1 Coríntios 10
Kannada Bible (GL_KANNADA) vs ARIB
ARIB Almeida Revisada Imprensa Bíblica
1 ಇದಲ್ಲದೆ ಸಹೋದರರೇ, ನೀವು ಈ ವಿಷಯಗಳನ್ನು ಅರಿಯದವರಾಗಿರ ಬಾರದೆಂದು ನನ್ನ ಅಪೇಕ್ಷೆಯಲ್ಲ; ಅದೇನಂದರೆ--ನಮ್ಮ ಪಿತೃಗಳೆಲ್ಲರೂ ಮೇಘದ ಕೆಳಗೆ ಇದ್ದು ಸಮುದ್ರವನ್ನು ದಾಟಿದರು;
1 Pois não quero, irmãos, que ignoreis que nossos pais estiveram todos debaixo da nuvem, e todos passaram pelo mar;
2 ಅವರೆಲ್ಲರೂ ಮೋಶೆ ಗಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ಬಾಪ್ತಿಸ್ಮ ಹೊಂದಿದರು;
2 e, na nuvem e no mar, todos foram batizados em Moisés,
3 ಅವರೆಲ್ಲರೂ ಆತ್ಮಿಕವಾದ ಒಂದೇ ಆಹಾರವನ್ನು ತಿಂದರು;
3 e todos comeram do mesmo alimento espiritual;
4 ಅವರೆಲ್ಲರೂ ಆತ್ಮಿಕವಾದ ಒಂದೇ ಪಾನವನ್ನು ಕುಡಿದರು; ಯಾಕಂದರೆ ಅವರನ್ನು ಹಿಂಬಾಲಿಸಿದ ಆ ಆತ್ಮಿಕ ಬಂಡೆಯೊಳಗಿಂದ ಅವರು ಕುಡಿದರು; ಆ ಬಂಡೆಯು ಕ್ರಿಸ್ತನೇ.
4 e beberam todos da mesma bebida espiritual, porque bebiam da pedra espiritual que os acompanhava; e a pedra era Cristo.
5 ಆದರೆ ಅವ ರೊಳಗೆ ಅನೇಕರ ವಿಷಯದಲ್ಲಿ ದೇವರು ಸಂತೋಷಿ ಸಲಿಲ್ಲ; ಯಾಕಂದರೆ ಅವರು ಅಡವಿಯೊಳಗೆ ಸಂಹರಿ ಸಲ್ಪಟ್ಟರು.
5 Mas Deus não se agradou da maior parte deles; pelo que foram prostrados no deserto.
6 ಅವರು ಕೆಟ್ಟವಿಷಯಗಳನ್ನು ಆಶಿಸಿದಂತೆ ನಾವು ಆಶಿಸುವವರಾಗಬಾರದೆಂಬದಕ್ಕಾಗಿ ಈ ಸಂಗತಿ ಗಳು ನಮಗೆ ನಿದರ್ಶನಗಳಾಗಿವೆ.
6 Ora, estas coisas nos foram feitas para exemplo, a fim de que não cobicemos as coisas más, como eles cobiçaram.
7 ಇಲ್ಲವೆ--ಜನರು ತಿನ್ನುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು; ಆಟವಾಡುವದಕ್ಕೆ ಎದ್ದರು ಎಂದು ಬರೆದಿರುವ ಪ್ರಕಾರ ನೀವೂ ಅವರಲ್ಲಿ ಕೆಲವರಂತೆ ವಿಗ್ರಹಾರಾಧಕರಾಗ ಬೇಡಿರಿ.
7 Não vos torneis, pois, idólatras, como alguns deles, conforme está escrito: O povo assentou-se a comer e a beber, e levantou-se para folgar.
8 ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತುಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವ ಮಾಡದೆ ಇರೋಣ.
8 Nem nos prostituamos, como alguns deles fizeram; e caíram num só dia vinte e três mil.
9 ಇದಲ್ಲದೆ ನಾವು ಕ್ರಿಸ್ತನನ್ನು ಪರಿಶೋಧಿಸದೆ ಇರೋಣ; ಯಾಕಂದರೆ ಅವರಲ್ಲಿಯೂ ಕೆಲವರು ಪರಿಶೋಧಿಸಿ ಸರ್ಪಗಳಿಂದ ಸಂಹಾರವಾದರು.
9 E não tentemos o Senhor, como alguns deles o tentaram, e pereceram pelas serpentes.
10 ಇದಲ್ಲದೆ ಅವರಲ್ಲಿ ಕೆಲವರು ಗುಣುಗುಟ್ಟಿ ಸಂಹಾರಕನ ಕೈಯಿಂದ ನಾಶ ವಾದರು; ಆದದರಿಂದ ನೀವು ಗುಣುಗುಟ್ಟಬೇಡಿರಿ.
10 E não murmureis, como alguns deles murmuraram, e pereceram pelo destruidor.
11 ಅವರಿಗೆ ಸಂಭವಿಸಿದ ಈ ಎಲ್ಲಾ ಸಂಗತಿಗಳು ನಿದರ್ಶನಗಳಾಗಿವೆ; ಲೋಕದ ಅಂತ್ಯಕ್ಕೆ ಬಂದಿರುವ ವರಾದ ನಮಗೆ ಅವು ಬುದ್ಧಿವಾದಗಳಾಗಿ ಬರೆದವೆ.
11 Ora, tudo isto lhes acontecia como exemplo, e foi escrito para aviso nosso, para quem já são chegados os fins dos séculos.
12 ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳ ದಂತೆ ಎಚ್ಚರಿಕೆಯಾಗಿರಲಿ.
12 Aquele, pois, que pensa estar em pé, olhe não caia.
13 ಮನುಷ್ಯನಿಗೆ ಸಾಮಾನ್ಯ ವಾಗಿ ಬರುವ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ; ಆದರೆ ದೇವರು ನಂಬಿಗಸ್ತನು; ನೀವು ಸಹಿಸುವದಕ್ಕಿಂತ ಹೆಚ್ಚಿನ ಶೋಧನೆಯನ್ನು ಆತನು ನಿಮಗೆ ಬರಮಾಡುವದಿಲ್ಲ; ಆದರೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧ
13 Não vos sobreveio nenhuma tentação, senão humana; mas fiel é Deus, o qual não deixará que sejais tentados acima do que podeis resistir, antes com a tentação dará também o meio de saída, para que a possais suportar.
14 ಆದದರಿಂದ ನನ್ನ ಅತಿ ಪ್ರಿಯವಾದವರೇ, ವಿಗ್ರಹಾರಾಧನೆಯಿಂದ ಓಡಿಹೋಗಿರಿ.
14 Portanto, meus amados, fugi da idolatria.
15 ನೀವು ವಿವೇಕಿಗಳೆಂದು ಇದನ್ನು ಹೇಳುತ್ತೇನೆ; ನಾನು ಹೇಳುವ ದನ್ನು ನೀವೇ ಯೋಚಿಸಿರಿ.
15 Falo como a entendidos; julgai vós mesmos o que digo.
16 ನಾವು ಸ್ತೋತ್ರಸಲ್ಲಿಸುವ ಸ್ತೋತ್ರದ ಪಾತ್ರೆಯು ಕ್ರಿಸ್ತನ ರಕ್ತದ ಅನ್ಯೋನ್ಯತೆ ಯಲ್ಲವೋ? ನಾವು ಮುರಿಯುವ ರೊಟ್ಟಿಯು ಕ್ರಿಸ್ತನ ದೇಹದ ಅನ್ಯೋನ್ಯತೆಯಲ್ಲವೋ?
16 Porventura o cálice de bênção que abençoamos, não é a comunhão do sangue de Cristo? O pão que partimos, não é porventura a comunhão do corpo de Cristo?
17 ಅನೇಕರಾದ ನಾವು ಒಂದೇರೊಟ್ಟಿಯೂ ಒಂದೇದೇಹವೂ ಆಗಿದ್ದೇವೆ; ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲುಗಾರರಾಗಿದ್ದೇವೆ.
17 Pois nós, embora muitos, somos um só pão, um só corpo; porque todos participamos de um mesmo pão.
18 ಶರೀರದ ಪ್ರಕಾರ ಇಸ್ರಾಯೇಲ್ಯರನ್ನು ನೋಡಿರಿ; ಯಜ್ಞ ಮಾಡಿದವು ಗಳನ್ನು ತಿನ್ನುವವರು ಯಜ್ಞವೇದಿಯೊಂದಿಗೆ ಪಾಲು ಗಾರರಾಗಿದ್ದಾರಲ್ಲವೇ?
18 Vede a Israel segundo a carne; os que comem dos sacrifícios não são porventura participantes do altar?
19 ಹಾಗಾದರೆ ನಾನು ಏನು ಹೇಳಲಿ? ವಿಗ್ರಹವು ಏನಾದರೂ ವಿಶೇಷವೋ? ಇಲ್ಲವೆ ವಿಗ್ರಹಗಳಿಗೆ ಯಜ್ಞಾರ್ಪಣೆ ಮಾಡಿದ್ದು ಏನಾದರೂ ವಿಶೇಷವೋ?
19 Mas que digo? Que o sacrificado ao ídolo é alguma coisa? Ou que o ídolo é alguma coisa?
20 ಆದರೆ ಅನ್ಯಜನರು ಯಜ್ಞಾರ್ಪಣೆ ಮಾಡುವದು ದೆವ್ವಗಳಿಗೆ, ದೇವರಿಗಲ್ಲ; ನೀವು ದೆವ್ವಗಳೊಂದಿಗೆ ಅನ್ಯೋನ್ಯವಾಗಿರಬೇಕೆಂದು ನಾನು ಇಷ್ಟಪಡುವದಿಲ್ಲ.
20 Antes digo que as coisas que eles sacrificam, sacrificam-nas a demônios, e não a Deus. E não quero que sejais participantes com os demônios.
21 ನೀವು ಕರ್ತನಪಾತ್ರೆ ಯಲ್ಲಿಯೂ ದೆವ್ವಗಳ ಪಾತ್ರೆಯಲ್ಲಿಯೂ ಕುಡಿಯ ಲಾರಿರಿ; ನೀವು ಕರ್ತನ ಮೇಜಿನಲ್ಲಿಯೂ ದೆವ್ವಗಳ ಮೇಜಿನಲ್ಲಿಯೂ ಪಾಲುಗಾರರಾಗಲಾರಿರಿ.
21 Não podeis beber do cálice do Senhor e do cálice de demônios; não podeis participar da mesa do Senhor e da mesa de demônios.
22 ಕರ್ತ ನನ್ನು ರೇಗಿಸಬೇಕೆಂದಿದ್ದೇವೋ? ಆತನಿಗಿಂತಲೂ ನಾವು ಬಲಿಷ್ಠರೇನು?
22 Ou provocaremos a zelos o Senhor? Somos, porventura, mais fortes do que ele?
23 ನನಗೆ ಎಲ್ಲಾ ವಿಷಯಗಳು ನ್ಯಾಯಸಮ್ಮತ ವಾಗಿವೆ; ಆದರೆ ಎಲ್ಲವೂ ವಿಹಿತವಾಗಿರುವದಿಲ್ಲ; ಎಲ್ಲಾ ವಿಷಯಗಳು ನನಗೆ ನ್ಯಾಯಸಮ್ಮತವಾಗಿವೆ; ಆದರೆ ಎಲ್ಲವೂ ಭಕ್ತಿವೃದ್ಧಿಯನ್ನುಂಟು ಮಾಡುವದಿಲ್ಲ.
23 Todas as coisas são lícitas, mas nem todas as coisas convêm; todas as coisas são lícitas, mas nem todas as coisas edificam.
24 ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರ ಹಿತವನ್ನು ಚಿಂತಿಸಲಿ.
24 Ninguém busque o proveito próprio, antes cada um o de outrem.
25 ಕಟುಕರ ಅಂಗಡಿಯಲ್ಲಿ ಮಾರುವದೇನಿದ್ದರೂ ಮನಸ್ಸಾಕ್ಷಿಯ ನಿಮಿತ್ತ ಯಾವ ಪ್ರಶ್ನೆಯನ್ನೂ ಕೇಳದೆ ತಿನ್ನಿರಿ.
25 Comei de tudo quanto se vende no mercado, nada perguntando por causa da consciência.
26 ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತನದಾಗಿದೆಯಲ್ಲವೇ?
26 Pois do Senhor é a terra e a sua plenitude.
27 ನಂಬದವರಲ್ಲಿ ಯಾವನಾದರೂ ನಿಮ್ಮನ್ನು ಊಟಕ್ಕೆ ಕರೆಯುವಾಗ ಹೋಗುವದಕ್ಕೆ ನಿಮಗಿಷ್ಟವಿದ್ದರೆ ನಿಮ ಗೇನು ಬಡಿಸಿದರೂ ಅದನ್ನು ಮನಸ್ಸಾಕ್ಷಿಯ ನಿಮಿತ್ತ ಯಾವ ಪ್ರಶ್ನೆಯನ್ನೂ ಕೇಳದೆ ತಿನ್ನಿರಿ.
27 Se, portanto, algum dos incrédulos vos convidar, e quiserdes ir, comei de tudo o que se puser diante de vós, nada perguntando por causa da consciência.
28 ಆದರೆ ಒಬ್ಬನು ನಿಮಗೆ--ಇದು ವಿಗ್ರಹಕ್ಕೆ ಬಲಿಕೊಟ್ಟದ್ದು ಎಂದು ಹೇಳಿದರೆ ಈ ವಿಷಯವನ್ನು ತಿಳಿಸಿದವನ ನಿಮಿತ್ತ ವಾಗಿಯೂ ಮನಸ್ಸಾಕ್ಷಿಯ ನಿಮಿತ್ತವಾಗಿಯೂ ತಿನ್ನ ಬೇಡಿರಿ; ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತನದಾಗಿದೆಯಲ್ಲವೇ?
28 Mas, se alguém vos disser: Isto foi oferecido em sacrifício; não comais por causa daquele que vos advertiu e por causa da consciência;
29 ಆದರೆ ನಿನ್ನ ಸ್ವಂತ ಮನಸ್ಸಾಕ್ಷಿಗಾಗಿ ಅಲ್ಲ, ಬೇರೆಯವನ ಮನಸ್ಸಾಕ್ಷಿಗಾಗಿ ನಾನು ಹೇಳುತ್ತೇನೆ. ಮತ್ತೊಬ್ಬನ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು?
29 consciência, digo, não a tua, mas a do outro. Pois, por que há de ser julgada a minha liberdade pela consciência de outrem?
30 ನಾನು ಕೃಪೆಯಿಂದ ಪಾಲುಗಾರನಾಗಿ ಯಾವದಕ್ಕೋಸ್ಕರ ಕೃತಜ್ಞತೆಯನ್ನು ಸಲ್ಲಿಸುತ್ತೇನೋ ಅದರ ವಿಷಯದಲ್ಲಿ ನಾನು ಯಾಕೆ ದೂಷಿಸಲ್ಪಡಬೇಕು?
30 E, se eu com gratidão participo, por que sou vilipendiado por causa daquilo por que dou graças?
31 ಆದದರಿಂದ ನೀವು ತಿಂದರೂ ಕುಡಿದರೂ ಏನು ಮಾಡಿದರೂ ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ.
31 Portanto, quer comais quer bebais, ou façais, qualquer outra coisa, fazei tudo para glória de Deus.
32 ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ಅಭ್ಯಂತರವಾಗಬೇಡಿರಿ.
32 Não vos torneis causa de tropeço nem a judeus, nem a gregos, nem a igreja de Deus;
33 ಇದಲ್ಲದೆ ನಾನಂತೂ ನನ್ನ ಸ್ವಪ್ರಯೊಜನವನ್ನೇ ನೋಡದೆ ಅನೇಕರು ರಕ್ಷಿಸಲ್ಪಡುವಂತೆ ಅವರ ಪ್ರಯೋಜನಕ್ಕಾಗಿ ಎಲ್ಲಾ ವಿಷಯಗಳಲ್ಲಿ ಎಲ್ಲರನ್ನು ಮೆಚ್ಚಿಸುತ್ತೇನೆ.
33 assim como também eu em tudo procuro agradar a todos, não buscando o meu próprio proveito, mas o de muitos, para que sejam salvos.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar 1 Coríntios 10, comparar traduções ou montar um estudo — tudo direto pelo WhatsApp.