Isaías 45

ಪವಿತ್ರ ಬೈಬಲ್, ಈಸಿ ಓದುವಿಕೆ ಆವೃತ್ತಿ (KAN2010)

1 ತಾನು ಆರಿಸಿರುವ ಅರಸನಾದ ಸೈರಸನಿಗೆ ಯೆಹೋವನು ಹೇಳುವುದೇನೆಂದರೆ:

2 ಸೈರಸನೇ, ನಿನ್ನ ಸೈನ್ಯವು ಮುನ್ನುಗ್ಗುವದು.

3 ಕತ್ತಲೆಯಲ್ಲಿ ಕೂಡಿಸಿಟ್ಟಿದ್ದ ಐಶ್ವರ್ಯವನ್ನೂ

4 ನಾನು ನನ್ನ ಸೇವಕನಾದ ಯಾಕೋಬನಿಗಾಗಿ ಇದನ್ನೆಲ್ಲಾ ಮಾಡುತ್ತಿದ್ದೇನೆ.

5 ಯೆಹೋವನೆಂಬ ನಾನೊಬ್ಬನೇ ದೇವರು.

6 ನಾನೊಬ್ಬನೇ ದೇವರೆಂದು ಎಲ್ಲರೂ ತಿಳಿದುಕೊಳ್ಳಲಿ ಎಂದು ನಾನು ಇದನ್ನೆಲ್ಲಾ ಮಾಡುತ್ತಿದ್ದೇನೆ.

7 ಬೆಳಕನ್ನೂ ಕತ್ತಲೆಯನ್ನೂ ಉಂಟುಮಾಡಿದವನು ನಾನೇ.

8 “ಆಕಾಶದಲ್ಲಿರುವ ಮೋಡಗಳು ಒಳ್ಳೆಯತನವನ್ನು

9 “ಈ ಜನರನ್ನು ನೋಡು. ತಮ್ಮನ್ನು ಸೃಷ್ಟಿದಾತನೊಂದಿಗೆ ವಾದಿಸುತ್ತಿದ್ದಾರೆ. ನನ್ನೊಂದಿಗೆ ವಾದಿಸುವದನ್ನು ನೋಡಿರಿ! ಅವರು ಒಡೆಯಲ್ಪಟ್ಟ ಮಣ್ಣಿನ ಮಡಿಕೆಯ ತುಂಡುಗಳಂತಿದ್ದಾರೆ. ಒಬ್ಬನು ಮೃದುವಾದ ಜೇಡಿಮಣ್ಣಿನಿಂದ ಮಡಿಕೆಯನ್ನು ಮಾಡುತ್ತಾನೆ. ಆ ಮಡಿಕೆಯು ಕುಂಬಾರನಿಗೆ, ‘ನೀನು ಮಾಡುತ್ತಿರುವುದೇನು?’ ಎಂದು ಪ್ರಶ್ನಿಸುವದಿಲ್ಲ. ತಯಾರಿಸಲ್ಪಟ್ಟ ವಸ್ತುಗಳಿಗೆ ತಯಾರಿಸಿದವನನ್ನು ಪ್ರಶ್ನಿಸುವ ಅಧಿಕಾರವಿಲ್ಲ. ಜನರು ಈ ಜೇಡಿಮಣ್ಣಿನಂತೆ ಇದ್ದಾರೆ.

10 ತಂದೆಯು ಮಕ್ಕಳನ್ನು ಹುಟ್ಟಿಸುತ್ತಾನೆ. ಮಕ್ಕಳು ತಂದೆಯನ್ನು, ‘ನನಗೆ ಜೀವ ಯಾಕೆ ಕೊಟ್ಟೆ?’ ಎಂದು ಕೇಳಲಾಗುವುದಿಲ್ಲ. ಮಕ್ಕಳು ತಮ್ಮ ತಾಯಿಗೆ, ‘ನನ್ನನ್ನು ಯಾಕೆ ಹೆತ್ತದ್ದು ಎಂದು ಕೇಳಲಾಗುವುದಿಲ್ಲ.’”

11 ದೇವರಾದ ಯೆಹೋವನು ಇಸ್ರೇಲರ ಪರಿಶುದ್ಧನಾಗಿದ್ದಾನೆ. ಆತನು ಇಸ್ರೇಲನ್ನು ಸೃಷ್ಟಿಸಿದನು. ಯೆಹೋವನು ಹೇಳುವುದೇನೆಂದರೆ,

12 ಭೂಮಿಯನ್ನು ನಿರ್ಮಿಸಿದವನೂ

13 ನಾನು ಸೈರಸನಿಗೆ ಸುಕಾರ್ಯಗಳನ್ನು ಮಾಡಲು ಶಕ್ತಿಯನ್ನು ಕೊಟ್ಟಿದ್ದೇನೆ.

14 ಯೆಹೋವನು ಹೇಳುವುದೇನೆಂದರೆ, “ಈಜಿಪ್ಟ್ ಮತ್ತು ಇಥಿಯೋಪ್ಯ ಐಶ್ವರ್ಯವುಳ್ಳ ರಾಜ್ಯಗಳಾಗಿವೆ.

15 ದೇವರೇ, ಜನರು ನಿನ್ನನ್ನು ಕಾಣಲಾರರು.

16 ಎಷ್ಟೋ ಜನರು ಸುಳ್ಳುದೇವರುಗಳನ್ನು ರೂಪಿಸಿಕೊಂಡು ನಿರಾಶರಾಗುವರು.

17 ಆದರೆ ಇಸ್ರೇಲು ಯೆಹೋವನಿಂದ ರಕ್ಷಿಸಲ್ಪಡುವದು.

18 ಯೆಹೋವನು ದೇವರಾಗಿದ್ದಾನೆ.

19 ನಾನು ಗುಪ್ತವಾಗಿ ಮಾತನಾಡದೆ ಬಹಿರಂಗವಾಗಿಯೇ ಮಾತನಾಡಿದ್ದೇನೆ.

20 “ಬೇರೆ ದೇಶಗಳಿಂದ ಪಾರಾಗಿ ಬಂದ ಜನರೇ, ಒಟ್ಟಾಗಿ ಸೇರಿಕೊಂಡು ನನ್ನ ಮುಂದೆ ಬನ್ನಿರಿ. (ಈ ಜನರು ಮರದ ವಿಗ್ರಹಗಳನ್ನು ಇಟ್ಟುಕೊಂಡಿದ್ದಾರೆ. ತಮ್ಮನ್ನು ರಕ್ಷಿಸಲಾರದ ವಿಗ್ರಹಕ್ಕೆ ಅವರು ಪ್ರಾರ್ಥಿಸುತ್ತಿದ್ದಾರೆ. ಅವರು ಮಾಡುವದು ಅವರಿಗೇ ತಿಳಿಯದು.

21 ನನ್ನ ಬಳಿಗೆ ಬರಲು ಅವರಿಗೆ ಹೇಳು. ತಾವು ವಿಗ್ರಹಗಳನ್ನು ಯಾಕೆ ನಂಬುತ್ತಾರೆಂದು ನನ್ನೊಂದಿಗೆ ವಾದಿಸಲಿ.)

22 ದೂರದೇಶದಲ್ಲಿರುವ ಜನರೇ, ನೀವು ಸುಳ್ಳುದೇವರನ್ನು ಅವಲಂಬಿಸುವದನ್ನು ನಿಲ್ಲಿಸಿರಿ. ನನ್ನನ್ನು ಹಿಂಬಾಲಿಸಿ ರಕ್ಷಣೆ ಹೊಂದಿರಿ. ನಾನೇ ದೇವರು, ಬೇರೆ ದೇವರುಗಳೇ ಇಲ್ಲ. ನಾನೊಬ್ಬನೇ ದೇವರು.

23 “ನನ್ನ ಪರಾಕ್ರಮದಿಂದ ನಾನು ವಾಗ್ದಾನ ಮಾಡುತ್ತೇನೆ. ನನ್ನ ಆಜ್ಞೆಯು ನ್ಯಾಯವಾದದ್ದೂ ನೀತಿಯುಳ್ಳದ್ದೂ ಆಗಿದೆ. ಇಂಥದ್ದು ನಾನು ಆಜ್ಞಾಪಿಸಿದಂತೆಯೇ ಸಂಭವಿಸುವದು. ಎಲ್ಲಾ ಜನರು ನನ್ನ ಮುಂದೆ ಅಡ್ಡಬೀಳುವರೆಂದು ನಾನು ವಾಗ್ದಾನ ಮಾಡುತ್ತೇನೆ. ಪ್ರತಿಯೊಬ್ಬನೂ ನನ್ನನ್ನು ಹಿಂಬಾಲಿಸಲು ಪ್ರತಿಜ್ಞೆ ಮಾಡುವನು.

24 ಜನರು ಹೀಗೆನ್ನುವರು: ‘ಶಕ್ತಿಯೂ, ಒಳ್ಳೆಯತನವೂ ಯೆಹೋವನಿಂದಲೇ ಬರುವದು.’”

25 ಇಸ್ರೇಲರು ಧರ್ಮದಲ್ಲಿ ನಡೆಯುವಂತೆ ಯೆಹೋವನು ಮಾಡುವನು. ಜನರು ಯೆಹೋವನ ಬಗ್ಗೆ ಬಹಳವಾಗಿ ಹೆಚ್ಚಳಪಡುವರು.

Ler em outra tradução

Comparar lado a lado

Estude este capítulo no WhatsApp

Peça à IA da Bíblia Fala para explicar Isaías 45, comparar traduções ou montar um estudo — tudo direto pelo WhatsApp.