1 Coríntios 16
Kannada Bible (GL_KANNADA) vs ARC
ARC Almeida Revista e Corrigida 2009
1 ಪರಿಶುದ್ಧರಿಗೋಸ್ಕರ ಹಣವನ್ನೆತ್ತುವ ವಿಷಯದಲ್ಲಿ ಗಲಾತ್ಯ ಸಭೆಗಳಿಗೆ ನಾನು ಅಪ್ಪಣೆಕೊಟ್ಟಂತೆ ನೀವೂ ಮಾಡಿರಿ.
1 Ora, quanto à coleta que se faz para os santos, fazei vós também o mesmo que ordenei às igrejas da Galácia.
2 ನಾನು ಬಂದಾಗ (ಹಣ) ಕೂಡಿಸುವದು ಇರದಂತೆ ದೇವರು ಅಭಿವೃದ್ಧಿ ಪಡಿಸಿದ ಪ್ರಕಾರ ವಾರದ ಮೊದಲನೆಯ ದಿನದಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಹತ್ತಿರ ಕೂಡಿಟ್ಟುಕೊಳ್ಳಲಿ.
2 No primeiro dia da semana, cada um de vós ponha de parte o que puder ajuntar, conforme a sua prosperidade, para que se não façam as coletas quando eu chegar.
3 ನೀವು ಧಾರಾಳವಾಗಿ ಕೊಟ್ಟದ್ದನ್ನು ಯೆರೂಸಲೇಮಿಗೆ ತೆಗೆದುಕೊಂಡು ಹೋಗುವಂತೆ ನೀವು ನಿಮ್ಮ ಪತ್ರಗಳಿಂದ ಯಾರನ್ನು ಯೋಗ್ಯರೆಂದು ಸೂಚಿಸು ವಿರೋ ಅವರನ್ನು ನಾನು ಕಳುಹಿಸುವೆನು.
3 E, quando tiver chegado, mandarei os que, por cartas, aprovardes, para levar a vossa dádiva a Jerusalém.
4 ನಾನು ಸಹ ಹೋಗುವದು ಯುಕ್ತವಾಗಿ ತೋರಿದರೆ ಅವರು ನನ್ನ ಜೊತೆಯಲ್ಲಿ ಹೋಗಬಹುದು.
4 E, se valer a pena que eu também vá, irão comigo.
5 ನಾನು ಮಕೆದೋನ್ಯವನ್ನು ಹಾದು ಹೋಗುವಾಗ ನಿಮ್ಮ ಬಳಿಗೆ ಬರುವೆನು; ಯಾಕಂದರೆ ನಾನು ಮಕೆದೋನ್ಯವನ್ನು ಹಾದು ಹೋಗಲೇಬೇಕು.
5 Irei, porém, ter convosco depois de ter passado pela Macedônia (porque tenho de passar pela Macedônia).
6 ನಿಮ್ಮಲ್ಲಿದ್ದು ಹಿಮಕಾಲ ವನ್ನಾದರೂ ಕಳೆದೇನು; ಆಗ ನಾನು ಹೋಗಬೇಕಾದ ಸ್ಥಳಕ್ಕೆ ನೀವು ನನ್ನನ್ನು ಸಾಗ ಕಳುಹಿಸಬಹುದು.
6 E bem pode ser que fique convosco e passe também o inverno, para que me acompanheis aonde quer que eu for.
7 ಈಗ ನನ್ನ ಪ್ರಯಾಣದಲ್ಲಿ ನಿಮ್ಮನ್ನು ನೋಡಲು ನನಗೆ ಇಷ್ಟವಿಲ್ಲ, ಕರ್ತನ ಅಪ್ಪಣೆಯಾದರೆ ನಾನು ನಿಮ್ಮೊಂದಿಗೆ ಸ್ವಲ್ಪ ಕಾಲ ಇರುವದಕ್ಕೆ ನಿರೀಕ್ಷಿಸುತ್ತೇನೆ.
7 Porque não vos quero agora ver de passagem, mas espero ficar convosco algum tempo, se o Senhor o permitir.
8 ಪಂಚಾ ಶತ್ತಮ ದಿನದ ವರೆಗೆ ನಾನು ಎಫೆಸದಲ್ಲಿ ಇರುವೆನು.
8 Ficarei, porém, em Éfeso até ao Pentecostes;
9 ಕಾರ್ಯಸಾಧಕವಾಗುವ ದೊಡ್ಡದೊಂದು ಬಾಗಲು ನನಗೋಸ್ಕರ ತೆರೆಯಲ್ಪಟ್ಟಿದೆ, ಅನೇಕ ವಿರೋಧಿಗಳು ಇದ್ದಾರೆ.
9 porque uma porta grande e eficaz se me abriu; e há muitos adversários.
10 ತಿಮೋಥೆಯನು ಬಂದರೆ ಅವನು ನಿಮ್ಮ ಬಳಿ ಯಲ್ಲಿ ಭಯವಿಲ್ಲದೆ ಇರುವಂತೆ ನೋಡಿಕೊಳ್ಳಿರಿ; ನನ್ನ ಹಾಗೆಯೇ ಅವನು ಕರ್ತನ ಕೆಲಸವನ್ನು ನಡಿಸುತ್ತಾನೆ.
10 E, se for Timóteo, vede que esteja sem temor convosco; porque trabalha na obra do Senhor, como eu também.
11 ಆದದರಿಂದ ಯಾರೂ ಅವನನ್ನು ಹೀನೈಸಬಾರದು; ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನ ದಿಂದ ಸಾಗಕಳುಹಿಸಿರಿ; ಅವನು ಸಹೋದರರೊಂದಿಗೆ ಬರುವದನ್ನು ನಾನು ಎದುರು ನೋಡುತ್ತೇನೆ.
11 Portanto, ninguém o despreze, mas acompanhai-o em paz, para que venha ter comigo, pois o espero com os irmãos.
12 ಸಹೋದರನಾದ ಅಪೊಲ್ಲೋಸನು ಸಹೋದರ ರೊಂದಿಗೆ ನಿಮ್ಮ ಬಳಿಗೆ ಹೋಗಬೇಕೆಂದು ನಾನು ಬಹಳವಾಗಿ ಇಷ್ಟಪಟ್ಟೆನು. ಆದರೆ ಈಗ ಬರುವದಕ್ಕೆ ಅವನಿಗೆ ಸ್ವಲ್ಪವೂ ಮನಸ್ಸಿರಲಿಲ್ಲ; ಅನುಕೂಲವಾದ ಸಮಯ ಸಿಕ್ಕಿದಾಗ ಬರುವನು.
12 E, acerca do irmão Apolo, roguei-lhe muito que fosse com os irmãos ter convosco, mas, na verdade, não teve vontade de ir agora; irá, porém, quando se lhe ofereça boa ocasião.
13 ಸಹೋದರನಾದ ಅಪೊಲ್ಲೋಸನು ಸಹೋದರ ರೊಂದಿಗೆ ನಿಮ್ಮ ಬಳಿಗೆ ಹೋಗಬೇಕೆಂದು ನಾನು ಬಹಳವಾಗಿ ಇಷ್ಟಪಟ್ಟೆನು. ಆದರೆ ಈಗ ಬರುವದಕ್ಕೆ ಅವನಿಗೆ ಸ್ವಲ್ಪವೂ ಮನಸ್ಸಿರಲಿಲ್ಲ; ಅನುಕೂಲವಾದ ಸಮಯ ಸಿಕ್ಕಿದಾಗ ಬರುವನು.
13 Vigiai, estai firmes na fé, portai-vos varonilmente e fortalecei-vos.
14 ನೀವು ಮಾಡುವದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.
14 Todas as vossas coisas sejam feitas com amor.
15 ಸ್ತೆಫನನ ಮನೆಯವರು ಅಕಾಯದ ಪ್ರಥಮ ಫಲವೆಂದೂ ಅವರು ಪರಿಶುದ್ಧರ ಸೇವೆಯಲ್ಲಿ ತಮ್ಮನ್ನು ಒಪ್ಪಿಸಿಕೊಟ್ಟಿದ್ದರೆಂದೂ ನಿಮಗೆ ತಿಳಿದದೆ.
15 Agora, vos rogo, irmãos (sabeis que a família de Estéfanas é as primícias da Acaia e que se tem dedicado ao ministério dos santos),
16 ಆದದರಿಂದ ಅಂಥವರಿಗೂ ನಮ್ಮೊಂದಿಗೆ ಸಹಾಯ ಮಾಡುತ್ತಾ ಪ್ರಯಾಸಪಡುವ ಪ್ರತಿಯೊಬ್ಬನಿಗೂ ನೀವು ಅಧೀನರಾಗಬೇಕೆಂದು ನಾನು ನಿಮ್ಮನ್ನು ಬೇಡಿ ಕೊಳ್ಳುತ್ತೇನೆ.
16 que também vos sujeiteis aos tais e a todo aquele que auxilia na obra e trabalha.
17 ಸ್ತೆಫನನೂ ಫೊರ್ತುನಾತನೂ ಅಖಾಯಿಕನೂ ಬಂದದರಿಂದ ನನಗೆ ಸಂತೋಷ ವಾಯಿತು. ನೀವು ಇಲ್ಲದ್ದರಿಂದ ಉಂಟಾದ ಕೊರತೆ ಯನ್ನು ಅವರು ನೀಗಿಸಿದರು.
17 Folgo, porém, com a vinda de Estéfanas, e de Fortunato, e de Acaico; porque estes supriram o que da vossa parte me faltava.
18 ಅವರು ನನ್ನ ಆತ್ಮವನ್ನೂ ನಿಮ್ಮ ಆತ್ಮಗಳನ್ನೂ ಉಪಶಮನ ಮಾಡಿದರು. ಇಂಥವರನ್ನು ಸನ್ಮಾನಿಸಿರಿ.
18 Porque recrearam o meu espírito e o vosso. Reconhecei, pois, aos tais.
19 ಆಸ್ಯ ಸಭೆಗಳವರು ನಿಮಗೆ ವಂದನೆ ಹೇಳುತ್ತಾರೆ. ಅಕ್ವಿಲನೂ ಪ್ರಿಸ್ಕಿಲ್ಲಳೂ ತಮ್ಮ ಮನೆಯಲ್ಲಿ ಕೂಡುವ ಸಭೆಯವರೊಂದಿಗೆ ಕರ್ತನಲ್ಲಿ ಅನೇಕ ವಂದನೆಗಳನ್ನು ಹೇಳುತ್ತಾರೆ.
19 As igrejas da Ásia vos saúdam. Saúdam-vos afetuosamente no Senhor Áquila e Prisca, com a igreja que está em sua casa.
20 ಸಹೋದರ ರೆಲ್ಲರೂ ನಿಮ್ಮನ್ನು ವಂದಿಸುತ್ತಾರೆ. ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
20 Todos os irmãos vos saúdam. Saudai-vos uns aos outros com ósculo santo.
21 ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆ ಯನ್ನು ಬರೆದಿದ್ದೇನೆ.
21 Saudação da minha própria mão, de Paulo.
22 ಯಾವನಾದರೂ ಕರ್ತನಾದ ಯೇಸು ಕ್ರಿಸ್ತನನ್ನು ಪ್ರೀತಿಸದಿದ್ದರೆ ಅವನು ಅನಾಥಿಮ (ಶಾಪಗ್ರಸ್ತನಾಗಲಿ;) ಮಾರನಾಥ (ನಮ್ಮ ಕರ್ತನು ಬರುತ್ತಾನೆ).
22 Se alguém não ama o Senhor Jesus Cristo, seja anátema; maranata!
23 ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.
23 A graça do Senhor Jesus Cristo seja convosco.
24 ಕ್ರಿಸ್ತ ಯೇಸುವಿನಲ್ಲಿ ನಿಮ್ಮೆಲ್ಲರೊಂದಿಗೆ ನನ್ನ ಪ್ರೀತಿ ಇರಲಿ. ಆಮೆನ್.
24 O meu amor seja com todos vós, em Cristo Jesus. Amém!
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar 1 Coríntios 16, comparar traduções ou montar um estudo — tudo direto pelo WhatsApp.