Jeremias 48

ಪವಿತ್ರ ಬೈಬಲ್, ಈಸಿ ಓದುವಿಕೆ ಆವೃತ್ತಿ (KAN2010)

1 ಈ ಸಂದೇಶವು ಮೋವಾಬ್ ದೇಶವನ್ನು ಕುರಿತದ್ದು. ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ:

2 ಇನ್ನು ಮುಂದೆ ಮೋವಾಬ್ ಪಟ್ಟಣವು ಹೊಗಳಿಕೆಗೆ ಪಾತ್ರವಾಗುವುದಿಲ್ಲ.

3 ಹೊರೊನಯಿಮಿನಿಂದ ಬರುವ ಗೋಳಾಟದ ಧ್ವನಿಯನ್ನು ಕೇಳಿರಿ.

4 ಮೋವಾಬನ್ನು ನಾಶಮಾಡಲಾಗುವುದು.

5 ಮೋವಾಬಿನ ಜನರು ಲೂಹೀತಿನ ದಾರಿಹಿಡಿದು ಹೋಗುತ್ತಾರೆ.

6 ಓಡಿಹೋಗಿರಿ, ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವದಕ್ಕಾಗಿ ಓಡಿಹೋಗಿರಿ.

7 “ನೀವು ನಿರ್ಮಿಸಿದ ವಸ್ತುಗಳಲ್ಲಿ ಮತ್ತು ನಿಮ್ಮ ಸಂಪತ್ತಿನಲ್ಲಿ ನಂಬಿಕೆಯಿಟ್ಟಿದ್ದರಿಂದ

8 ಪ್ರತಿಯೊಂದು ಪಟ್ಟಣದ ಮೇಲೆ ವಿನಾಶಕನು ಧಾಳಿ ಮಾಡುವನು.

9 ಮೋವಾಬಿನ ಭೂಮಿಯ ಮೇಲೆ ಉಪ್ಪನ್ನು ಹರಡಿರಿ.

10 ಯೆಹೋವನು ಹೇಳಿದಂತೆ ನಡೆಯದಿದ್ದವನಿಗೆ

11 “ಮೋವಾಬಿಗೆ ಕಷ್ಟವೆಂಬುದೇ ಗೊತ್ತಿಲ್ಲ.

12 ಯೆಹೋವನು ಹೀಗೆಂದನು:

13 ಆಗ ಮೋವಾಬಿನ ಜನರು ತಮ್ಮ ಸುಳ್ಳುದೇವರಾದ ಕೆಮೋಷಿಗಾಗಿ ನಾಚಿಕೆಪಡುವರು. ಇಸ್ರೇಲಿನ ಜನರು ಬೇತೇಲಿನಲ್ಲಿ ಆ ಸುಳ್ಳುದೇವರನ್ನು ನಂಬಿಕೊಂಡಿದ್ದರು. ಆದರೆ ಆ ಸುಳ್ಳುದೇವರು ಅವರ ಸಹಾಯಕ್ಕೆ ಬಾರದೆ ಇದ್ದಾಗ ಆ ಇಸ್ರೇಲರು ನಾಚಿಕೆಗೆ ಈಡಾದರು. ಮೋವಾಬ್ ಸಹ ಅದೇ ಸ್ಥಿತಿಯಲ್ಲಿರುವುದು.

14 “‘ನಾವು ಒಳ್ಳೆಯ ಯೋಧರಾಗಿದ್ದೇವೆ.

15 ವೈರಿಯು ಮೋವಾಬಿನ ಮೇಲೆ ಧಾಳಿ ಮಾಡುವನು.

16 “ಮೋವಾಬಿನ ಅಂತ್ಯ ಸಮೀಪಿಸುತ್ತಿದೆ.

17 ಮೋವಾಬಿನ ಸುತ್ತಮುತ್ತಲೂ ವಾಸಿಸುವ ನೀವೆಲ್ಲರು ಆ ದೇಶಕ್ಕಾಗಿ ಗೋಳಾಡಬೇಕು.

18 “ದೀಬೋನ್‌ನಲ್ಲಿ ವಾಸಿಸುವ ಜನರೇ,

19 “ಅರೋಯೇರಿನವರೇ,

20 “ಮೋವಾಬು ಹಾಳಾಗುವುದು. ಅದು ನಾಚಿಕೆಪಡುವುದು.

21 ಎತ್ತರದ ಪ್ರದೇಶದಲ್ಲಿರುವ ಜನರನ್ನು ಶಿಕ್ಷಿಸಲಾಗಿದೆ.

22 ದೂರದಲ್ಲಿರುವ ಮೋವಾಬಿನ ಎಲ್ಲಾ ಊರುಗಳಿಗೆ

23 ಕಿರ್ಯಾತಯೀಮ್, ಬೇತ್‌ಗಾಮೂಲ್, ಬೇತ್‌ಮೆಯೋನ್,

24 ಕೆರೀಯೋತ್, ಬೊಚ್ರ ಮೊದಲಾದ

25 ಮೋವಾಬಿನ ಬಲವನ್ನು ಕತ್ತರಿಸಲಾಗಿದೆ.

26 ತಾನು ಯೆಹೋವನಿಗಿಂತ ಬಹಳ ಮುಖ್ಯವಾದವನೆಂದು ಮೋವಾಬು ಭಾವಿಸಿತ್ತು.

27 “ಮೋವಾಬೇ, ನೀನು ಇಸ್ರೇಲಿನ ಬಗ್ಗೆ ತಮಾಷೆ ಮಾಡಿದೆ.

28 ಮೋವಾಬ್ಯರೇ, ನಿಮ್ಮ ಪಟ್ಟಣಗಳನ್ನು ಬಿಟ್ಟುಬಿಡಿ.

29 “ಮೋವಾಬಿನ ಸೊಕ್ಕಿನ ಬಗ್ಗೆ ನಾವು ಕೇಳಿದ್ದೇವೆ.

30 ಯೆಹೋವನು ಹೀಗೆಂದನು: “ಬಹುಬೇಗ ಮೋವಾಬಿಗೆ ಕೋಪ ಬರುತ್ತದೆ. ಅವನು ಬಡಾಯಿ ಕೊಚ್ಚಿಕೊಳ್ಳುತ್ತಾನೆಂಬುದು ನನಗೆ ಗೊತ್ತು.

31 ಆದ್ದರಿಂದ ನಾನು ಮೋವಾಬಿಗಾಗಿ ಗೋಳಾಡುವೆನು;

32 ನಾನು ಯೆಜ್ಜೇರಿನ ಜನರೊಂದಿಗೆ ಯೆಜ್ಜೇರಿಗಾಗಿ ಪ್ರಲಾಪಿಸುವೆನು.

33 ಮೋವಾಬಿನ ದೊಡ್ಡದೊಡ್ಡ ದ್ರಾಕ್ಷಿತೋಟಗಳಿಂದ

34 “ಹೆಷ್ಬೋನ್ ಮತ್ತು ಎಲೆಯಾಲೆ ಎಂಬ ಪಟ್ಟಣಗಳ ಜನರು ಅರಚಿಕೊಳ್ಳುತ್ತಿದ್ದಾರೆ. ಅವರ ಕಿರುಚಾಟವು ದೂರದ ಯಹಚಿನವರೆಗೂ ಕೇಳಿಬರುತ್ತಿದೆ. ಅವರ ಕಿರುಚಾಟವು ಚೋಯರಿನಿಂದ ದೂರದ ಹೊರೊನಯಿಮ್ ಮತ್ತು ಎಗ್ಲತ್ ಶೆಲಿಶೀಯದವರೆಗೆ ಕೇಳಿಬರುತ್ತದೆ. ನಿಮ್ರೀಮ್ ಹಳ್ಳದ ನೀರು ಸಹ ಬತ್ತಿಹೋಗಿದೆ.

35 ಮೋವಾಬಿನ ಜನರು ಪೂಜಾಸ್ಥಾನದಲ್ಲಿ ಧೂಪಹಾಕುವದನ್ನು ನಾನು ನಿಲ್ಲಿಸುತ್ತೇನೆ. ಅವರು ತಮ್ಮ ದೇವರುಗಳಿಗೆ ಬಲಿ ಅರ್ಪಿಸುವದನ್ನು ನಿಲ್ಲಿಸುತ್ತೇನೆ” ಎಂದು ಯೆಹೋವನು ನುಡಿದನು.

36 “ಮೋವಾಬಿಗಾಗಿ ನಾನು ಬಹಳ ದುಃಖಿತನಾಗಿದ್ದೇನೆ. ಸ್ಮಶಾನಯಾತ್ರೆಯ ಕಾಲದಲ್ಲಿ ಊದುವ ಕೊಳಲಿನಿಂದ ಹೊರಬರುವ ದುಃಖದ ಧ್ವನಿಯಂತೆ ನನ್ನ ಹೃದಯ ಅಳುತ್ತಿದೆ. ಕೀರ್ ಹೆರೆಸಿನ ಜನರಿಗಾಗಿ ನಾನು ದುಃಖಿಸುತ್ತೇನೆ. ಅವರ ಹಣವನ್ನು ಮತ್ತು ಸಂಪತ್ತನ್ನು ಕಿತ್ತುಕೊಳ್ಳಲಾಗಿದೆ.

37 ಪ್ರತಿಯೊಬ್ಬರ ತಲೆಯನ್ನು ಬೋಳಿಸಲಾಗಿದೆ. ಪ್ರತಿಯೊಬ್ಬರ ಗಡ್ಡವನ್ನು ಕತ್ತರಿಸಲಾಗಿದೆ. ಪ್ರತಿಯೊಬ್ಬರ ಕೈಗಳು ಕತ್ತರಿಸಲ್ಪಟ್ಟು ಅವುಗಳಿಂದ ರಕ್ತ ಸುರಿಯುತ್ತಿದೆ. ಪ್ರತಿಯೊಬ್ಬರು ತಮ್ಮ ಸೊಂಟಕ್ಕೆ ದುಃಖಸೂಚಕ ವಸ್ತ್ರಗಳನ್ನು ಸುತ್ತಿಕೊಂಡಿದ್ದಾರೆ.

38 ಮೋವಾಬಿನ ಪ್ರತಿಯೊಂದು ಮಾಳಿಗೆಯ ಮೇಲೂ ಸಾರ್ವಜನಿಕ ಚೌಕಗಳಲ್ಲಿಯೂ ಜನ ಸತ್ತವರಿಗಾಗಿ ಶೋಕಿಸುತ್ತಿದ್ದಾರೆ. ಮೋವಾಬನ್ನು ನಾನು ಬರಿದಾದ ಪಾತ್ರೆಯಂತೆ ಮಾಡಿರುವುದರಿಂದ ದುಃಖ ವ್ಯಾಪಿಸಿದೆ.” ಇದು ಯೆಹೋವನ ನುಡಿ.

39 “ಮೋವಾಬ್ ನುಚ್ಚುನೂರಾಯಿತು. ಜನರು ಕಿರುಚುತ್ತಿದ್ದಾರೆ. ಮೋವಾಬ್ ಶರಣಾಗತವಾಯಿತು. ಮೋವಾಬ್ ಈಗ ನಾಚಿಕೆಪಡುತ್ತಿದೆ. ಜನರು ಮೋವಾಬನ್ನು ತಮಾಷೆ ಮಾಡುತ್ತಾರೆ. ಆದರೆ ಇಲ್ಲಿ ನಡೆದ ಘಟನೆಗಳು ಅವರನ್ನು ಭೀತರನ್ನಾಗಿ ಮಾಡಿವೆ.”

40 ಯೆಹೋವನು ಹೀಗೆನ್ನುತ್ತಾನೆ: “ನೋಡಿ, ಒಂದು ರಣಹದ್ದು ಆಕಾಶದಿಂದ ಎರಗುತ್ತಿದೆ.

41 ಮೋವಾಬಿನ ಪಟ್ಟಣಗಳನ್ನು ಗೆದ್ದುಕೊಳ್ಳಲಾಗುವುದು.

42 ಮೋವಾಬ್ ಜನಾಂಗವನ್ನು ನಾಶಮಾಡಲಾಗುವದು.

43 ಯೆಹೋವನು ಹೀಗೆ ಹೇಳಿದನು:

44 ಜನರು ಅಂಜಿ ಓಡಿಹೋಗುವರು;

45 “ಜನರು ಪ್ರಬಲನಾದ ವೈರಿಯಿಂದ ತಪ್ಪಿಸಿಕೊಂಡು

46 ಮೋವಾಬ್ಯರೇ, ನಿಮಗೆ ಕೇಡು ಕಾದಿದೆ.

47 “ಮೋವಾಬಿನ ಜನರನ್ನು ಸೆರೆಹಿಡಿದುಕೊಂಡು ಹೋಗಲಾಗುವುದು. ಆದರೆ ಭವಿಷ್ಯದಲ್ಲಿ ನಾನು ಮೋವಾಬ್ಯರನ್ನು ಪುನಃ ಕರೆದು ತರುವೆನು” ಇದು ಯೆಹೋವನಿಂದ ಬಂದ ಸಂದೇಶ.

Ler em outra tradução

Comparar lado a lado

Estude este capítulo no WhatsApp

Peça à IA da Bíblia Fala para explicar Jeremias 48, comparar traduções ou montar um estudo — tudo direto pelo WhatsApp.