1 Crônicas 16
Kannada Bible (GL_KANNADA) vs ACF
ACF Almeida Corrigida Fiel
1 1 ಅವರು ದೇವರ ಮಂಜೂಷವನ್ನು ತಂದು ದಾವೀದನು ಅದಕ್ಕೋಸ್ಕರ ಹಾಕಿದ ಡೇರೆಯ ಮಧ್ಯದಲ್ಲಿ ಇರಿಸಿದ ತರುವಾಯ ಅವರು ದೇವರ ಮುಂದೆ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿದರು.
1 Trouxeram, pois, a arca de Deus, e a puseram no meio da tenda que Davi lhe tinha armado; e ofereceram holocaustos e sacrifícios pacíficos perante Deus.
2 ದಾವೀದನು ದಹನ ಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿ ತೀರಿಸಿದ ತರುವಾಯ ಅವನು ಕರ್ತನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ
2 E, acabando Davi de oferecer os holocaustos e sacrifícios pacíficos, abençoou o povo em nome do Senhor.
3 ಇಸ್ರಾಯೇಲಿನಲ್ಲಿರುವ ಸ್ತ್ರೀ ಪುರುಷರಾದ ಸಮಸ್ತರಿಗೂ ಒಬ್ಬೊಬ್ಬರಿಗೆ ಒಂದೊಂದು ರೊಟ್ಟಿಯನ್ನೂ ಒಂದು ತುಂಡು ಮಾಂಸವನ್ನೂ ಒಂದು ಬುದ್ದಲಿ ದ್ರಾಕ್ಷಾರಸವನ್ನೂ ಕೊಟ್ಟನು.
3 E repartiu a todos em Israel, tanto a homens como a mulheres, a cada um, um pão, e um bom pedaço de carne, e um frasco de vinho.
4 ಇದಲ್ಲದೆ ಕರ್ತನ ಮಂಜೂಷದ ಮುಂದೆ ಸೇವೆ ಮಾಡಲೂ ಇಸ್ರಾಯೇಲಿನ ದೇವರಾದ ಕರ್ತನನ್ನು ಸ್ಮರಿಸುವದಕ್ಕೂ ಕೊಂಡಾಡುವದಕ್ಕೂ ಹೊಗಳುವ ದಕ್ಕೂ ಲೇವಿಯರಲ್ಲಿ ಕೆಲವರನ್ನು ನೇಮಿಸಿದನು.
4 E pôs alguns dos levitas por ministros perante a arca do Senhor; isto para recordarem, e louvarem, e celebrarem ao Senhor Deus de Israel.
5 ಅವರು ಯಾರಂದರೆ, ಮುಖ್ಯಸ್ಥನಾದ ಆಸಾಫನೂ ಅವನ ತರುವಾಯ ಜೆಕರ್ಯನೂ ಯೆಗೀಯೇಲನೂ ಶೆವಿಾರಾಮೋತನೂ ಯೆಹೀಯೇಲನೂ ಮತ್ತಿತ್ಯನೂ ಎಲೀಯಾಬನೂ ಬೆನಾಯನೂ ಒಬೇದೆದೋಮನೂ ಯೇಗಿಯೇಲನೂ. ಇವರು ವೀಣೆಗಳನ್ನೂ ಕಿನ್ನರಿ ಗಳನ್ನೂ ಬಾರಿಸುತ್ತಿದ್ದರು; ಆದರೆ ಆಸಾಫನು ತಾಳ ಗಳನ್ನು ಬಾರಿಸುತ್ತಿದ್ದನು.
5 Era Asafe, o chefe, e Zacarias o segundo depois dele; Jeiel, e Semiramote, e Jeiel, e Matitias, e Eliabe, e Benaia, e Obede-Edom, e Jeiel, com alaúdes e com harpas; e Asafe se fazia ouvir com címbalos;
6 ಇದಲ್ಲದೆ ಯಾಜಕರಾದ ಬೆನಾಯನೂ ಯೆಹಜೀಯೇಲನೂ ದೇವರ ಒಡಂಬ ಡಿಕೆಯ ಮಂಜೂಷದ ಮುಂದೆ ಯಾವಾಗಲೂ ತುತೂರಿಗಳನ್ನು ಊದುವವರಾಗಿದ್ದರು.
6 Também Benaia, e Jaaziel, os sacerdotes, continuamente tocavam trombetas, perante a arca da aliança de Deus.
7 ಆಗ ಅದೇ ದಿವಸದಲ್ಲಿ ಕರ್ತನನ್ನು ಕೊಂಡಾಡುವದಕ್ಕೆ ದಾವೀದನು ಮೊದಲು ಆಸಾಫನಿಗೂ ಅವನ ಸಹೋದರರಿಗೂ ಈ ಸಂಗೀತವನ್ನು ಕೊಟ್ಟನು;--
7 Então naquele mesmo dia Davi, em primeiro lugar, deu o seguinte salmo para que, pelo ministério de Asafe e de seus irmãos, louvassem ao Senhor;
8 ಕರ್ತನನ್ನು ಕೊಂಡಾ ಡಿರಿ, ಆತನ ಹೆಸರನ್ನು ಕರೆಯಿರಿ; ಜನಗಳಲ್ಲಿ ಆತನ ಕ್ರಿಯೆಗಳನ್ನು ತಿಳಿಯುವಂತೆ ಮಾಡಿರಿ.
8 Louvai ao Senhor, invocai o seu nome, fazei conhecidas as suas obras entre os povos.
9 ಆತನಿಗೆ ಹಾಡಿರಿ, ಆತನನ್ನು ಕೀರ್ತಿಸಿರಿ; ಆತನ ಅದ್ಭುತಗಳ ನ್ನೆಲ್ಲಾ ಧ್ಯಾನಿಸಿರಿ.
9 Cantai-lhe, salmodiai-lhe, atentamente falai de todas as suas maravilhas.
10 ಆತನ ಪರಿಶುದ್ಧ ನಾಮದಲ್ಲಿ ಹೊಗಳಿಕೊಳ್ಳಿರಿ. ಕರ್ತನನ್ನು ಹುಡುಕುವವರ ಹೃದ ಯವು ಸಂತೋಷಿಸಲಿ.
10 Gloriai-vos no seu santo nome; alegre-se o coração dos que buscam ao Senhor.
11 ಕರ್ತನನ್ನೂ ಆತನ ಬಲ ವನ್ನೂ ಆಶ್ರಯಿಸಿರಿ. ಆತನ ಮುಖವನ್ನು ಯಾವಾ ಗಲೂ ಹುಡುಕಿರಿ.
11 Buscai ao Senhor e a sua força; buscai a sua face continuamente.
12 ಆತನು ಮಾಡಿದ ಅದ್ಭುತ ಗಳನ್ನೂ ಮಹತ್ಕಾರ್ಯಗಳನ್ನು ಆತನ ನ್ಯಾಯನಿರ್ಣ ಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
12 Lembrai-vos das maravilhas que fez, de seus prodígios, e dos juízos da sua boca;
13 ಆತನ ಸೇವ ಕನಾದ ಇಸ್ರಾಯೇಲಿನ ಸಂತಾನವೇ, ಆತನು ಆದು ಕೊಂಡ ಯಾಕೋಬನ ಮಕ್ಕಳೇ,
13 Vós, semente de Israel, seus servos, vós, filhos de Jacó, seus escolhidos.
14 ಆತನೇ ನಮ್ಮ ದೇವರಾದ ಕರ್ತನಾಗಿದ್ದಾನೆ; ಆತನ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಅವೆ.
14 Ele é o Senhor nosso Deus; os seus juízos estão em toda a terra.
15 ಆತನ ಒಡಂಬಡಿಕೆ ಯನ್ನು ಸಾವಿರ ತಲಾಂತರಗಳಿಗೆ ಆತನು ಆಜ್ಞಾಪಿ ಸಿದ ಮಾತನ್ನು
15 Lembrai-vos perpetuamente da sua aliança e da palavra que prescreveu para mil gerações;
16 ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನು ಇಸಾಕನಿಗೆ ಇಟ್ಟ ಆಣೆಯನ್ನು ಇದನ್ನು ನಿತ್ಯವೂ ಜ್ಞಾಪಕಮಾಡಿಕೊಳ್ಳಿರಿ.
16 Da aliança que fez com Abraão, e do seu juramento a Isaque;
17 ಅದನ್ನು ಯಾಕೋಬನಿಗೆ ನೇಮಕವಾಗಿಯೂ ಇಸ್ರಾಯೇಲಿಗೆ ನಿತ್ಯ ಒಡಂಬಡಿಕೆಯಾಗಿಯೂ ಸ್ಥಾಪಿಸಿ
17 O qual também a Jacó confirmou por estatuto, e a Israel por aliança eterna,
18 ಹೇಳಿದ್ದೇನಂದರೆ--ನಿನಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯ ತೆಯ ಪಾಲಾಗಿ ಕೊಡುವೆನು.
18 Dizendo: A ti te darei a terra de Canaã, quinhão da vossa herança.
19 ಆಗ ನೀವು ಸ್ವಲ್ಪ ಮಂದಿಯಾಗಿಯೂ ಪರದೇಶಸ್ಥರಾಗಿಯೂ ಅದರಲ್ಲಿ ಇದ್ದಿರಿ.
19 Quando eram poucos homens em número, sim, mui poucos, e estrangeiros nela,
20 ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಮತ್ತೊಂದಕ್ಕೂ ಹೋಗುತ್ತಿದ್ದರು.
20 Quando andavam de nação em nação, e de um reino para outro povo,
21 ಆತನು ಯಾರಿಂದಲೂ ಅವರಿಗೆ ಅನ್ಯಾಯ ಮಾಡ ಗೊಡಿಸಲಿಲ್ಲ; ಹೌದು, ಅವರಿಗೋಸ್ಕರ ಅರಸುಗಳನ್ನು ಗದರಿಸಿದನು.
21 A ninguém permitiu que os oprimisse, e por amor deles repreendeu reis, dizendo:
22 ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ; ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ.
22 Não toqueis os meus ungidos, e aos meus profetas não façais mal.
23 ಸಮಸ್ತ ಭೂಮಿಯೇ, ಕರ್ತನಿಗೆ ಹಾಡಿರಿ; ಆತನ ರಕ್ಷಣೆಯನ್ನು ದಿನ ದಿನಕ್ಕೆ ಸಾರಿ ಹೇಳಿರಿ.
23 Cantai ao Senhor em toda a terra; anunciai de dia em dia a sua salvação.
24 ಜನಾಂಗಗಳಲ್ಲಿ ಆತನ ಘನವನ್ನೂ ಎಲ್ಲಾ ಜನಗಳಲ್ಲಿ ಆತನ ಅದ್ಭುತಗಳನ್ನೂ ಪ್ರಕಟಿಸಿರಿ.
24 Contai entre as nações a sua glória, entre todos os povos as suas maravilhas.
25 ಯಾಕಂದರೆ ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸಲ್ಪಡತಕ್ಕವನೂ;
25 Porque grande é o Senhor, e mui digno de louvor, e mais temível é do que todos os deuses.
26 ಆತನು ಎಲ್ಲಾ ದೇವರುಗಳ ಮೇಲೆ ಭಯಂಕರನೂ. ಯಾಕಂದರೆ ಜನಗಳ ದೇವರುಗಳೆಲ್ಲಾ ಬೊಂಬೆಗಳಾಗಿವೆ. ಆದರೆ ಕರ್ತನು ಆಕಾಶಗಳನ್ನು ಉಂಟುಮಾಡಿದನು.
26 Porque todos os deuses dos povos são ídolos; porém o Senhor fez os céus.
27 ಮಹಿ ಮೆಯೂ ಪ್ರಭೆಯೂ ಆತನ ಮುಂದೆ ಅವೆ. ಬಲವೂ ಆನಂದವೂ ಆತನ ಸ್ಥಳದಲ್ಲಿ ಅವೆ.
27 Louvor e majestade há diante dele, força e alegria no seu lugar.
28 ಜನಸಂತತಿಗಳೇ, ಕರ್ತನಿಗೆ ಬಲ ಪ್ರಭಾವವನ್ನೂ ತನ್ನಿರಿ,
28 Tributai ao Senhor, ó famílias dos povos, tributai ao Senhor glória e força.
29 ಕರ್ತನಿಗೆ ಆತನ ಹೆಸರಿನ ಘನವನ್ನೂ ತನ್ನಿರಿ; ಅರ್ಪಣೆಯನ್ನು ತೆಗೆದುಕೊಂಡು ಆತನ ಮುಂದೆ ಬನ್ನಿರಿ. ಪರಿಶುದ್ಧತ್ವ ವೆಂಬ ಸೌಂದರ್ಯದಿಂದ ಕರ್ತನನ್ನು ಆರಾಧಿಸಿರಿ.
29 Tributai ao Senhor a glória de seu nome; trazei presentes, e vinde perante ele; adorai ao Senhor na beleza da sua santidade.
30 ಸಮಸ್ತ ಭೂಮಿಯೇ, ಆತನ ಮುಂದೆ ನಡುಗು. ಲೋಕವು ಸ್ಥಿರವಾಗಿದೆ, ಕದಲುವದಿಲ್ಲ.
30 Trema perante ele, trema toda a terra; pois o mundo se firmará, para que não se abale.
31 ಆಕಾಶ ಗಳು ಸಂತೋಷಿಸಲಿ, ಭೂಮಿಯು ಉಲ್ಲಾಸಪಡಲಿ.
31 Alegrem-se os céus, e regozije-se a terra; e diga-se entre as nações: O Senhor reina.
32 ಕರ್ತನು ಆಳುತ್ತಾನೆಂದು ಜನಾಂಗಗಳಲ್ಲಿ ಹೇಳಲಿ. ಸಮುದ್ರವೂ ಅದರ ಪರಿಪೂರ್ಣತ್ವವೂ ಘೋಷಿಸಲಿ; ಹೊಲಗಳೂ ಅವುಗಳಲ್ಲಿರುವ ಸಮಸ್ತವೂ ಉತ್ಸಾಹ ಪಡಲಿ.
32 Brame o mar com a sua plenitude; exulte o campo com tudo o que nele há;
33 ಆಗ ಕರ್ತನ ಮುಂದೆಯೇ ಅಡವಿಯ ಮರಗಳೆಲ್ಲಾ ಉತ್ಸಾಹ ಧ್ವನಿಮಾಡಲಿ; ಆತನು ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ.
33 Então jubilarão as árvores dos bosques perante o Senhor; porquanto vem julgar a terra.
34 ಕರ್ತನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು;ಆತನ ಕೃಪೆಯು ಯುಗಯುಗಕ್ಕೂ ಅವೆ.
34 Louvai ao Senhor, porque é bom; pois a sua benignidade dura perpetuamente.
35 ನಮ್ಮ ರಕ್ಷಣೆಯ ದೇವರೇ, ನಾವು ನಿನ್ನ ಪರಿಶುದ್ಧ ಹೆಸ ರನ್ನು ಕೊಂಡಾಡಿ ನಿನ್ನ ಸ್ತೋತ್ರದಲ್ಲಿ ಹೆಚ್ಚಳ ಪಡುವ ಹಾಗೆ ನಮ್ಮನ್ನು ರಕ್ಷಿಸು; ಜನಾಂಗಗಳೊಳಗಿಂದ ನಮ್ಮನ್ನು ತೆಗೆದು ಕೂಡಿಸು.
35 E dizei: Salva-nos, ó Deus da nossa salvação, e ajunta-nos, e livra-nos das nações, para que louvemos o teu santo nome, e nos gloriemos no teu louvor.
36 ಇಸ್ರಾಯೇಲಿನ ಕರ್ತ ನಾದ ದೇವರು ಯುಗಯುಗಾಂತರಗಳಲ್ಲಿ ಸ್ತುತಿ ಸಲ್ಪಡಲಿ ಎಂದು ಹೇಳಿರಿ. ಸಮಸ್ತ ಜನರು ಆಮೆನ್ ಎಂದು ಹೇಳಿ ಕರ್ತನನ್ನು ಸ್ತುತಿಸಿದರು.
36 Bendito seja o Senhor Deus de Israel, de eternidade a eternidade. E todo o povo disse: Amém! E louvou ao Senhor.
37 ಕರ್ತನ ಒಡಂಬಡಿಕೆಯ ಮಂಜೂಷದ ಮುಂದೆ ದಾವೀದನು ಬಿಟ್ಟವರು ಯಾರಂದರೆ--ಪ್ರತಿ ದಿವಸದ ಕಾರ್ಯದ ಪ್ರಕಾರ ಯಾವಾಗಲೂ ಮಂಜೂಷದ ಮುಂದೆ ಸೇವೆಮಾಡಲು ಆಸಾಫನನ್ನೂ ಅವನ ಸಹೋ ದರರನ್ನೂ;
37 Então Davi deixou ali, diante da arca da aliança do Senhor, a Asafe e a seus irmãos, para ministrarem continuamente perante a arca, segundo se ordenara para cada dia.
38 ಒಬೇದೆದೋಮನನ್ನೂ ಅವನ ಸಹೋ ದರರಾದ ಅರವತ್ತೆಂಟು ಮಂದಿಯನ್ನೂ; ದ್ವಾರಪಾಲಕ ರಾದ ಯೆದುತೂನನ ಮಗನಾದ ಒಬೇದೆದೋಮ ನನ್ನೂ ಹೋಸನನ್ನೂ.
38 E mais a Obede-Edom, com seus irmãos, sessenta e oito; a este Obede-Edom, filho de Jedutum, e a Hosa, deixou por porteiros.
39 ಯಾವಾಗಲೂ ಉದಯ ಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ದಹನಬಲಿ ಪೀಠದ ಮೇಲೆ ಕರ್ತನಿಗೆ ದಹನಬಲಿಗಳನ್ನು ಅರ್ಪಿಸು ವದಕ್ಕೂ ಕರ್ತನು ಇಸ್ರಾಯೇಲಿಗೆ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದ ಎಲ್ಲಾದರ ಪ್ರಕಾರ ಮಾಡು ವದಕ್ಕೂ
39 E deixou a Zadoque, o sacerdote, e a seus irmãos, os sacerdotes, diante do tabernáculo do Senhor, no alto que está em Gibeom,
40 ಗಿಬ್ಯೋನಿನಲ್ಲಿರುವ ಉನ್ನತದಲ್ಲಿ ಕರ್ತನ ಗುಡಾರದ ಮುಂದೆ ಸೇವಿಸುವದಕ್ಕೆ ಯಾಜಕನಾದ ಚಾದೋಕನೂ ಯಾಜಕರಾದ ಅವನ ಸಹೋದರರೂ
40 Para oferecerem holocaustos ao Senhor continuamente, pela manhã e à tarde, sobre o altar dos holocaustos; e isto segundo tudo o que está escrito na lei do Senhor que tinha prescrito a Israel.
41 ಅವರ ಸಂಗಡ ಆತನ ಕೃಪೆ ಯುಗಯುಗಕ್ಕಿರುವ ಕಾರಣ ಕರ್ತನನ್ನು ಕೊಂಡಾಡುವದಕ್ಕೆ ಹೇಮಾನನೂ ಯೆದುತೂನನೂ ಹೆಸರಿನಿಂದ ಲೆಕ್ಕಿಸಲ್ಪಟ್ಟು ಆಯಲ್ಪಟ್ಟ ಮಿಕ್ಕಾದವರೂ.
41 E com eles a Hemã, e a Jedutum, e aos mais escolhidos, que foram apontados pelos seus nomes, para louvarem ao Senhor, porque a sua benignidade dura perpetuamente.
42 ಅವರ ಸಂಗಡ ಶಬ್ದ ಮಾಡ ಬೇಕಾದವರಿಗೋಸ್ಕರ ತುತೂರಿಗಳೂ ತಾಳಗಳೂ ದೇವರ ಗೀತ ವಾದ್ಯಗಳೂ ಸಹಿತವಾಗಿ ಹೇಮಾನನೂ ಯೆದುತೂನನೂ, ಮತ್ತು ಯೆದುತೂನನ ಕುಮಾರರು ದ್ವಾರಪಾಲಕರಾಗಿದ್ದರು.
42 Com eles, pois, estavam Hemã e Jedutum, com trombetas e címbalos, para os que haviam de tocar, e com outros instrumentos de música de Deus; porém os filhos de Jedutum estavam à porta.
43 ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗೆ ಹೋದರು; ದಾವೀದನು ತನ್ನ ಮನೆಯವರನ್ನು ಆಶೀ ರ್ವದಿಸುವದಕ್ಕೆ ಹಿಂತಿರುಗಿದನು.
43 Então todo o povo se retirou, cada um para a sua casa; e voltou Davi, para abençoar a sua casa.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar 1 Crônicas 16, comparar traduções ou montar um estudo — tudo direto pelo WhatsApp.