do Senhor, e de todas as câmaras ao redor, para os tesouros da casa de Deus, e para os tesouros das coisas sagradas;
13 ಇದಲ್ಲದೆ ಯಾಜಕರ ಲೇವಿ ಯರ ವರ್ಗಗಳಿಗೋಸ್ಕರವೂ ಕರ್ತನ ಮನೆಯ ಸೇವೆಯ ಸಮಸ್ತ ಕೆಲಸಕ್ಕೋಸ್ಕರವೂ ಕರ್ತನ ಮನೆ ಯಲ್ಲಿರುವ ಸೇವೆಮಾಡುವ ಸಮಸ್ತ ಪಾತ್ರೆಗಳಿ ಗೋಸ್ಕರವೂ ಕಟ್ಟಳೆ ಕೊಟ್ಟನು.
13 E para as turmas dos sacerdotes, e para os levitas, e para toda a obra do ministério da casa do Senhor, e para todos os utensílios do ministério da casa do Senhor.
14 ಸಕಲ ವಿಧವಾದ ಸೇವೆಗೆ ಸಮಸ್ತ ಬಂಗಾರದ ಸಾಮಾನುಗಳಿಗೋಸ್ಕರ ಬಂಗಾರವನ್ನೂ ಸಕಲವಿಧವಾದ ಸೇವೆಗೆ ಸಮಸ್ತ ಬೆಳ್ಳಿಯ ಸಾಮಾನುಗಳಿಗೋಸ್ಕರ ಬೆಳ್ಳಿಯನ್ನೂ ತೂಗಿ ಕೊಟ್ಟನು.
14 E deu ouro, segundo o peso do ouro, para todos os utensílios de cada ministério; também a prata, por peso, para todos os utensílios de prata, para todos os utensílios de cada ministério.
15 ಬಂಗಾರದ ದೀಪಸ್ತಂಭಗಳಿಗೋಸ್ಕ ರವೂ ಅದರ ಬಂಗಾರದ ದೀಪಗಳಿಗೋಸ್ಕರವೂ ಒಂದೊಂದು ಸ್ತಂಭಕ್ಕೋಸ್ಕರ ತೂಕಮಾಡಿ ಕೊಟ್ಟನು. ಹಾಗೆಯೇ ಬೆಳ್ಳಿಯ ದೀಪಸ್ತಂಭಗಳಿಗೋಸ್ಕರ ದೀಪ ಸ್ತಂಭಕ್ಕೂ ಅದರ ದೀಪಗಳಿಗೂ ಒಂದೊಂದು ದೀಪ ಸ್ತಂಭದ ಕೆಲಸದ ಪ್ರಕಾರ ತೂಕಮಾಡಿ ಕೊಟ್ಟನು.
15 E o peso para os castiçais de ouro, e suas candeias de ouro segundo o peso de cada castiçal e as suas candeias; também para os castiçais de prata, segundo o peso do castiçal e as suas candeias, segundo o uso de cada castiçal.
16 ಆ ಪ್ರಕಾರವೇ ಸಮ್ಮುಖದ ರೊಟ್ಟಿಗಳ ಮೇಜುಗಳಿ ಗೋಸ್ಕರ ಒಂದೊಂದು ಮೇಜಿಗೆ ತೂಗಿಕೊಟ್ಟನು; ಬೆಳ್ಳಿಯ ಮೇಜುಗಳಿಗೋಸ್ಕರ ಹಾಗೆಯೇ ಬೆಳ್ಳಿಯನ್ನು ತೂಗಿಕೊಟ್ಟನು.
16 Também deu o ouro por peso para as mesas da proposição, para cada mesa; como também a prata para as mesas de prata.
17 ಅದೇ ಪ್ರಕಾರ ಮುಳ್ಳುಗಳೂ ಪಾತ್ರೆಗಳೂ ಹೂಜೆಗಳೂ ಇವುಗಳಿಗೋಸ್ಕರ ಚೊಕ್ಕ ಬಂಗಾರವನ್ನು ಕೊಟ್ಟನು. ಬಂಗಾರದ ಬಟ್ಟಲುಗಳಿ ಗೋಸ್ಕರ ಒಂದೊಂದು ಬಟ್ಟಲಿಗೋಸ್ಕರ ಅದರ ತೂಕವಾಗಿಯೂ ಬೆಳ್ಳಿಯ ಒಂದೊಂದು ಬಟ್ಟಲಿಗೋ ಸ್ಕರ ಅದರ ತೂಕವಾಗಿಯೂ ಕೊಟ್ಟನು.
17 E ouro puro para os garfos, e para as bacias, e para os jarros, e para as taças de ouro, para cada taça seu peso; como também para as taças de prata, para cada taça seu peso.
18 ಇದಲ್ಲದೆ ಧೂಪಪೀಠಕ್ಕೋಸ್ಕರ ಬಂಗಾರವನ್ನೂ ರೆಕ್ಕೆಗಳನ್ನೂ ಚಾಚಿಕೊಂಡು ಕರ್ತನ ಒಡಂಬಡಿಕೆಯ ಮಂಜೂಷ ವನ್ನು ಮುಚ್ಚುವ ಕೆರೂಬಿಗಳ ರಥದ ಮಾದರಿಗೋಸ್ಕರ ಬಂಗಾರವನ್ನೂ ತೂಗಿಕೊಟ್ಟನು.
18 E para o altar do incenso, ouro purificado, por seu peso; como também o ouro para o modelo do carro, a saber, dos querubins, que haviam de estender as asas, e cobrir a arca da aliança do Senhor.
19 ಕರ್ತನು ತನ್ನ ಕೈ ನನ್ನ ಮೇಲೆ ಇರಿಸಿ ಈ ಮಾದರಿಯ ಕೆಲಸಗಳನ್ನೆಲ್ಲಾ ನನಗೆ ತಿಳಿಯುವಂತೆ ಮಾಡಿದನು ಅಂದನು.
19 Tudo isto, disse Davi, fez-me entender o Senhor, por escrito da sua mão, a saber, todas as obras desta planta.
20 ದಾವೀದನು ತನ್ನ ಮಗನಾದ ಸೊಲೊಮೋನ ನಿಗೆ ಹೇಳಿದ್ದೇನಂದರೆ--ನೀನು ಬಲಗೊಂಡು ದೃಢ ಪಟ್ಟು ಮಾಡು; ಭಯಪಡಬೇಡ, ಹೆದರಬೇಡ; ಯಾಕಂದರೆ ನನ್ನ ದೇವರಾಗಿರುವ ಕರ್ತನಾದ ದೇವರು ನಿನ್ನ ಸಂಗಡ ಇರುವನು. ಕರ್ತನ ಮನೆಯ ಸೇವೆಯ ಕಾರ್ಯವನ್ನೆಲ್ಲಾ ನೀನು ತೀರಿಸುವ ವರೆಗೂ ಆತನು ನಿನ್ನನ್ನು ವಿಸರ್ಜಿಸುವದಿಲ್ಲ, ಕೈ ಬಿಡುವದಿಲ್ಲ.
20 E disse Davi a Salomão seu filho: Esforça-te e tem bom ânimo, e faze a obra; não temas, nem te apavores; porque o Senhor Deus, meu Deus, há de ser contigo; não te deixará, nem te desamparará, até que acabes toda a obra do serviço da casa do Senhor.
21 ಇಗೋ, ಕರ್ತನ ಮನೆಯ ಸಮಸ್ತ ಸೇವೆಗೋಸ್ಕರ ಯಾಜಕರ ಲೇವಿಯರ ವರ್ಗಗಳುಂಟು. ಎಲ್ಲಾ ಕೆಲ ಸಕ್ಕೂ ಎಲ್ಲಾ ಸೇವೆಗೂ ಪೂರ್ಣ ಮನಸ್ಸುಳ್ಳಂಥ ಜ್ಞಾನವುಳ್ಳಂಥ ಪ್ರತಿ ಮನುಷ್ಯನು ನಿನ್ನ ಸಂಗಡ ಇರುವನು. ಇದಲ್ಲದೆ ಪ್ರಧಾನರೂ ಸಕಲ ಜನರೂ ನಿನ್ನ ಮಾತುಗಳಿಗೆಲ್ಲಾ ಕಿವಿಗೊಡುತ್ತಾರೆ.
21 E eis que aí tens as turmas dos sacerdotes e dos levitas para todo o ministério da casa de Deus; estão também contigo, para toda a obra, voluntários com sabedoria de toda a espécie para todo o ministério; como também todos os príncipes, e todo o povo, para todos os teus mandados.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar 1 Crônicas 28, comparar traduções ou montar um estudo — tudo direto pelo WhatsApp.